ಪಪುವ ನ್ಯೂಗಿನಿಯಲ್ಲಿ ಪ್ರಬಲ ಭೂಕಂಪ: ಕನಿಷ್ಠ 30 ಸಾವು
.jpg)
ಸಿಡ್ನಿ (ಆಸ್ಟ್ರೇಲಿಯ), ಫೆ. 27: ಪಪುವ ನ್ಯೂಗಿನಿಯ ಪರ್ವತ ಪ್ರದೇಶದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.
ಪೆಸಿಫಿಕ್ ಸಮುದ್ರದ ದ್ವೀಪವಾಗಿರುವ ಪಪುವ ನ್ಯೂಗಿನಿಯ ಎಂಗ ಪ್ರಾಂತದಲ್ಲಿ ಸೋಮವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.5ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದನ್ನು ಸ್ಮರಿಸಬಹುದಾಗಿದೆ. ಭೂಕಂಪದ ಬಳಿಕ ಈ ವಲಯದಲ್ಲಿ ಎರಡು ಪ್ರಬಲ ಕಂಪನಗಳೂ ಸಂಭವಿಸಿವೆ.
ಭೂಕಂಪದಿಂದಾಗಿ ವ್ಯಾಪಕವಾಗಿ ಫೋನ್ ತಂತಿಗಳು ಕಡಿದು ಬಿದ್ದಿವೆ.
ಸದರ್ನ್ ಹೈಲ್ಯಾಂಡ್ಸ್ ಪ್ರಾಂತದ ರಾಜಧಾನಿ ಮೆಂಡಿಯಲ್ಲಿ ಕನಿಷ್ಠ 13 ಮಂದಿ ಹಾಗೂ ಸಮೀಪದ ಕುಟುಬು ಮತ್ತು ಬೊಸವೆಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ‘ಪಿಎನ್‌ಜಿ ಪೋಸ್ಟ್ ಕೊರಿಯರ್’ ಪತ್ರಿಕೆ ವರದಿ ಮಾಡಿದೆ.
ಭಾರೀ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿದ್ದು, ಸುಮಾರು 300 ಮಂದಿ ಗಾಯಗೊಂಡಿದ್ದಾರೆ ಹಾಗೂ ಆಸ್ತಿಪಾಸ್ತಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಪತ್ರಿಕೆ ಹೇಳಿದೆ.
Next Story





