ಮಾ.5ರಿಂದ 22ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು, ಫೆ.27: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ.5, 6, 7ರಂದು ಜರಗಲಿರುವ 22ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಮಾ. 7ರಂದು ಅಪರಾಹ್ನ 3 ರಿಂದ 4 ಗಂಟೆಗೆ ಸನ್ಮಾನ ಮಾಡಿ ಗೌರಸಲಾಗುವುದು.
ಸಮ್ಮೇಳನದಲ್ಲಿ ಗೌರವಿಸಲಾಗುವ ಸಾಧಕರು: ಪ್ರೊ. ಅಭಯ ಕುಮಾರ್, (ಜಾನಪದ ವಿದ್ವಾಂಸರು), ಜಾಕೆ ಮಾಧವ ಗೌಡ (ಸಹಕಾರ ಮತ್ತು ಸಮಾಜ ಸೇವೆ.) ಪ್ರೊ. ಎ.ವಿ.ನಾರಾಯಣ, ಪುತ್ತೂರು (ಶಿಕ್ಷಣ, ಸಂಘಟನೆ), ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಪುತ್ತೂರು (ಸಾಹಿತ್ಯ), ಎ. ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿ, (ಶಿಕ್ಷಣ), ಇ.ಎಸ್. ಗಫೂರ್ ವಿಟ್ಲ, ಬಂಟ್ವಾಳ (ಪುಸ್ತಕ ಪರಿಚಾರಿಕೆ), ವಿಜಯಲಕ್ಷ್ಮೀ ವಳಲಂಬೆ, ಪೆರ್ವಾಜೆ, (ಮೂಲಿಕ ವೈದ್ಯೆ), ಮಹಾಬಲ ಕಲ್ಮಡ್ಕ, ಸುಳ್ಯ (ಪ್ರಸಾಧನ ಮುಖವರ್ಣಿಕೆ). ಪುತ್ತೂರು ವಿಶ್ವನಾಥ ನಾಯಕ್, (ಮೃದಂಗ ವಾದನ) ಶಿವರಾಮ ಏನೆಕಲ್, ಬಿಳಿನೆಲೆ (ಕ್ರೀಡೆ), ಜೆ.ಕೆ.ವಸಂತ, ಸುಳ್ಯ, ನಿವೃತ್ತ ಸೇನಾಧಿಕಾರಿ (ವಾಯು ಸೇನೆ), ದೇಜಪ್ಪ ಸರಪಾಡಿ, ಬಂಟ್ವಾಳ (ಜನಪದ), ನರೇಂದ್ರ ಕುಮಾರ್ , ಧರ್ಮಸ್ಥಳ (ಯಕ್ಷಗಾನ), ಸುಜನಾ ಸುಳ್ಯ,(ಹಿಯ ಯಕ್ಷಗಾನ ಕಲಾವಿದರು) ವಿಘ್ನ ರಾಜ ಕನ್ಯಾಡಿ, ಬೆಳ್ತಂಗಡಿ (ಹಸ್ತಪ್ರತಿ ನಿರ್ವಹಣೆ), ಗೋಪಾಲಕೃಷ್ಣ ಪ್ರಭು, ಸುರತ್ಕಲ್ (ಜನಪದ ಕಂಬಳ), ಮೂರ್ತಿ ದೇರಾಜೆ, ವಿಟ್ಲ (ರಂಗಭೂಮಿ), ಅಲಂಗಾರು ಈಶ್ವರ ಭಟ್, ಮೂಡಬಿದ್ರೆ (ಧಾರ್ಮಿಕ ಕ್ಷೇತ್ರ), ಡಾ. ಸುರೇಶ್ ರಾವ್ ಮುಂಬೈ (ಹೊರನಾಡ ಕನ್ನಡ ಸೇವೆ), ಪಿ.ಬಿ. ಹರೀಶ್ ರೈ (ಪತ್ರಿಕೋದ್ಯಮ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಎಂ. ಮೀನಾಕ್ಷಿ ಗೌಡ (ಸಾಹಿತ್ಯ ಸಂಘಟನೆ), ಜಯಪ್ರಕಾಶ್ ಮೋಂಟಡ್ಕ (ರಂಗಭೂಮಿ) ಪ್ರಸಾದ್ ಮುನಿಯಂಗಳ (ವಾಸ್ತು), ಅನಂತ ಅಂಗಣ (ಕೃಷಿ), ಕೆ. ತನಿಯಪ್ಪ ಕೋಡಿಕಜೆ (ಜಾನಪದ), ಕುಂಬ್ಳೆ ಶ್ರೀಧರ್ ರಾವ್, (ಯಕ್ಷಗಾನ), ಮೈರ್ಪಾಡಿ ಶಂಕರನಾರಾಯಣ, ಪಣಂಬೂರು (ಯಕ್ಷಗಾನ), ಪಡ್ಡಂಬೈಲು ವೆಂಕಟರಮಣ ಗೌಡ (ಸಮಾಜ ಸೇವೆ), ಎ.ಎನ್.ಎಂ.ಎಚ್. ಇಸ್ಮಾಯೀಲ್, ಬೆಂಗಳೂರು (ಪತ್ರಿಕೋದ್ಯಮ)ಎಂ.ಪುರುಷೋತ್ತಮ ಗೌಡ ಮಾಣಿಬೆಟ್ಟು (ಸಮಾಜ ಸೇವೆ) ಪಿ.ಎಸ್. ಕಾರಂತ, ವಾಪಿ ಗುಜರಾತ್ (ಹೊರನಾಡ ಕನ್ನಡ ಸೇವೆ) ಬಿ. ಬಾಲಚಂದ್ರ ರಾವ್ ನವಿಮುಂಬಯಿ (ಹೊರನಾಡ ಕನ್ನಡ ಸೇವೆ).
ಸಂಸ್ಥೆಗಳು: ಅಬ್ಬಕ್ಕ ರಾಣಿ ತುಳು ಅಧ್ಯಯನ ಕೇಂದ್ರ (ರಿ) ಬಂಟ್ವಾಳ, ರಂಗ ಕರ್ಮಿ ಬಿ.ವಿ. ಕಾರಂತ ರಂಗ ಭೂಮಿಕ ಟ್ರಸ್ಟ್ (ರಿ) ಮಂಚಿ, ಸುಬ್ರಹ್ಮಣ್ಯ ಸಭಾ ಸದನ (ರಿ) ಮಂಗಳೂರು, ಕೊಡಿಯಾಲ ಖಬರ ಕೊಂಕಣಿ ಪತ್ರಿಕೆ, ಮಂಗಳೂರು, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಮೂಡಬಿದಿರೆ ಇವುಗಳನ್ನು ಪ್ರಶಸ್ತಿ ನೀಡಿ ಗೌರಸಲಾಗುವುದು.
ಮೂಡಬಿದ್ರೆಯ ಆಳ್ವಾಸ್ ದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮತ್ತು ಸುಳ್ಯದ ಅಕಾಡಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅವರು ಸನ್ಮಾನ ಮಾಡಲಿದ್ದಾರೆ ಎಂದು ದ.ಕ. ಜಿಲ್ಲಾ ಕನ್ನಡ ಸಾತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಪ್ರಕಟನೆ ತಿಳಿಸಿದೆ.







