Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹಾಲು ಕಂದಲು

ಹಾಲು ಕಂದಲು

ರಂಜಾನ್ ದರ್ಗಾರಂಜಾನ್ ದರ್ಗಾ27 Feb 2018 11:58 PM IST
share
ಹಾಲು ಕಂದಲು

ಹಾಲು ಕಂದಲು, ತುಪ್ಪದ ಮಡಕೆಯ

ಬೋಡು ಮುಕ್ಕೆನಬೇಡ.

ಹಾಲು ಸಿಹಿ, ತುಪ್ಪಕಮ್ಮನೆ: ಲಿಂಗಕ್ಕೆ ಬೋನ.

ಕೂಡಲಸಂಗನ ಶರಣರ

ಅಂಗಹೀನರೆಂದಡೆ ನಾಯಕನರಕ.

                                             -ಬಸವಣ್ಣ

ಬಳಕೆ ಮಾಡುತ್ತ ಮಾಡುತ್ತ ಹಾಲಿನ ಪಾತ್ರೆಗಳು ಬೋಳಾಗುತ್ತವೆ; ತುಪ್ಪದ ಗಡಿಗೆಗಳು ಮುಕ್ಕಾಗುತ್ತವೆ. ಆದರೆ ಹೈನುಗಾರಿಕೆಯ ಕಾಯಕದಲ್ಲಿ ತಲ್ಲೀನರಾದ ರೈತಾಪಿ ಮಹಿಳೆಯರು ಆ ಪಾತ್ರೆ ಮತ್ತು ತುಪ್ಪದ ಗಡಿಗೆಗಳನ್ನು ಬಿಸಾಕುವುದಿಲ್ಲ. ಪಾತ್ರೆಗಳು ಬೋಳಾದರೂ ಹಾಲಿನ ಸಿಹಿ ಕಡಿಮೆಯಾಗುವುದಿಲ್ಲ. ಗಡಿಗೆಗಳು ಮುಕ್ಕಾದರೂ ತುಪ್ಪದ ಸುವಾಸನೆ ಹೋಗುವುದಿಲ್ಲ. ಬೋಳಾದ ಪಾತ್ರೆಯ ಹಾಲು ಮತ್ತು ಮುಕ್ಕಾದ ಗಡಿಗೆಯ ತುಪ್ಪಕೂಡ ಲಿಂಗಕ್ಕೆ ನೈವೇದ್ಯವಾಗುತ್ತವೆ. ಹಾಲು ತುಪ್ಪಮುಖ್ಯ. ಪಾತ್ರೆ ಬೋಳು ಮತ್ತು ಗಡಿಗೆ ಮುಕ್ಕು ಎನ್ನುತ್ತ ಕೂಡುವುದು ಅರ್ಥಹೀನ. ಪಾತ್ರೆಯಲ್ಲಿ ಹಾಲು ಕಾಯಿಸುವುದರಿಂದ ಅದರ ಹೊರಮೈ ಕಪ್ಪಾಗುತ್ತ ಹೋಗಿರುತ್ತದೆ. ಅದು ಹಾಲು ಕಾಯಿಸುವ ಪಾತ್ರೆಯಾಗಿಯೇ ಉಳಿದಿರುತ್ತದೆ. ಹಾಲಿನ ಪಾತ್ರೆ ಬೋಳಾದಾಗಲೆಲ್ಲ ಬದಲಾಯಿಸುವುದು ಅವಾಸ್ತವವಾಗುತ್ತದೆ. ಇದನ್ನು ರೈತಾಪಿ ಜನ ಚೆನ್ನಾಗಿ ಬಲ್ಲರು. ಅದೇರೀತಿ ತುಪ್ಪದ ಗಡಿಗೆಗಳು ಬೋಳಾದಾಗಲೆಲ್ಲ ಬದಲಾಯಿಸಿದಾಗ ಹೊಸ ಗಡಿಗೆಗಳು ತುಪ್ಪವನ್ನು ಹೀರುತ್ತಲೇ ಇರುತ್ತವೆ. ಹೀಗಾಗಿ ತುಪ್ಪವನ್ನು ಶೇಖರಿಸಲು ಹಳೆಗಡಿಗೆ ಯೋಗ್ಯವಾದುದು. ಹೀಗೆ ಜನ ಅನುಭವದ ಮೂಲಕ ಇಂಥದ್ದನ್ನೆಲ್ಲ ಚೆನ್ನಾಗಿ ಅರಿತುಕೊಂಡು ಬಾಳುತ್ತಿರುತ್ತಾರೆ.

ಶರಣರ ಸಮತಾ ಚಳವಳಿಯಲ್ಲಿ ಎಲ್ಲ ಜಾತಿ ಮತ್ತು ವರ್ಗಗಳ ಕಾಯಕಜೀವಿಗಳು ಭಾಗಿಯಾದಂತೆ ಅಂಗವಿಕಲರೂ ಭಾಗಿಯಾಗಿದ್ದರು. ಅವರು ಅಂಗವಿಕಲರಾದರೂ ಮೈಗಳ್ಳರಲ್ಲ. ಕಾಯಕವನ್ನು ವ್ರತದಂತೆ ಸ್ವೀಕರಿಸಿದವರು. ಸ್ವಾವಲಂಬಿಗಳಾಗಿ ಬದುಕುವಂಥವರು. ಅವರ ಮನಸ್ಸು ಕೂಡ ಇತರ ಶರಣರ ಹಾಗೆ ಹಾಲಿನಂತೆ ಸಿಹಿ; ತುಪ್ಪದಂತೆ ಘಮಘಮಿಸುವಂಥದ್ದು. ಅಂದರೆ ಅವರ ಸಂಬಂಧ ಕೂಡ ಇತರ ಶರಣರ ಸಂಬಂಧದಂತೆ ಮನಸ್ಸಿಗೆ ಮುದ ನೀಡುವಂಥದ್ದು. ಅಂಗವಿಕಲರನ್ನು ಗೌರವದಿಂದ ಕಾಣಬೇಕೆಂದು ಇಂದು ಪ್ರಜ್ಞಾವಂತರನೇಕರು ಹೇಳುತ್ತಿದ್ದಾರೆ. ಆದರೆ ಬಸವಣ್ಣನವರು 12ನೇ ಶತಮಾನದಲ್ಲೇ ಅಂಗವಿಕಲರ ಬಗ್ಗೆಯೂ ಚಿಂತನೆ ಮಾಡಿದ್ದಾರೆ. ಅವರ ಮನಸ್ಸಿಗೆ ನೋವಾಗದಂತೆ ಇತರರು ನಡೆದುಕೊಳ್ಳುವುದು ಸಾಮಾಜಿಕ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ. ಅಂಗಹೀನರು ಚೈತನ್ಯಹೀನರಲ್ಲ ಎಂಬುದನ್ನು ಹಾಲು ತುಪ್ಪದ ಉದಾಹರಣೆಯೊಂದಿಗೆ ತಿಳಿಹೇಳಿದ್ದಾರೆ.

ನಮ್ಮ ಹಳ್ಳಿಗಳಲ್ಲಿ ಕುಂಟಸಿಂಗರೀಗೌಡ, ಕುಡ್ಡಕಲ್ಲಪ್ಪ, ಸೊಟ್ಟಗೈ ಗಂಗವ್ವ, ಮೊಂಡಗೈ ಭೀಮವ್ವ ಎಂದು ಕರೆಯುವುದು ಇಂದಿಗೂ ರೂಢಿಯಲ್ಲಿದೆ. ಹೀಗೆ ಅಂಗವೈಕಲ್ಯವೆಂಬುದು ಅಂಗವಿಕಲರ ಹೆಸರಿನ ಭಾಗವಾಗಿ ಹೋಗಿದೆ. ಮುಂದೆ ಹುಟ್ಟುವ ಪೀಳಿಗೆಗೆ ಅಂಗವಿಕಲ ಪೂರ್ವಜರ ಹೆಸರಿಡುವಾಗ ಕೂಡ ಅವು ಹೆಸರಿನ ಭಾಗವಾಗಿ ಉಳಿದುಕೊಳ್ಳುತ್ತಿವೆ. ಬಸವಪ್ರಜ್ಞೆ ಇದ್ದಲ್ಲಿ ಇವೆಲ್ಲ ಮರೆಯಾಗುತ್ತವೆ.

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X