Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹಂದಟ್ಟು ದೈವಸ್ಥಾನದಲ್ಲಿ ದಲಿತ ಅರ್ಚಕರು,...

ಹಂದಟ್ಟು ದೈವಸ್ಥಾನದಲ್ಲಿ ದಲಿತ ಅರ್ಚಕರು, ಪರ್ಯಾಯ ದೇವಸ್ಥಾನ ನಿರ್ಮಾಣಕ್ಕೆ ಯತ್ನ: ದೂರು

ದಲಿತರ ಕುಂದುಕೊರತೆ ಸಭೆ

ವಾರ್ತಾಭಾರತಿವಾರ್ತಾಭಾರತಿ28 Feb 2018 8:55 PM IST
share
ಹಂದಟ್ಟು ದೈವಸ್ಥಾನದಲ್ಲಿ ದಲಿತ ಅರ್ಚಕರು, ಪರ್ಯಾಯ ದೇವಸ್ಥಾನ ನಿರ್ಮಾಣಕ್ಕೆ ಯತ್ನ: ದೂರು

ಉಡುಪಿ, ಫೆ.28: ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಹಂದಟ್ಟುವಿನ ದಾನಗುಂದುನಲ್ಲಿ ಹಲವು ಶತಮಾನಗಳ ಇತಿಹಾಸವಿರುವ ಅಮ್ಮ ಮಲಸಾವರಿ ಸಪರಿವಾರ ದೈವಸ್ಥಾನಕ್ಕೆ ದಲಿತರು ಅರ್ಚಕರಾಗಿ ತಲೆತಲಾಂತರದಿಂದ ಪೂಜಿಸಿ ಕೊಂಡು ಬರುತಿದ್ದು, ಕಳೆದ ಕೆಲವು ಸಮಯದಿಂದ ಊರಿನ ಕೆಲವರು ದಲಿತರಿಂದ ತೀರ್ಥ ಪ್ರಸಾದ ತೆಗೆದುಕೊಳ್ಳಲು ನಿರಾಕರಿಸಿ ಅಲ್ಲೇ ಸಮೀಪದಲ್ಲಿ ಪ್ರತ್ಯೇಕ ಅದೇ ಹೆಸರಿನ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದ ದಲಿತರ ಕುಂದು-ಕೊರತೆ ಸಭೆಯಲ್ಲಿ ದೂರು ನೀಡಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಕೀಲರಾದ ಮಂಜುನಾಥ ಗಿಳಿಯಾರು, ನೂರಾರು ವರ್ಷಗಳಿಂದ ಈ ದೈವಸ್ಥಾನಕ್ಕೆ ದಲಿತರು ಅರ್ಚಕರಾಗಿದ್ದು, ಬ್ರಾಹ್ಮಣರು (ಹಂದಟ್ಟುವಿನ ಹಂದೆ ಕುಟುಂಬ) ಮೊಕ್ತೇಸರರಾಗಿದ್ದರು. ಈ ದೈವಸ್ಥಾನವನ್ನು ಊರಿನ ಎಲ್ಲಾ ಜಾತಿಬಾಂಧವರು ನಂಬಿಕೊಂಡು ಬಂದಿದ್ದರು ಎಂದವರು ವಿವರಿಸಿದರು.

ಸುಮಾರು ಐದಾರು ವರ್ಷಗಳ ಹಿಂದೆ ಈ ದೈವಸ್ಥಾನದ ಆಡಳಿತ ನಿರ್ವಹಣೆಗೆ 9 ಮಂದಿಯ ಟ್ರಸ್ಟ್‌ನ್ನು ಸ್ಥಾಪಿಸಲಾಗಿದೆ. ಇದರಲ್ಲಿ ನಾಲ್ವರು ದಲಿತರು ಸದಸ್ಯರಾಗಿದ್ದಾರೆ. ಇತ್ತೀಚೆಗೆ ಒಂದೆರಡು ತಿಂಗಳಿನಿಂದ ಊರಿನ ಕೆಲವರು ದಲಿತರು ಇಲ್ಲಿ ಪೂಜೆ ಮಾಡುವುದಕ್ಕೆ ಆಕ್ಷೇಪ ಹಾಗೂ ದಲಿತ ಅರ್ಚಕರಿಂದ ತೀರ್ಥಪ್ರಸಾದ ಸ್ವೀಕರಿಸುವುದಕ್ಕೆ ನಿರಾಕರಿಸುತಿದ್ದಾರೆ ಎಂದು ಗಿಳಿಯಾರು ದೂರಿದರು.

ಇವರೆಲ್ಲ ಸೇರಿ ಈಗಿರುವ ದೈವಸ್ಥಾನದಿಂದ 400ಮೀ. ದೂರದಲ್ಲಿ ಅದೇ ದೇವರ ಹೆಸರಿನಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಸಿದ್ಧತೆಯನ್ನು ನಡೆಸುತಿದ್ದು, ಇದರಿಂದ ಊರಿನ ಸೌಹಾರ್ದತೆ ಕದಡುವ ಸಾದ್ಯತೆ ಇದೆ. ದೈವಸ್ಥಾನಕ್ಕೆ ಸೇರಿದ ಚಿನ್ನಾಭರಣ ಹಾಗೂ ಪಾತ್ರೆಪಗಡಿಗಳು ಸಮೀಪದ ಊರಿನವರೊಬ್ಬರ ವಶದಲ್ಲಿದೆ. ಅವರು ಅದನ್ನು ದೈವಸ್ಥಾನಕ್ಕೆ ಇನ್ನೂ ಅವುಗಳನ್ನು ಮರಳಿಸಿಲ್ಲ ಎಂದೂ ಅವರು ಹೇಳಿದರು.

ಗ್ರಾಮದದಲಿತರು ಪ್ರತ್ಯೇಕ ದೇವಸ್ಥಾನದ ಪ್ರಯತ್ನವನ್ನು ವಿರೋಧಿಸುತಿದ್ದಾರೆ. ಇದರ ವಿರುದ್ಧ ಈಗಾಗಲೇ ಗ್ರಾಪಂ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಂಬಂಧಿತ ಇತರ ಇಲಾಖೆಗಳಿಗೆ ದೂರು ನೀಡಲಾಗಿದೆ. ಜಾತಿ ಕಾರಣಕ್ಕಾಗಿ ನಡೆದಿರುವ ಇಂಥ ಪ್ರಯತ್ನವನ್ನು ತಡೆದು ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕು ಎಂದು ಗಿಳಿಯಾರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರಗಿ, ವಿಷಯದ ಕುರಿತು ಟ್ರಸ್ಟ್‌ನ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಇಂದಿನ ಸಭೆಯಲ್ಲಿ ಪೊಲೀಸ್ ಇಲಾಖೆಗೆ ನೇರವಾಗಿ ಸಂಬಂಧಿಸಿದ್ದಕ್ಕಿಂತ ಅಧಿಕ ದೂರುಗಳು ಇತರ ಇಲಾಖೆಗಳ ಕುರಿತಂತೆ ಕೇಳಿಬಂದವು. ದೂರುಗಳ ಕುರಿತಂತೆ ಆಯಾ ಇಲಾಖೆಗಳಿಗೆ ಪತ್ರ ಬರೆದು ಗಮನ ಸೆಳೆಯುವುದನ್ನಷ್ಟೇ ತಾವು ಮಾಡಲು ಸಾಧ್ಯ ಎಂದು ಎಸ್ಪಿ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಕುಡಿಯುವ ನೀರು ಮಾಲಿನ್ಯ:   ಕುಕ್ಕೆಹಳ್ಳಿ ಗ್ರಾಪಂನ ಕಮಾಲಿಮಜಲುವಿನಲ್ಲಿ ಊರಿನವರ ಪ್ರತಿರೋಧದ ನಡುವೆಯೇ ಕಾರ್ಯನಿರ್ವಹಿಸುತ್ತಿರುವ ಫಿಶ್‌ಮಿಲ್‌ನಿಂದ ಪರಿಸರದ ಕುಡಿಯುವ ನೀರು ಸಂಪೂರ್ಣ ಕಲುಷಿತಗೊಂಡಿದೆ. 70-75 ದಲಿತರ ಮನೆಯ ಬಾವಿಯ ನೀರು ಕುಡಿಯಲು ಸಾಧ್ಯವಿಲ್ಲದಷ್ಟು ಕಲುಷಿತಗೊಂಡಿದ್ದು, 750-800 ಮಂದಿ ಕುಡಿಯುವ ಹಾಗೂ ನಿತ್ಯಬಳಕೆಯ ನೀರಿಗಾಗಿ ಪರದಾಡುವಂತಾಗಿದೆ ಎಂದು ದೂರಿದರು.

ಬಾವಿಯ ನೀರಿನ ವೈಜ್ಞಾನಿಕ ಪರೀಕ್ಷೆಯಿಂದ ಕುಡಿಯಲು ಅದು ಅನರ್ಹ ಎಂದು ವರದಿ ಬಂದಿದೆ. ಇದರೊಂದಿಗೆ ಸೇವಿಸುವ ಗಾಳಿಯ ಮಲೀನ ಗೊಂಡಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಇದಕ್ಕೆ ಉತ್ತರಿಸಿದ ಲಕ್ಷ್ಮಣ್ ನಿಂಬರಗಿ, ಈ ಪ್ರದೇಶದ ಬೀಟ್ ಪೊಲೀಸರನ್ನು ಕಳುಹಿಸಿ ವರದಿ ತರಿಸುವಂತೆ ಹಾಗೂ ವಿವಿಧ ಇಲಾಖೆಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.

ಹೆಬ್ರಿ ಗ್ರಾಪಂ ವ್ಯಾಪ್ತಿಯ ನಂಚಾರು ಮಿಯಾರುವಿನಲ್ಲಿ ನವಯುಗ ಜಲ್ಲಿ ಕ್ರಷರ್‌ನ ಪರವಾನಿಗೆ ಅವಧಿ ಕಳೆದ ಜನವರಿ ತಿಂಗಳಲ್ಲೇ ಮುಗಿದಿದ್ದರೂ, ಈಗಲೂ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವನಾಥ್ ಪೇತ್ರಿ ದೂರಿದರು. ಇದು ಕಾನೂನಿಗೆ ವಿರೋಧವಾಗಿ ಕಾರ್ಯನಿರ್ವಹಿಸುತಿದ್ದ, 50ಮೀ. ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ದಲಿತರ ಮನೆ, ಶಾಲೆಗಳಿವೆ ಎಂದರು.

ಗಂಗೊಳ್ಳಿಯ ಮಾಂಕಾಳಿ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಅಜಲು ಪದ್ಧತಿಯನ್ನು ಅನುಕರಿಸಲಾಗಿದೆ ಎಂದು ಚಂದ್ರಮ ತಲ್ಲೂರು ದೂರಿದರು. ತಲ್ಲೂರು ಕೋಟೆಬಾಗಿಲು ಅಂಗನವಾಡಿಯಲ್ಲಿ ಸಂಜೆ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಹೊಸಾಡು ಗ್ರಾಪಂನ ಅಧ್ಯಕ್ಷರು ದಲಿತರ ಮನೆಗೆ ಹೋಗುವ ದಾರಿಯನ್ನು ನೀಡದೇ ದಿಗ್ಭಂಧನ ವಿಧಿಸಿದ್ದಾರೆ ಎಂದೂ ಅವರು ಎಸ್ಪಿ ಬಳಿ ದೂರಿದರು. ಈಬಗ್ಗೆ ಕ್ರಮದ ಭರವಸೆಯನ್ನು ಅವರು ನೀಡಿದರು.

ಮರಳುಗಾರಿಕೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳ ವಿರುದ್ಧ ಅಕ್ರಮದ ದೂರು ಸಲ್ಲಿಸಿದ ನಮಗೆ ಕೆಲವರಿಂದ ಬೆದರಿಕೆ ಇದೆ ಎಂದು ಉದಯಕುಮಾರ್ ತಲ್ಲೂರು ದೂರಿದರು. ಮರಳುಗಾರಿಕೆಗೆ ಜಿಲ್ಲೆಯ ಹೊರಗಿನಿಂದ ಎಲ್ಲಾ ಕಾರ್ಮಿಕರ ಮಾಹಿತಿಗಳನ್ನು ಸಂಗ್ರಹಿಸಿ ಡಾಟಾಬೇಸ್ ಸಿದ್ಧಪಡಿಸಬೇಕೆಂದು ನಿಂಬರಗಿ ಅಧಿಕಾರಿಗಳಿಗೆ ಸೂಚಿಸಿದರು.

ಸಿದ್ಧಾಪುರದ ಅಟೋ ನಿಲ್ದಾಣದಲ್ಲಿ ಇಬ್ಬರು ದಲಿತರ ಅಟೋರಿಕ್ಷಾಗಳಿಗೆ ನಿಲ್ಲಲು ಗ್ರಾಪಂ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಿರುವುದರತ್ತ ವಾಸುದೇವ ಅವರು ಎಸ್ಪಿಯವರ ಗಮನ ಸೆಳೆದರು. ಇಬ್ಬರ ನಂತರ ಬಂದವರಿಗೂ ಅದೇ ನಿಲ್ದಾಣದಲ್ಲಿ ನಿಲ್ಲಲು ಅವಕಾಶ ನೀಡಲಾಗಿದ್ದು, ದಲಿತರೆಂಬ ಕಾರಣಕ್ಕೆ ಇಬ್ಬರು ಚಾಲಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಚಂದ್ರ ಶೆಟ್ಟಿ ಎಂಬವರು ಇವರಿಗೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ವಾಸುದೇವ ಹೇಳಿದರು.

ಸಭೆಯಲ್ಲಿ ಎಎಸ್ಪಿ ಕುಮಾರಚಂದ್ರ ಅಲ್ಲದೇ, ಡಿವೈಎಸ್ಪಿಗಳು, ವಿವಿಧ ವೃತ್ತಗಳ ಸಿಪಿಐಗಳು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X