ಸಿರಿಯ: ಇನ್ನೂ ಜಾರಿಗೆ ಬಾರದ ಯುದ್ಧವಿರಾಮ

ಬೈರೂತ್, ಫೆ. 28: ವಿಶ್ವಸಂಸ್ಥೆ ಅಂಗೀಕರಿಸಿರುವ ಯುದ್ಧವಿರಾಮದ ಹೊರತಾಗಿಯೂ ಸಿರಿಯದ ರಾಜಧಾನಿ ಡಮಾಸ್ಕಸ್‌ನ ಉಪನಗರ ಪೂರ್ವ ಘೌಟ ಕಾಳಗ ಮುಂದುವರಿದಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಬಂಡುಕೋರರೊಂದಿಗೆ ಸೆಣಸುತ್ತಿರುವ ಸಿರಿಯ ಸರಕಾರಿ ಪಡೆಗಳು ಮತ್ತು ಸಿರಿಯ ಸರಕಾರದ ಪರವಾಗಿ ಹೋರಾಡುತ್ತಿರುವ ಖಾಸಗಿ ಪಡೆಗಳು ಬುಧವಾರದ ವೇಳೆಗೆ ಮೇಲುಗೈ ಪಡೆದಿವೆ ಎನ್ನಲಾಗಿದೆ.
ಬಂಡುಕೋರರ ಭದ್ರಕೋಟೆಯ ಪೂರ್ವದ ತುದಿಯಲ್ಲಿರುವ ಹಾಶ್ ಅಲ್-ಡವಾಹಿರಿ ಪ್ರದೇಶದತ್ತ ಸರಕಾರಿ ಪಡೆಗಳು ಮುಂದುವರಿದಿವೆ ಎಂದು ವೀಕ್ಷಣಾಲಯ ತಿಳಿಸಿದೆ.
ಪೂರ್ವ ಘೌಟದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರತಿ ದಿನ 5 ಗಂಟೆ ಯುದ್ಧವಿರಾಮ ಪಾಲಿಸಬೇಕೆಂಬ ಪ್ರಸ್ತಾಪವನ್ನು ರಶ್ಯ ಮಂಡಿಸಿದೆ. ಆದರೆ, ಅದು ಮಂಗಳವಾರವೇ ಮುರಿದುಬಿದ್ದಿದೆ.
Next Story





