ಮ.ಪ್ರದೇಶ ಉಪಚುನಾವಣೆ: 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ; ಬಿಜೆಪಿಗೆ ಮುಖಭಂಗ
ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧದ ಯುದ್ಧ ಗೆದ್ದ ಸಿಂಧಿಯಾ

ಭೋಪಾಲ್, ಫೆ.28: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮುಂಗೋಲಿ ಹಾಗು ಕೊಲಾರಸ್ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಫೆ.24ರಂದು ಈ ಎರಡೂ ಕ್ಷೇತ್ರಗಳಿಗೂ ಚುನಾವಣೆ ನಡೆದಿತ್ತು. ಮುಂಗೋಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬ್ರಜೇಂದ್ರ ಸಿಂಗ್ ಯಾದವ್ ಬಿಜೆಪಿಯ ಬಾಯ್ ಸಾಹಬ್ ಯಾದವ್ ರನ್ನು 2124 ಮತಗಳಿಂದ ಮಣಿಸಿದ್ದರೆ, ಕೊಲಾರಸ್ ನಲ್ಲಿ ಕಾಂಗ್ರೆಸ್ ನ ಮಹೇಂದ್ರ ಸಿಂಗ್ ಯಾದವ್ ಬಿಜೆಪಿಯ ದೇವೇಂದ್ರ ಜೈನ್ ರನ್ನು 8083 ಮತಗಳಿಂದ ಸೋಲಿಸಿದ್ದಾರೆ.
ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಹಾಗು ಕಾಂಗ್ರೆಸ್ ನಿಂದ ಭರ್ಜರಿ ಪ್ರಚಾರ ನಡೆದಿತ್ತು. ಕಾಂಗ್ರೆಸ್ ಶಾಸಕರಾದ ಮಹೇಂದ್ರ ಸಿಂಗ್ ಕಲುಖೇಡಾ ಹಾಗು ರಾಮ್ ಸಿಂಗ್ ಯಾದವ್ ನಿಧನದ ನಂತರ ಎರಡೂ ಸ್ಥಾನಗಳು ತೆರವಾಗಿತ್ತು. ಈ ಚುನಾವಣೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗು ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ಹೋರಾಟ ಎಂದೇ ಬಿಂಬಿತವಾಗಿತ್ತು.
Next Story





