ಮೊದಲ ಬಾರಿ ಮತದಾನ ಮಾಡಿದ 15 ಸಾವಿರ ಮಂದಿಗೆ ವಿಶೇಷ ಬಹುಮಾನ !

ಶಿಲಾಂಗ್, ಫೆ.28: ಮಂಗಳವಾರ ನಡೆದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ 15,000ಕ್ಕೂ ಹೆಚ್ಚು ಜನರಿಗೆ ಪದಕ ನೀಡಿ ಗೌರವಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
60 ವಿಧಾನಸಭಾ ಕ್ಷೇತ್ರಗಳ ಪೈಕಿ ಚುನಾವಣೆ ನಡೆದಿದ್ದ 59 ಕ್ಷೇತ್ರಗಳ 3,025 ಮತಗಟ್ಟೆಗಳಲ್ಲಿ ಮತದಾನದ ಹಕ್ಕು ಪಡೆದ ಬಳಿಕ ತಮ್ಮ ಮೊದಲ ಹಕ್ಕು ಚಲಾಯಿಸಿದ ತಲಾ 5 ಜನರಿಗೆ ಪದಕವನ್ನು ರಾಜ್ಯ ಚುನಾವಣಾ ಆಯೋಗ ನೀಡಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್.ಆರ್.ಖರ್ಕೋಂಗರ್ ತಿಳಿಸಿದ್ದಾರೆ.
ಮೊದಲ ಬಾರಿ ಮತದಾನದ ಹಕ್ಕು ಪಡೆದ ಕೆಲವರು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಬೆಳಗ್ಗೆ 6:00 ಗಂಟೆಗೇ ಮತಗಟ್ಟೆ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು.ಮೇಘಾಲಯದಲ್ಲಿ ಸುಮಾರು ಶೇ.75ರಷ್ಟು ಮತದಾನ ನಡೆದಿದ್ದು, ಗರೋ ಹಿಲ್ಸ್ ಮತ್ತು ಪೂರ್ವ ಜೈಂತಿಯಾ ಹಿಲ್ಸ್ ಜಿಲ್ಲೆಗಳ ಕೆಲವು ಗ್ರಾಮಗಳ ಮತದಾನದ ವಿವರ ದೊರೆತಾಗ ಈ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
Next Story





