ಹನೂರು: ಡಾರ್ವಿನ್ -ಸಿ.ವಿ ರಾಮನ್ ಮಾಸಾಚರಣೆ ಕಾರ್ಯಕ್ರಮ

ಹನೂರು,ಫೆ.28: ಸುಸ್ಥಿರ ಅಭಿವೃದ್ದಿಗಾಗಿ ವಿಜ್ಞಾನ ದೈಯ ವಾಕ್ಯದಡಿಯಲ್ಲಿ ವಿಶ್ವದ್ಯಾದಂತ ವಿಜ್ಞಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅದೇ ರೀತಿ ನಮ್ಮ ದೇಶದಲ್ಲಿ ಸಿ.ವಿ.ರಾಮನ್‍ರವರು ನೋಬಲ್ ಪ್ರಶಸ್ತಿ ಪಡೆದ ದಿನದ ಅಂಗವಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಇಸ್ರೋ ನಿವೃತ್ತ ವಿಜ್ಞಾನಿಗಳಾದ ಡಾ.ಸಂಜೀವ್ ಹೇಳಿದರು.
ಪಟ್ಟಣದ ಬಿಆರ್ ಸಿ ಕೇಂದ್ರದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಶಿಕ್ಷಣ ಇಲಾಖೆ, ಹನೂರು ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಇವರ ಸಹಯೋಗದೊಂದಿಗೆ ಡಾರ್ವಿನ್ -ಸಿ.ವಿ ರಾಮನ್ ಮಾಸಾಚರಣೆ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿ -ಶಿಕ್ಷಕರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನವೆಂದರೆ ಕೇವಲ ಅವಿಷ್ಕಾರವಲ್ಲ. ಅದರ ಲಾಭ ಜನಸಾಮಾನ್ಯರಿಗೂ ದೊರತಾಗ ಮಾತ್ರ ಅದು ಸಾರ್ಥಕವಾಗುವುದು. ವಿಜ್ಞಾನವು ನಮ್ಮ ಅಭಿವೃದ್ದಿ ಜೊತೆಗೆ ಮುಂದಿನ ಪಿಳಿಗೆಗೆ ಅದರ ಲಾಭವನ್ನು ಕೊಂಡೊಯ್ಯುವಂತಾದಾಗ ಮಾತ್ರ ಭೂಮಿ ವಾಸ ಯೋಗ್ಯ ಗ್ರಹವಾಗಿ ಉಳಿಯಲು ಸಾದ್ಯ. ಈ ನಿಟ್ಟಿನಲ್ಲಿ ವಿಜ್ಞಾನ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು
ನಂತರ ಮಾತನಾಡಿದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅದ್ಯಕ್ಷ ಜಾನ್ ಬ್ರೀಟೋ, ನಮ್ಮ ಹನೂರು ತಾಲೂಕು ವ್ಯಾಪ್ತಿಯಲ್ಲಿ ವೈದ್ಯಕೀಯ ಕ್ಷೇತ್ರ, ರಾಜಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಭಾರತೀಯ ಸೇನೆ, ಇನ್ನಿತರ ಉನ್ನತ ಹುದ್ದೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೂಂಡು ನಮ್ಮ ತಾಲೂಕಿಗೆ ಕೀರ್ತಿ ತಂದು ಕೊಟ್ಟಿದ್ದಾರೆ. ನಮ್ಮ ಭಾಗದಲ್ಲಿ ವಿಜ್ಞಾನಿಗಳ ಕೊರೆತೆಯಿದ್ದು, ಈ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ವಿದ್ಯಾರ್ಥಿಗಳನ್ನು ವಿಜ್ಞಾನಿಗಳಾಗುವಂತೆ ಪ್ರೇರೆಪಿಸಿ ಎಂದರು.
ಇದೇ ಸಂದರ್ಭದಲ್ಲಿ ಬಿಆರ್ ಸಿ ಕ್ಯಾತ, ಸಿದ್ದಮಲ್ಲಪ್ಪ ಪ್ರೌಡಶಾಲೆಯ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷರಾದ ಸಿದ್ದಮಲ್ಲಪ್ಪ, ಕಾರ್ಯದರ್ಶಿ ಶಿವಲಂಕಾರ್ , ಹನೂರು ಪ್ರೌಡಶಾಲೆಯ ಶಿಕ್ಷಕರ ಸಂಘದ ಅದ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಆನಂದ್‍ರಾಜ್ ನಂಜುಂಡಸ್ವಾಮಿ, ಬಿ.ಜಿ.ವಿಎಸ್ ಜಿಲ್ಲಾ ಘಟಕ ಚಾಮರಾಜನಗರ ಪ್ರಾ. ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ನಂಜುಂಡಸ್ವಾಮಿ, ಬಿಆರ್‍ಪಿ ಆಶೋಕ್, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಿವುಲಿಂಗನಾಯಕ್ ಇನ್ನಿತರರು ಹಾಜರಿದ್ದರು.







