ಕೋಡಿ: ಬ್ಯಾರೀಸ್‌ನಲ್ಲಿ ಗಾನ ಗಾರುಡಿಗ ಶಂಕರದಾಸ್‌ರೊಂದಿಗೆ ಸಂವಾದ

ಕೋಡಿ, ಫೆ. 28: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಕುಂದಾಪುರ ಇದರ ಕಡಲ ಸಿರಿಸಾಂಸ್ಕೃತಿಕ ಘಟಕದ ವತಿಯಿಂದ ಜಾನಪದ ಹಾಗೂ ಸುಗಮ ಸಂಗೀತ ಗಾಯಕ ಶಂಕರದಾಸ್ ಇವರೊಂದಿಗೆ ಒಂದಷ್ಟು ಕಾಲ ಸಂವಾದ ನೆರವೇರಿತು.
ಸಂವಾದದ ಮದ್ಯೆ ಗಾಯನದ ಸುಧೆಯೊಂದಿಗೆ ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ವಹಿಸಿಕೊಂಡಿದ್ದು, ಸಾಂಸ್ಕೃತಿಕ ಸಂಘದ ಸಂಘಟಕರಾದ ಸಂದೀಪ ಕುಮಾರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂವಾದ ಕಾರ್ಯದಲ್ಲಿ ವಿದಾರ್ಥಿಗಳಾದ ಮಝರ್, ನೌಫೀಲ್, ಸಫ್ವಾನ್, ವಿಶ್ವತಿ, ಸೌಜನ್ಯ ಹಾಗೂ ಸಂಪ್ರೀತಾ ಪಾಲ್ಗೊಂಡಿದ್ದರು.
Next Story





