ಚಾಮರಾಜನಗರ: ಆಕಸ್ಮಿಕ ಬೆಂಕಿ; ಒಂದೂವರೆ ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಭಸ್ಮ

ಚಾಮರಾಜನಗರ,ಫೆ.28: ಆಕಸ್ಮಿಕ ಬೆಂಕಿ ಅನಾಹುತದಿಂದ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳು ಬೆಂಕಿಗಾಹುತಿಯಾದ ಘಟನೆ ಚಾಮರಾಜನಗರದಲ್ಲಿ ಸಂಭವಿಸಿದೆ.
ಚಾಮರಾಜನಗರದ ಶ್ರೀ ಭ್ರಮರಾಂಭ ಚಿತ್ರ ಮಂದಿರ ಬಳಿ ಇರುವ ಅಶ್ವಿನಿ ಡಯಾಗ್ನಸ್ಟಿಕ್ಸ್ ನಲ್ಲಿ ಬುಧವಾರ ಸಂಜೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳು ಬೆಂಕಿಗಾಹುತಿಯಾದವು.
ಯಳಂದೂರಿನ ರಮೇಶ್ ಉಡುರವರಿಗೆ ಸೇರಿದ ಅಶ್ವಿನಿ ಡಯಾಗ್ನಸ್ಟಿಕ್ಸ್ ಸೆಂಟರ್ ನಲ್ಲಿ ಬುಧವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು. ಆದರೂ ಅಶ್ವಿನಿ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಇದ್ದ ಎಂಆರ್‍ಎ ಯಂತ್ರೋಪಕರಣ, ಕಂಪ್ಯೂಟರ್ ಗಳು ಮತ್ತು ಬ್ಯಾಟರಿಗಳು ಭಸ್ಮವಾಗಿದೆ. ಇದರಿಂದಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಆಧುನಿಕ ವೈದ್ಯಕೀಯ ಸಲಕರಣಗಳು ಬೆಂಕಿಗಾಹುತಿಯಾದವು ಎಂದು ತಿಳಿದು ಬಂದಿದೆ.
Next Story