Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಇಂಗ್ಲಿಷ್ ಕೆಟ್ಟದ್ದು ಎನ್ನುವ ಬದಲು...

ಇಂಗ್ಲಿಷ್ ಕೆಟ್ಟದ್ದು ಎನ್ನುವ ಬದಲು ಕನ್ನಡವನ್ನು ಸಮಾನವಾಗಿ ಬೆಳೆಸಬಾರದೇಕೆ: ಮೀರಾ ಶಿವಲಿಂಗಯ್ಯ ಪ್ರಶ್ನೆ

14ನೆ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ28 Feb 2018 11:19 PM IST
share
ಇಂಗ್ಲಿಷ್ ಕೆಟ್ಟದ್ದು ಎನ್ನುವ ಬದಲು ಕನ್ನಡವನ್ನು ಸಮಾನವಾಗಿ ಬೆಳೆಸಬಾರದೇಕೆ: ಮೀರಾ ಶಿವಲಿಂಗಯ್ಯ ಪ್ರಶ್ನೆ

ಮಂಡ್ಯ, ಫೆ.28: ಮೊದಲು ಕನ್ನಡದಲ್ಲಿ ಉನ್ನತ ಶಿಕ್ಷಣ ತರುವ ವ್ಯವಸ್ಥೆ ಪರಿಪಕ್ವವಾದರೆ ಆಗ ಎಲ್ಲ ರೀತಿಯ ಅಧ್ಯಯನಗಳೂ, ಸಂಶೋಧನೆಗಳೂ ಕನ್ನಡದಲ್ಲೆ ಆಗುತ್ತವೆ ಎಂದು 14ನೆ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಪ್ರತಿಪಾದಿಸಿದ್ದಾರೆ.

ಬುಧವಾರ ನಗರದ ಕಲಾಮಂದಿರದ ಕೆ.ಎಸ್.ಪುಟ್ಟಣ್ಣಯ್ಯ ವೇದಿಕೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾಗತೀಕರಣ ಎದುರಿಸಲು ನಮ್ಮ ನುಡಿಯನ್ನು ತಾಂತ್ರಿಕವಾಗಿ ಸಿದ್ದಗೊಳಿಸಬೇಕಿದೆ. ಕನ್ನಡದಲ್ಲಿ ಕಲಿಕೆಯ ವ್ಯವಸ್ಥೆ ಆಧುನೀಕರಣಗೊಂಡರೆ ಆಗ ಪೋಷಕರು ನಮ್ಮ ಕನ್ನಡದ ಕನಸಿಗೆ ಜೊತೆಯಾಗಬಲ್ಲರು ಎಂದರು.

ಇಂದಿನ ಜೀವನಕ್ಕೆ ಜನವನ್ನು ಸಿದ್ದಪಡಿಸಲು ಇಂಗೀಷ್ ಭಾಷೆಯ ಅಭ್ಯಾಸವೂ ಬೇಕು. ಇಂಗ್ಲಿಷ್ ಭಾಷೆ ಅಧ್ಯಯನವನ್ನು ನಾವು ತೆಗಳುವ ಬದಲು, ಇದು ಕೆಟ್ಟದ್ದು ಎನ್ನುವ ಬದಲು ನಾವೇಕೆ ಕನ್ನಡವನ್ನು ಸಮಾನವಾಗಿ ಮಕ್ಕಳಲ್ಲಿ ಬೆಳಸಬಾರದು? ಕನ್ನಡ ಪುಸ್ತಕಗಳ ಪ್ರೀತಿಯನ್ನೇಕೆ ಜನರಲ್ಲಿ ಬೆಳಸಬಾರದು? ಎಂದು ಅವರು ಪ್ರಶ್ನಿಸಿದರು.

ಈಗ ಪ್ರೌಡ ಶಾಲೆವರೆಗೆ ಕನ್ನಡ ಮಾಧ್ಯಮ ಇದೆಯಾದರೂ ಬದುಕನ್ನು ಕಟ್ಟಿಕೊಡುವ ವಿದ್ಯೆಗಳನ್ನು ರೂಪಿಸುವ ಹತ್ತನೇ ಕ್ಲಾಸಿನ ಆಚೆಗಿನ ಹಂತದಲ್ಲಿ ಕನ್ನಡವನ್ನು ನೆಲೆ ನಿಲ್ಲಿಸುವ ಕೆಲಸಕ್ಕೆ ಗಮನವನ್ನು ಕೊಟ್ಟಿಲ್ಲ. ಕನ್ನಡದಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್‍ಮೆಂಟ್‍ನಂತಹ ಯಾವ ವಿದ್ಯೆಗಳನ್ನೂ ರೂಪಿಸಿಲ್ಲ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ತಂದೆತಾಯಿಗಳು ಮುಂದಾಗಬೇಕು ಎಂದು ಅವರು ಹೇಳಿದರು.

ಮಂಡ್ಯದ ಕನ್ನಡ ನುಡಿಸೊಬಗು:
ಕನ್ನಡ ಭಾಷೆಯ ನಿಜವಾದ ಶ್ರೀಮಂತಿಕೆ ಇರುವುದು ನಮ್ಮ ಗ್ರಾಮೀಣ ಆಡು ಭಾಷೆಯಲ್ಲಿ. ಮಂಡ್ಯದ ಮಾತು ಒರಟು ಎನ್ನುತ್ತಿದ್ದ ಜನ ಮಂಡ್ಯ ತಾಲೂಕಿನ ಆಡುಮಾತು, ದೇಸಿಯ ನುಡಿಗಟ್ಟುಗಳು ಸಿನಿಮಾ ಮಾಧ್ಯಮದ ಮೂಲಕ ರಂಜನೀಯವಾಗಿ ಜನಮನವನ್ನು ತಲುಪಿದೆ ಎಂದರು. ಮಂಡ್ಯದ ಭಾಷೆ ಬರೆಯಲು ಸಿಗದು. ಹಿಡಿದರೆ ಮುಟುಕಿಯಲ್ಲಿ, ಬಿಟ್ಟರೆ ಅಂಗಳದ ತುಂಬ ಹರಡಿಕೊಳ್ಳುವುದು. ವ್ಯಾಕರಣ ಹುಟ್ಟುವ ಮೊದಲು ಜನರ ನಾಲಿಗೆ ಮೇಲೆ ನಲಿದಾಡಿದ ಭಾಷಾ ಸರಸ್ವತಿಯ ಬೆಳಕು ನಮ್ಮ ಮನಸ್ಸಿಗೆ ಮುದ ನೀಡುತ್ತಿದೆ. ಮೇಕಪ್ ಇಲ್ಲದ ನಮ್ಮ ಮಂಡ್ಯ ಭಾಷೆ ಬಲು ರಂಜನೀಯ ಎಂದು ಅವರು ವಿಶ್ಲೇಷಿಸಿದರು.

ಹಾಮು(ಹಾವು), ಕಿಮಿ(ಕಿವಿ), ಕಾಪಿ(ಕಾಫಿ), ಕಾರ್ಮೆಂಟ್(ಕಾನ್ವೆಂಟ್), ಮಟ್ಟೆ(ಮೊಟ್ಟೆ) ಇವೆಲ್ಲಾ ಪದಗಳು ಆಡು ಮಾತಿನಲ್ಲಷ್ಟೆ ಸಿಗುವಂತಹದ್ದು. ಸಾಹಿತ್ಯ ಪರಿಷತ್ತು, ಕನ್ನಡದ ಕಾವಲುಪಡೆ, ಕನ್ನಡ ಸೇನೆ, ಕನ್ನಡಪರ ಸಂಘಟನೆಗಳು ಈ ಭಾಷಾ ಸೊಗಡನ್ನು ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಆತ್ಮಹತ್ಯೆಗೆ ಆತಂಕ:
ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಮೀರಾ ಶಿವಲಿಂಗಯ್ಯ, ಇದನ್ನು ಜಿಲ್ಲೆಯ ಮುಖಂಡರು, ಸಾಹಿತಿಗಳು, ವಿದ್ವಾಂಸರು, ಸಂಶೋಧಕರು ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ತಾಕೀತು ಮಾಡಿದರು.
ಆಧುನಿಕ ಬೇಸಾಯ ಪದ್ದತಿ ಅಳವಡಿಕೆಯಾಗಯಬೇಕು. ಬೆಳೆದ ಬೆಳೆಗಳಿಗೆ ನ್ಯಾಯಯುತ, ವೈಜ್ಞಾನಿಕ ಬೆಲೆ ಕೊಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ನೀರಿನ ಶೇಖರಣೆ, ಸದ್ಬಳಕೆಯಾಗಬೇಕು. ಮೇಕೆದಾಟು ಅಣೆಕಟ್ಟು ಕಟ್ಟಿ ಸಮುದ್ರಕ್ಕೆ ಪೋಲಾಗುತ್ತಿರುವ ನೀರನ್ನು ಉಪಯೋಗಿಸಬೇಕು ಎಂದು ಅವರು ಸಲಹೆ ನೀಡಿದರು.

ಹೆಣ್ಣುಭ್ರೂಣ ಹತ್ಯೆ ತಡೆಯಬೇಕು: ಮಹಿಳೆ ವಿದ್ಯಾವಂತೆಯಾಗಿ, ಉದ್ಯೋಗಿಯಾಗಿ ಸಂಸಾರಕ್ಕೆ ಆರ್ಥಿಕ ಬೆಂಬಲ ನೀಡುತ್ತಿದ್ದಾಳೆ. ಆದರೂ ಬೇರಾವ ಜೀವಿಗಳಲ್ಲೂ ಇಲ್ಲದ ಹೆಣ್ಣುಭ್ರೂಣ ಹತ್ಯೆಯ ಶಾಪ ಭಾರತವನ್ನು ಕಾಡುತ್ತಿರುವಂತೆ ಜಿಲ್ಲೆಯನ್ನು, ತಾಲೂಕನ್ನು ಕಾಡುತ್ತಲೇ ಇದೆ. ಇದರ ಬಗ್ಗೆ ಸಾರ್ವಜನಿಕ ಅರಿವು, ಜಾಗೃತಿ ಅತಿ ಮುಖ್ಯವಾಗಿ ಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.

ಮಹಿಳೆ ಜಾಗೃತಳಾಗಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ದೌರ್ಜನ್ಯಗಳನ್ನು ಸಹಿಸಿ ನಲುಗದೆ ಎದುರಿಸಿ ನಿಂತು ಹೋರಾಡಿ ಕುಟಂಬದಲ್ಲಿ ಸಮಾನ ಗೌರವಗಳನ್ನು ಪಡೆಯಬೇಕು. ಜತೆಗೆ ಭಾರತೀಯ ಸಂಸ್ಕೃತಿಯಲ್ಲಿನ ವಿನಯ, ಸ್ನೇಹಶೀಲತೆ, ಸಜ್ಜನಿಕೆ, ಸನ್ನಡತೆಯನ್ನು ರೂಢಿಸಿಕೊಂಡು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಣ್ಮರೆಯಾಗುತ್ತಿದ್ದ ಪೌರಾಣಿಕ ನಾಟಕಗಳು ಇತ್ತೀಚಿಗೆ ಮಂಡ್ಯದಲ್ಲಿ ಹೆಚ್ಚು ಪ್ರದರ್ಶನಗೊಳ್ಳುತ್ತಿವೆ. ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಸ್ತುತ್ಯಾರ್ಹ. ನಾಟಕಗಳ ಪ್ರದರ್ಶನಕ್ಕೆ ಮಂಡ್ಯದಲ್ಲಿ ಬಯಲು ರಂಗಮಂದಿರದ ನಿರ್ಮಾಣ ಶೀಘ್ರದಲ್ಲಿ ಆಗಬೇಕಿದೆ ಎಂದರು.

ಜೆಎಸ್‍ಎಸ್ ವಿದ್ಯಾಪೀಠದ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ನಿರಂಜಮೂರ್ತಿ ಸಮ್ಮೇಳನ ಉದ್ಘಾಟಿಸಿದರು. ಜಿಪಂ ಸದಸ್ಯ ಚಂದಗಾಲು ಶಿವಣ್ಣ ಸಮ್ಮೇಳನ ಸಂಬಂಧ ಮೆರವಣಿಗೆ ಉದ್ಘಾಟಿಸಿದರು. ನಿಕಟಪೂರ್ವ ಅಧ್ಯಕ್ಷ ಮಂಡ್ಯ ರಮೇಶ್, ಸ್ವಾಗತ ಸಮಿತಿ ಅಧ್ಯಕ್ಷ ರವಿಕುಮಾರು ಗಣಿಗ, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ, ತಾಲೂಕು ಅಧ್ಯಕ್ಷ ಮಹೇಶ್ ಸುಂಡಹಳ್ಳಿ, ಚಿತ್ರನಟ ಕಿರಿಕ್ ಕೀರ್ತಿ, ಇತರ ಗಣ್ಯರು ಉಪಸ್ಥಿತರಿದ್ದರು.

ರೈತರ ಅತ್ಮಹತ್ಯೆ ಕಾರಣ ಮತ್ತು ಪರಿಹಾರ ಕುರಿತು ಪ್ರೊ.ಕೆ.ಸಿ.ಬಸವರಾಜು, ಮಂಡ್ಯ ತಾಲೂಕಿನ ಅಭಿವೃದ್ಧಿ ಮತ್ತು ಸವಾಲುಗಳು ಕುರಿತು ಪ್ರೊ.ಹುಲ್ಕೆರೆ ಮಹದೇವು, ಹೊಸ ತಲೆಮಾರಿನ ಸಾಹಿತ್ಯ ಒಲವು ನಿಲುವುಗಳು ಕುರಿತು ಡಾ.ಎ.ಆರ್.ಮದನಕುಮಾರ್ ವಿಚಾರ ಮಂಡಿಸಿದರು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X