ಕಲ್ಲಡ್ಕದಲ್ಲಿ ಸರಣಿ ಅಪಘಾತ: ಹಲವು ಮಂದಿಗೆ ಗಾಯ
ಲಾರಿ - ಬಸ್ - ಜೀಪ್ - ಕಾರು ನಡುವೆ ಢಿಕ್ಕಿ

ಬಂಟ್ವಾಳ, ಮಾ. 1: ಕಲ್ಲಡ್ಕದ ಕುದ್ರೆಬೆಟ್ಟು ಎಂಬಲ್ಲಿ ಸರಣಿ ಅಪಘಾತದಿಂದ ಕಾರು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಕಾರಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಡಾಮರು ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಬಳಿಕ ಜೀಪೊಂದಕ್ಕೆ ಢಿಕ್ಕಿಯಾಗಿ ನಂತರ ಕಾರಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಲಾರಿ ಮತ್ತು ಕಾರು ಕಮರಿಗೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Next Story





