ದ್ವಿತೀಯ ಪಿಯುಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಮುಖ್ಯಮಂತ್ರಿ

ಬೆಂಗಳೂರು, ಮಾ. 1: ‘ಜೀವನದಲ್ಲಿ ಒಮ್ಮೆ ಅವಕಾಶ ತಪ್ಪಿದರೂ, ಮತ್ತೊಂದು ಅವಕಾಶ ಸಿಕ್ಕೇ ಸಿಗುತ್ತದೆ. ಜೀವನ ಎಂಬುದು ಮೊಟಕುಗೊಂಡರೆ ಮತ್ತೊಮ್ಮೆ ನಮಗೆ ದೊರೆಯುವುದಿಲ್ಲ’ ಎಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧೈರ್ಯ ಹೇಳಿದ್ದಾರೆ.
ವಿದ್ಯಾರ್ಥಿಗಳು ಯಾವುದೇ ಹೆದರಿಕೆ ಇಲ್ಲದೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ. ಯಾವುದೇ ಪರೀಕ್ಷೆಯಾದರೂ, ಜೀವನಕ್ಕಿಂತ ದೊಡ್ಡದಲ್ಲ. ಕಡಿಮೆ ಅಂಕ ಗಳಿಸಿದ್ದೇನೆ ಎಂಬ ಅನಗತ್ಯ ಆತಂಕಬಿಟ್ಟು ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.
ನಿಮ್ಮೊಂದಿಗೆ ನಿಮ್ಮನ್ನು ಸದಾ ಪ್ರೀತಿಸುವ ಸಹೋದರ-ಸಹೋದರಿಯರು ಸದಾಕಾಲ ಜೊತೆ ಇರುತ್ತಾರೆಂಬುದನ್ನು ಮರೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಪರೀಕ್ಷೆಗೆ ಶುಭ ಕೋರಿದ್ದಾರೆ.
Next Story





