ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿಯಲ್ಲಿ ಮೊದಲ ದಿನ 191 ಗೈರು
ಉಡುಪಿ, ಮಾ.1: ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪ್ರಾರಂಭಗೊಂಡ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಒಟ್ಟು 191 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಪರೀಕ್ಷೆಯ ವೇಳೆ ಜಿಲ್ಲೆಯ ಯಾವದೇ ಭಾಗದಿಂದ ಅಕ್ರಮ, ಅವ್ಯವಹಾರದ ವರದಿ ಬಂದಿಲ್ಲ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ನಡೆದ ಅರ್ಥಶಾಸ್ತ್ರ ಪರೀಕ್ಷೆಗೆ ಒಟ್ಟು 9664 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು ಇವರಲ್ಲಿ 9500 ಮಂದಿ ಪರೀಕ್ಷೆಗೆ ಹಾಜರಾಗಿ 164 ಮಂದಿ ಗೈರುಹಾಜರಾಗಿದ್ದಾರೆ. ಉಡುಪಿ ತಾಲೂಕಿನಲ್ಲಿ 77, ಕುಂದಾಪುರ ತಾಲೂಕಿನಲ್ಲಿ 65 ಹಾಗೂ ಕಾರ್ಕಳದಲ್ಲಿ 22 ಮಂದಿ ಗೈರುಹಾಜರಾಗಿದ್ದಾರೆ.
ಭೌತಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 5626 ವಿದ್ಯಾರ್ಥಿಗಳಲ್ಲಿ 5599 ಮಂದಿ ಪರೀಕ್ಷೆ ಬರೆದು 27 ಮಂದಿ ಗೈರುಹಾಜರಾಗಿದ್ದಾರೆ. ಉಡುಪಿಯಲ್ಲಿ 14, ಕುಂದಾಪುರದಲ್ಲಿ 8 ಹಾಗೂ ಕಾರ್ಕಳದಲ್ಲಿ ಐವರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿಲ್ಲ ಎಂದು ಡಿಡಿಪಿಯು ಕಚೇರಿಯಿಂದ ತಿಳಿದುಬಂದಿದೆ.
Next Story





