Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗೃಹಸಾಲ, ವಾಹನಸಾಲ ಆಗಲಿದೆಯೇ ದುಬಾರಿ?

ಗೃಹಸಾಲ, ವಾಹನಸಾಲ ಆಗಲಿದೆಯೇ ದುಬಾರಿ?

ವಾರ್ತಾಭಾರತಿವಾರ್ತಾಭಾರತಿ1 March 2018 8:32 PM IST
share
ಗೃಹಸಾಲ, ವಾಹನಸಾಲ ಆಗಲಿದೆಯೇ ದುಬಾರಿ?

ಮುಂಬೈ, ಮಾ.1: ಬಂಡವಾಳ ಆಧರಿತ ಸಾಲ ದರದ ಕನಿಷ್ಟ ವೆಚ್ಚ(ಎಂಸಿಎಲ್‌ಆರ್)ವನ್ನು ಬ್ಯಾಂಕ್‌ಗಳು ಶೇ.8.15ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲದ ಮೇಲಿನ ಸಮಾನ ಮಾಸಿಕ ಕಂತು(ಇಎಂಐ) ಕೂಡಾ ಹೆಚ್ಚುವ ನಿರೀಕ್ಷೆಯಿದೆ.

    ಠೇವಣಿ ದರವನ್ನು 75 ಮೂಲ ಅಂಕದಷ್ಟು ಹೆಚ್ಚಿಸಿದ ಒಂದು ದಿನದ ಬಳಿಕ ಗುರುವಾರ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಒಂದು ವರ್ಷದ ಎಂಸಿಎಲ್‌ಆರ್ ಅನ್ನು 20 ಮೂಲ ಅಂಕ ಹೆಚ್ಚಿಸುವ ಮೂಲಕ ಶೇ.8.15ಕ್ಕೆ ಏರಿಸಿದೆ(ಶೇ.7.95ರಷ್ಟಿತ್ತು). ಇತರ ಎಂಸಿಎಲ್‌ಆರ್ ದರವನ್ನು ಶೇ.7.8ರಿಂದ ಶೇ.7.95ಕ್ಕೆ ಹೆಚ್ಚಿಸಲಾಗಿದೆ. ಹೊಸ ಸಾಲಗಳು ಒಂದು ವರ್ಷದ ಎಂಸಿಆರ್‌ಎಲ್‌ಗೆ ಜೋಡಣೆಯಾಗಿರುವ ಕಾರಣ ದುಬಾರಿಯಾಗಲಿವೆ ಎಂದು ಐಸಿಐಸಿಐ ಬ್ಯಾಂಕ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಠೇವಣಿ ದರ ಹಾಗೂ ಎಂಸಿಎಲ್‌ಆರ್ ದರದಲ್ಲಿ ಹೆಚ್ಚಳವಾಗಿರುವುದು ಬ್ಯಾಂಕಿಂಗ್ ವ್ಯವಸ್ಥೆಯ ಬಡ್ಡಿದರದಲ್ಲಿ ಏರಿಕೆಯಾಗಿರುವುದನ್ನು ತೋರಿಸುತ್ತದೆ. ಎಂಸಿಎಲ್‌ಆರ್ ವ್ಯವಸ್ಥೆಯನ್ನು 2016ರ ಎಪ್ರಿಲ್‌ನಿಂದ ಆರಂಭಿಸಿದ ಬಳಿಕ ಬೆಂಚ್‌ಮಾರ್ಕ್ ಸಾಲ ದರದಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ. ಬ್ಯಾಂಕ್‌ಗಳು ಒಂದು ವರ್ಷದ ಎಂಸಿಎಲ್‌ಆರ್ ಆಧಾರದಲ್ಲಿ ಗ್ರಾಹಕರಿಗೆ ಸಾಲ ನೀಡುವ ಕಾರಣ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಕೆಲವು ವೈಯಕ್ತಿಕ ಸಾಲಗಳು, ಆಸ್ತಿ ಅಡವಿಟ್ಟು ಪಡೆಯುವ ಸಾಲಗಳು ದುಬಾರಿಯಾಗುವ ನಿರೀಕ್ಷೆಯಿದೆ.

 ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಒಂದು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.15ರಿಂದ ಶೇ.8.30ಕ್ಕೇರಿಸಿದ್ದರೆ, ಮೂರು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.30ರಿಂದ ಶೇ.8.45ಕ್ಕೆ, ಐದು ವರ್ಷದ ದರವನ್ನು ಶೇ.8.45ರಿಂದ ಶೇ.8.60ಕ್ಕೆ ಹೆಚ್ಚಿಸಿದೆ. ಎಸ್‌ಬಿಐ ಎರಡು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.05ರಿಂದ ಶೇ.8.25ಕ್ಕೆ, ಮೂರು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.10ರಿಂದ ಶೇ.8.35ಕ್ಕೆ ಏರಿಸಲಿದೆ. ಆರು ತಿಂಗಳ ಎಂಸಿಎಲ್‌ಆರ್ ದರ ಶೇ.7.90ರಿಂದ ಶೇ.8ಕ್ಕೆ ಏರಲಿದೆ.

   ಠೇವಣಿ ದರದಲ್ಲಿ ಹೆಚ್ಚಳವಾಗಿರುವುದು , ಬಂಡವಾಳದ ಸಮಗ್ರ ವೆಚ್ಚ ಹಾಗೂ ಹಣದ ಕೊರತೆ ಎಂಸಿಎಲ್‌ಆರ್ ದರ ಹೆಚ್ಚಲು ಕಾರಣವಾಗಿದೆ ಎಂದು ಬ್ಯಾಂಕರ್‌ಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಎಂಸಿಎಲ್‌ಆರ್ ದರವನ್ನು ಮಾಸಿಕ ಆಧಾರದಲ್ಲಿ ಪರಿಷ್ಕರಿಸುತ್ತವೆ. ಎಪ್ರಿಲ್‌ನಲ್ಲಿ ನಡೆಸಲಿರುವ ವಿತ್ತೀಯ ನೀತಿಯ ಪರಿಷ್ಕರಣೆ ಸಂದರ್ಭ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೆ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಬಾಂಡ್ ದರಗಳೂ ಏರಿಕೆಯಾಗುತ್ತಿರುವುದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಡ್ಡಿದರದ ಮೇಲೆ ಹೆಚ್ಚಿನ ಒತ್ತಡ ಬೀಳಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X