ಮುಹಮ್ಮದ್ ಕುಳಾಯಿ ಸೇರಿದಂತೆ 7 ಮಂದಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ದತ್ತಿ ಪ್ರಶಸ್ತಿ

ಮುಹಮ್ಮದ್ ಕುಳಾಯಿ
ಬೆಂಗಳೂರು, ಮಾ.1: ಕರ್ನಾಟಕ ಸಾಹಿತ್ಯ ಅಕಾಡಮಿಯ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನವನ್ನು ಪ್ರಕಟಿಸಲಾಗಿದೆ.
ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನವನ್ನು ಚೈತ್ರಿಕಾ ಶ್ರೀಧರ್ ಹೆಗಡೆಯವರ ‘ಎರಡು ನಂಬರಿನ ಟಿಕಲಿ(ಕಾವ್ಯ-ಹಸ್ತಪ್ರತಿ)ಗೆ ನೀಡಲಾಗಿದೆ. ಚದುರಂಗ ದತ್ತಿನಿಧಿ ಬಹುಮಾನವನ್ನು ಮುಹಮ್ಮದ್ ಕುಳಾಯಿಯವರ ‘ಕಾಡಂಕಲ್ಲ್ ಮನೆ’(ಕಾದಂಬರಿ)ಗೆ ನೀಡಲಾಗಿದೆ. ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನವನ್ನು ಡಾ.ಗುರುಪಾದ ಕೆ. ಹೆಗಡೆಯವರ ‘ಜೀವಾತ್ಮ ಚೈತ್ರಯಾತ್ರೆ’(ಆತ್ಮಕಥೆ)ಗೆ ನೀಡಲಾಗಿದೆ. ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನವನ್ನು ಎಸ್.ಶಿವಾನಂದರವರ ‘ಸಾಹಿತ್ಯ ಮತ್ತು ಸಾಹಿತ್ಯೇತರ’(ಸಾಹಿತ್ಯ ವಿಮರ್ಶೆ)ಗೆ ನೀಡಲಾಗಿದೆ. ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನವನ್ನು ಸ.ರಘುನಾಥ್ ಅವರ ‘ಒಂಟಿ ಸೇತುವೆ’(ಅನುವಾದ-1)ಗೆ ನೀಡಲಾಗಿದೆ. ಮಧುರಚೆನ್ನ ದತ್ತಿನಿಧಿ ಬಹುಮಾನವನ್ನು ಡಾ.ಕೆ.ಬಿ.ಶ್ರೀಧರ್ ‘ಪಂಚಮುಖ’( ಲೇಖಕರ ಮೊದಲ ಸ್ವತಂತ್ರ ಕೃತಿ)ಕೃತಿಗೆ ನೀಡಲಾಗಿದೆ. ಅಮೆರಿಕನ್ನಡ ದತ್ತಿನಿಧಿ ಬಹುಮಾನವನ್ನು ಮೋಹನ್ ಸ್ವಾಮಿಯವರ ‘ರಶ್ಮಿ ತೇರದಾಳ’(ಕನ್ನಡದಿಂದ ಇಂಗ್ಲಿಷಿಗೆ ಅನುವಾದ) ಪುಸ್ತಕಕ್ಕೆ ನೀಡಲಾಗಿದೆ.





