ಸಿರಿಯನ್ನರ ನೆರವಿಗೆ ಧಾವಿಸಿದ ರವೀಂದರ್ ಸಿಂಗ್ ರ ‘ಖಾಲ್ಸಾ ಏಡ್’

ವಿಶ್ವಸಂಸ್ಥೆ, ಮಾ.1ಸಿರಿಯದ ಪೂರ್ವ ಘೌಟದಲ್ಲಿ ಸರಕಾರಿ ಪಡೆಗಳು ನಾಗರಿಕರ ಮಾರಣಹೋಮ ನಡೆಸುತ್ತಿರುವಂತೆಯೇ, ಜಾತಿ, ಧರ್ಮಗಳ ಎಲ್ಲೆಗಳನ್ನು ಮೀರಿ ನಿಂತಿರುವ ಸ್ವಯಂಸೇವಾ ಸಂಘಟನೆಗಳು ಸಂತ್ರಸ್ತರ ನೆರವಿಗೆ ಧಾವಿಸುತ್ತಿವೆ.
ಅಂತಾರಾಷ್ಟ್ರೀಯ ಸರಕಾರೇತರ ಸಂಘಟನೆಯಾಗಿರುವ ‘ಖಾಲ್ಸಾ ಏಡ್’ ಸಿರಿಯದ ಸಂತ್ರಸ್ತರ ಆರೈಕೆಯಲ್ಲಿ ತೊಡಗಿದೆ.
ಈ ಸಂಘಟನೆಯ ಕಾರ್ಯಕರ್ತರು ಯುದ್ಧಪೀಡಿತ ಸಿರಿಯದಲ್ಲಿ ಸಂತ್ರಸ್ತರಿಗೆ ಉಚಿತ ಆಹಾರ, ಆಶ್ರಯ ಮತ್ತು ಆರೋಗ್ಯ ಸೇವೆಗಳನ್ನು ನೀಡುತ್ತಿದ್ದಾರೆ.
ಸ್ಥಾಪನೆ
1999ರಲ್ಲಿ ಕೊಸೊವೊ ನಿರಾಶ್ರಿತರ ಯಾತನೆಗೆ ಮರುಗಿದ ರವೀಂದರ್ ಸಿಂಗ್, ‘ಜಗತ್ತಿನಾದ್ಯಂತ ಆಂತರಿಕ ಯುದ್ಧ ನಡೆಯುತ್ತಿರುವ ಸ್ಥಳಗಳಲ್ಲಿ ಮಾನವೀಯ ನೆರವನ್ನು ನೀಡುವ ಉದ್ದೇಶದಿಂದ’’ ಈ ಪರೋಪಕಾರಿ ಸಂಸ್ಥೆಯನ್ನು ಸ್ಥಾಪಿಸಿದರು.
‘‘ಇಡೀ ಮಾನವ ಜನಾಂಗವನ್ನು ಒಂದೇ ಎಂಬುದಾಗಿ ಭಾವಿಸು’’ ಎಂಬ ಸಿಖ್ ಬೋಧನೆಯಲ್ಲಿ ಈ ಸಂಸ್ಥೆ ನಂಬಿಕೆ ಹೊಂದಿದೆ.
Next Story





