Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಾಹಿತ್ಯವೆಂದರೆ ಕೇವಲ ಅಕ್ಷರಗಳ...

ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಸಮೂಹವಲ್ಲ, ಬದುಕಿನಲ್ಲಿ ಕಂಡುಂಡ ನೋವು- ನಲಿವು, ಅನುಭವ: ಶ್ರೀಧರ ಶೇಟ್

ತಾಲೂಕು 9ನೆ ಸಾಹಿತ್ಯ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ1 March 2018 10:26 PM IST
share
ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಸಮೂಹವಲ್ಲ, ಬದುಕಿನಲ್ಲಿ ಕಂಡುಂಡ ನೋವು- ನಲಿವು, ಅನುಭವ: ಶ್ರೀಧರ ಶೇಟ್

ಭಟ್ಕಳ, ಮಾ. 1: ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಸಮೂಹವಲ್ಲ. ಬದುಕಿನಲ್ಲಿ ಕಂಡುಂಡ ನೋವು- ನಲಿವುಗಳನ್ನು, ಅನುಭವಗಳನ್ನು ಅನುಭವವಾಗಿಸಿ ಅಭಿವ್ಯಕ್ತಿ ಪಡಿಸಿದ ಸಾಹಿತ್ಯ ಶಾಶ್ವತವಾಗಿ ನಿಲ್ಲುತ್ತದೆ ಎಂದು ತಾಲೂಕಾ 9ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀಧರ ಶೇಟ್ ಹೇಳಿದರು.

ಅವರು ಚಿತ್ರಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಭವಾನಿಶಂಕರ ವೇದಿಕೆಯಲ್ಲಿ ನಡೆದ ತಾಲೂಕಾ 9ನೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಅವರು ತಮ್ಮ ಲಿಖಿತ ಭಾಷಣವನ್ನು ಓದುತ್ತಾ ಸಾಹಿತ್ಯವೆಂದರೆ ಅದು ತಾನೇ ತಾನಾಗಿ ಸೃಜಿಸಲ್ಪಡಬೇಕು. ಯಾವ ಒತ್ತಡವೂ ಇಲ್ಲದೇ ಹೂವು ಅರಳಿದಂತೆ ಅರಳಬೇಕು, ಸಾಹಿತ್ಯವೆನ್ನುವುದು ತನ್ನಿಂದ ತಾನೇ ಕಾದು ಅರಳುವ ಅರಳಾಗಬೇಕು ಎಂದರು. ಸಾಹಿತ್ಯ ಎಂದೂ ಹಿತವನ್ನುಂಟು ಮಾಡುವಂತಿರಬೇಕಲ್ಲದೇ ಇನ್ನೊಬ್ಬರನ್ನು ಕೆರಳಿಸುವಂತಿರಬಾರದು ಎಂದೂ ಹೇಳಿದರು.

ಸಾಹಿತ್ಯದ ಓದು ಉತ್ತಮ ಪರಿಣಾಮವನ್ನುಂಟು ಮಾಡಬಲ್ಲದು, ಹೊಸದಾಗಿ ಬರೆಯಲು ಪ್ರಾರಂಭಿಸಿದವರು ಹೆಚ್ಚು ಹೆಚ್ಚು ಓದುವ ಅಭ್ಯಾಸ ಇಟ್ಟು ಕೊಂಡಾಗ ಉತ್ತಮ ಸಾಹಿತ್ಯ ಹೊರ ಬರಲು ಸಾಧ್ಯವಾಗುವುದು. ನಿರಂತರ ಅಧ್ಯಯನದಿಂದ ಮತ್ತು ಜೀವನಾನುಭವದಿಂದ ಸಾಹಿತ್ಯ ಪ್ರಬುದ್ಧವಾಗುತ್ತದೆ, ತರಾತುರಿಯಲ್ಲಿ ಪ್ರಕಟಿಸಿದ ಸಂಕಲನ ಜೊಳ್ಳಿನಿಂದ ಕೂಡಿರಬಹುದೇ ವಿನಹ ಗಟ್ಟಿತನ ತೋರಿಸಲು ಸಾಧ್ಯವಿಲ್ಲ ಇಂತಹ ಹತ್ತಾರು ಸಂಕಲನಗಳಿಗಿಂತ ಗಟ್ಟಿತನವುಳ್ಳ ಒಂದೆರಡು ಸಂಕಲನಗಳೇ ಶ್ರೇಷ್ಟ ಎಂದ ಅವರು ಭಟ್ಕಳದ ನೆಲ ಅಹಿಂಸಾ ಪರಮೋ ಧರ್ಮ ಎಂದು ಸಾರಿದ ಜೈನರ ನೆಲವಾಗಿದ್ದು ಇಲ್ಲಿ ಅಹಿಂಸೆಯ ಪರಂಪರೆಯಿದೆ. ಸಾಹಿತ್ಯದಲ್ಲೂ ಅಹಿಂಸೆಯೇ ಕಾಣಬೇಕು. ನಮ್ಮ ಊರು ಪುಟ್ಟ ಭಾರತವೇ ಆಗಿದೆ. ಇಲ್ಲಿನ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಅನ್ಯೋನ್ಯತೆಯಿಂದ ಬದುಕುತ್ತಿರುವುದು ಇದೊಂದು ಶಾಂತಿಯ ತೋಟದಂತಿದೆ. ಧರ್ಮದ ಅಮಲು ಏರಿಸಿಕೊಂಡ ಧರ್ಮಾಂಧರಿಂದ ಆಗಾಗ ಕೋಮುಗಲಭೆಗಳು ಆಗಿ ಹೋದರೂ ಸಹ ಇಲ್ಲಿನ ಜನತೆಯ ಅನ್ಯೋನ್ನತೆಗೆ ಇದು ಧಕ್ಕೆ ತಂದಿಲ್ಲ. ಅಂತಹ ತಪ್ಪು ಮಾಡುವವರಿಗೆ ಶಿಕ್ಷೆಯಾಗುವಂತೆ ಇಲಾಖೆ ನೋಡಿಕೊಳ್ಳಬೇಕು, ಯಾವುದೇ ಧರ್ಮದವರಿರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದೂ ಹೇಳಿದರು.

ಭಟ್ಕಳದ ಶಂಸುದ್ದೀನ್ ಸರ್ಕಲ್‌ನಲ್ಲಿ ಭಟ್ಕಳದ ಇತಿಹಾಸವನ್ನು ಸಾರುವಂತಹ ’ಭಟ್ಟಾಕಳಂಕನ ಮೂರ್ತಿ’ ಇಲ್ಲವೇ ಭಟ್ಕಳವನ್ನು ಪ್ರತಿಬಿಂಬಿಸುವಂತಹ ಕುರುಹು ಇರಬೇಕೆ ವಿನಹ ಅಂದಕ್ಕಾಗಿ ಎನೇನೋ ಬಳಸುವುದು ಸರಿಯಲ್ಲ. ತಾಲೂಕಿನಲ್ಲಿ ಕನ್ನಡ ಭವನವನ್ನು ನಿರ್ಮಾಣ ಮಾಡಬೇಕೆನ್ನುವ ಹಕ್ಕೊತ್ತಾಯವನ್ನು ಈ ವೇದಿಕೆಯ ಮೂಲಕ ಮಾಡುತ್ತಿದ್ದು ಶಾಸಕರು ಮತ್ತು ಶಿರಾಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಬಹಳ ಕ್ರಿಯಾಶೀಲರು ಮತ್ತು ಸಾಹಿತ್ಯಾಭಿಮಾನಿಗಳೂ ಆಗಿರುವುದರಿಂದ ಕನ್ನಡ ಭವನವನ್ನು ಶಿರಾಲಿಯಲ್ಲಿಯೇ ನಿರ್ಮಾಣ ಮಾಡುವಂತೆ ಸಮ್ಮೇಳನದ ಮೂಲಕ ಒತ್ತಾಯಪಡಿಸಿದರು.

ಉದ್ಘಾಟನೆ: ತಾಲೂಕಾ 9ನೆ ಸಾಹಿತ್ಯ ಸಮ್ಮೇಳನವನ್ನು ಶಾಸಕ ಮಂಕಾಳ ಎಸ್. ವೈದ್ಯ ಅವರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾಹಿತಿಗಳು ಸದಾ ಸರ್ವರ ಹಿತವನ್ನು ಬಯಸುವವರು. ಸದಾ ತೂಕದ ಮಾತುಗಳನ್ನೇ ಆಡುವ ಸಾಹಿತಿಗಳು ಎಂದು ಬೇರೆಯವರಿಗೆ ಕೆಡುಕನ್ನ ಬಯಸರು ಎಂದರು.

ಉತ್ತರ ಕನ್ನಡ ಜಿಲ್ಲೆಯ ಮಕ್ಕಳಲ್ಲಿಯೇ ಸಾಹಿತ್ಯಿಕ ಗುಣ ಬೆಳೆದು ಬಂದಿದ್ದು ರಾಜ್ಯದಲ್ಲಿಯೇ ಹೆಮ್ಮೆಯಾಗಿದೆ. ಮುಂದೆ ಕರ್ನಾಟವಷ್ಟೇ ಅಲ್ಲ, ದೇಶ ವಿದೇಶದಲ್ಲಿಯೂ ಕೂಡಾ ಇಲ್ಲಿನ ಸಾಹಿತಿಗಳ ಹೆಸರು ಮುಂಚೂಣಿಯಲ್ಲಿರುವಂತಾಗಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಿಕೊಂಡಲ್ಲಿ ಮುಂದೆ ಉತ್ತಮ ಸಾಹಿತಿಗಳಾಗಿ ಕನ್ನಡದ ಬಾವುಟವನ್ನು ಎತ್ತರಕ್ಕೆ ಎರಿಸಲು ಸಾಧ್ಯವಾಗುವುದು. ಜನಪ್ರತಿನಿಧಿಗಳು ತಮ್ಮ ಭಾಗದ ಜನತೆಯ ಹಿಂದೆ ನಿಂತು ಪ್ರೋತ್ಸಾಹಿಸಬೇಕು. ನನ್ನ ಕ್ಷೇತ್ರದಲ್ಲಿ ಶಿಕ್ಷಣ, ಕ್ರೀಡೆ, ಸಾಹಿತ್ಯಕ್ಕೆ ಸದಾ ನನ್ನ ಪ್ರೋತ್ಸಾಹ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ ಅವರು ಪ್ರತಿಯೋರ್ವರೂ ಕೂಡಾ ವಿನಯವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ಶಾಲೆಗಳ ಅಭಿವೃದ್ಧಿಯಾಗಬೇಕಾಗಿದ್ದು ತನ್ಮೂಲಕ ಕನ್ನಡ ಕಲಿಕೆಗೆ ಸಹಕಾರ ನೀಡಬೇಕಾಗಿದೆ. ಕಳೆದ 70 ವರ್ಷಗಳಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಯ ವೇಗ ಸಾಲದು ಎಂದು ಅಭಿಪ್ರಾಯ ಪಟ್ಟ ಅವರು ಕನ್ನಡವನ್ನು ಉಳಸಿ ಬೆಳೆಸಬೇಕಾದರೆ ಕನ್ನಡ ಶಾಲೆಗಳಿಂದ ಮಾತ್ರ ಸಾಧ್ಯ ಎಂದರು.

ಸಾರ್ವಜನಿಕ ಜೀವನದಲ್ಲಿ ಪ್ರತಿಯೊಂದನ್ನೂ ಸ್ವೀಕರಿಸುವ ಗುಣ ಹೊಂದಿರಬೇಕು. ಟೀಕೆಗಳನ್ನು ಕೂಡಾ ಸ್ವೀಕರಿಸಬೇಕು. ಟೀಕಾಕಾರರು ತಮ್ಮ ಮಾರ್ಗದರ್ಶಕರು ಎಂದು ತಿಳಿದು ಮುನ್ನಡೆಯಬೇಕು ಎಂದ ಅವರು ತನ್ನ ರಾಜಕೀಯ ಜೀವನದಲ್ಲಿ ಟೀಕಾಕಾರರಿಗೆ ಉತ್ತರ ನೀಡುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಮುಖ್ಯ ಅತಿಥಿ ಸಾಹಿತಿ ವಿ.ಗ.ನಾಯಕ ಮಾತನಾಡಿ ಸಾಹಿತ್ಯವು ಮನಸ್ಸುಗಳನ್ನು ಹತ್ತಿರವಾಗಿಸುವ ಕೆಲಸ ಮಾಡುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಮನಸುಗಳು ಹೆಚ್ಚು ಹೆಚ್ಚು ಭಾಗವಹಿಸಿದಾಗ ಮಾತ್ರ ಇಂತಹ ಆಚರಣೆಗೆ ಅರ್ಥ ಬರುತ್ತದೆ. ಭಟ್ಕಳದ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಜನತೆಯ ಕನ್ನಡದ ವ್ಯಾಮೋಹ ಶ್ಲಾಘನೀಯ ಎಂದರು.

ಇನ್ನೋರ್ವ ಅತಿಥಿ ಸಾಹಿತಿ ಮೋಹನ ಹಬ್ಬು ಮಾತನಾಡಿದರು. ಪುಸ್ತಕ ಮಳಿಗೆಗಳನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಉದ್ಘಾಟಿಸಿದರು. ಕಲಾ ಪ್ರದರ್ಶನವನ್ನು ಗ್ರಾ. ಪಂ. ಅಧ್ಯಕ್ಷ ವೆಂಕಟೇಶ ನಾಯ್ಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ತಾ.ಪಂ.ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಸದಸ್ಯೆ ಮಾಲತಿ ಮೋಹನ ದೇವಡಿಗ, ತಹಸೀಲ್ದಾರ್ ವಿ,ಎನ್, ಬಾಡಕರ್, ತಾ.ಪಂ. ಕಾ.ನಿ. ಅಧಿಕಾರಿ ಸಿ.ಟಿ.ನಾಯ್ಕ, ಬಿ.ಇ.ಓ. ಎಂ. ಆರ್. ಮುಂಜಿ, ಸುಭಾಷ ಕೊಪ್ಪಿಕರ್, ಯಲ್ಲಮ್ಮ, ಶಂಕರ ನಾಯ್ಕ, ಶ್ರೀಧರ ಮೊಗೇರ, ಮಾದೇವ ನಾಯ್ಕ, ಶಾರದಾ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

ತಾ.ಕ.ಸಾ.ಪ. ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿದರು. ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ನೆರವೇರಿಸಿ ಆಶಯ ನುಡಿಗಳನ್ನಾಡಿದರು. ಎಂ.ಪಿ. ಭಂಡಾರಿ ದ್ವಾರಗಳ ಪರಿಚಯ ಮಾಡಿದರು. ಪ್ರಕಾಶ ಶಿರಾಲಿ ಸಮ್ಮೇಳನಾಧ್ಯಕ್ಷ ಪರಿಚಯ ಮಾಡಿದರು. ನಾರಾಯಣ ನಾಯ್ಕ ಮತ್ತು ಮಂಜುಳಾ ಶಿರೂರು ನಿರೂಪಿಸಿದರು. ಗಣೇಶ ಯಾಜಿ ವಂದಿಸಿದರು. ಸಮ್ಮೇಳನಕ್ಕೂ ಪೂರ್ವ ಕಲಾ ತಂಡಗಳೊಂದಿಗೆ ಶ್ರೀ ಹಾದಿಮಾಸ್ತಿ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಸಮ್ಮೇಳನ ಸಭಾಂಗಣಕ್ಕೆ ತಲುಪಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X