ಇನ್ನೂ ಹಕ್ಕು ಪತ್ರ ಸಿಗದ ಬಾಳೆಪುಣಿ ಗ್ರಾಪಂ ಕೆಲ ನಿವಾಸಿಗಳು: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಖಾದರ್

ಬಂಟ್ವಾಳ, ಮಾ. 1: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ ಫಲಾನುಭವಿಗಳಿಗೆ ಹಕ್ಕುಪತ್ರ ನೀಡದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಆಹಾರ ಸಚಿವ ಯು.ಟಿ.ಖಾದರ್ ಅವರು ಬಂಟ್ವಾಳ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಸಹಿತ ಗ್ರಾಮ ಕರಣಿಕರನ್ನು ತರಾಟೆಗೆತ್ತಿಕೊಂಡ ಘಟನೆ ಗುರುವಾರ ರಾತ್ರಿ ನಡೆಯಿತು.
ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕಾಗಿತ್ತು. ಆದರೆ ಸುಮಾರು ಇಪ್ಪತ್ತು ಮಂದಿಯ ಹಕ್ಕಪತ್ರ ಇನ್ನೂ ಕೂಡ ಸಿದ್ಧವಾಗಿರಲಿಲ್ಲ. ಈ ಬಗ್ಗೆ ಫಲಾನುಭವಿಗಳು ಅದಾಗಲೇ ಹಣ ಪಾವತಿಸಿದ್ದರೂ, ಅವರಿಗೆ ಹಕ್ಕಪತ್ರ ಸಿಗದಿರುವುದರಿಂದ ಆಕ್ರೋಶಿತರಾದ ಸಚಿವ ಖಾದರ್ ಅವರು, ಫಲಾನುಭವಿಗಳೊಂದಿಗೆ ನೇರವಾಗಿ ಬಂಟ್ವಾಳ ಮಿನಿವಿಧಾನಸೌಧಕ್ಕೆ ಅಗಮಿಸಿ, ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಗ್ರಾಮ ಕರಣಿಕರನ್ನು ತರಾಟೆಗೆತೆಗೆದುಕೊಂಡರು.
ಸ್ಥಳೀಯ ವ್ಯಕ್ತಿಯೊಬ್ಬ ಫಲಾನುಭವಿಗಳಿಂದ ಹಕ್ಕುಪತ್ರ ಕೊಡಿಸುವುದಾಗಿ ಸಾವಿರಾರು ರೂ. ಪಡೆದು ಅದನ್ನು ಪಾವತಿಸಿರಲಿಲ್ಲ. ಇದರಿಂದ ಸಚಿವರು ಮತ್ತಷ್ಟ ಆಕ್ರೋಶಿತರಾದರು.
Next Story





