‘ದ.ಕ.ಜಿಲ್ಲೆಯ ಮುಸ್ಲಿಂ ಸಂಘ ಸಂಸ್ಥೆಗಳ ಮಾಹಿತಿ ಕೈಪಿಡಿ’ಗೆ ಮಾಹಿತಿ ನೀಡಲು ಮನವಿ
ಮಂಗಳೂರು, ಮಾ.1: ದ.ಕ ಜಿಲ್ಲೆಯಲ್ಲಿ ಅನೇಕ ಮುಸ್ಲಿಂ ಸಮಾಜ ಸೇವಾ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಸಮುದಾಯದ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಈ ಸಂಸ್ಥೆಗಳು ತಮ್ಮದೇ ಕೊಡುಗೆಗಳನ್ನು ನೀಡುತ್ತಿವೆ. ಈ ಮುಸ್ಲಿಂ ಸಮಾಜ ಸೇವಾ ಸಂಸ್ಥೆಗಳು ಒದಗಿಸುವ ಸೇವೆಯ ವಿವರವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ಈ ಸಂಸ್ಥೆಗಳ ಮಾಹಿತಿ ಪುಸ್ತಕ ರಚಿಸಸಲು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನಿರ್ಧರಿಸಿದೆ.
ಸಂಸ್ಥೆಯ ಹೆಸರು, ಸ್ಥಾಪನೆಯಾದ ವರ್ಷ, ಸ್ಥಾಪಕರ ಹೆಸರು, ಆಡಳಿತ ಮಂಡಳಿ ಸದಸ್ಯರ ವಿವರ, ಸಂಸ್ಥೆಯ ಮುಖ್ಯ ಧ್ಯೇಯೋದ್ದೇಶಗಳು, ಸಂಸ್ಥೆಯ ಪ್ರಮುಖ ಕಾರ್ಯಚಟುವಟಿಕೆಗಳ ಕ್ಷೇತ್ರ, ಸಂಸ್ಥೆ ನಡೆಸುತ್ತಿರುವ ಕಾರ್ಯಕ್ರಮಗಳ ವಿವರ, ಸಂಸ್ಥೆ ಹಾಕಿಕೊಂಡಿರುವ ಮುಂದಿನ ಯೋಜನೆ, ಸಂಸ್ಥೆಗೆ ಸಂದ ಗೌರವ ಮತ್ತು ಪ್ರಶಸ್ತಿಗಳ ವಿವರ, ಸಂಪರ್ಕ ಸಂಖ್ಯೆ, ದೂರವಾಣಿ/ಮೊಬೈಲ್.
ಸಂಘಸಂಸ್ಥೆಗಳು ನೀಡಿದ ಮಾಹಿತಿಯನ್ನು ಪರಿಶೀಲಿಸಿ ವಿವರಗಳನ್ನು ಪುಸ್ತಕದಲ್ಲಿ ದಾಖಲಿಸಲಾಗುವುದು. ಜನಸಾಮಾನ್ಯರು ತಮ್ಮ ಅವಶ್ಯಕತೆಗೆ ಯಾವ ಸಂಸ್ಥೆಯನ್ನು ಸಂಪರ್ಕಿಸಬೇಕೆಂಬ ಮಾಹಿತಿ ಕೂಡಾ ಈ ಪುಸ್ತಕದಲ್ಲಿ ಲಭ್ಯವಿರಲಿದೆ.
ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2 (ದೂ: 0824-4267883, 7760508664) ಈ ವಿಳಾಸವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





