ಕೆಪಿಸಿಸಿ ವಕ್ತಾರೆಯಾಗಿ ಶಬಿನಾ ಸುಲ್ತಾನ ನೇಮಕ

ಬೆಂಗಳೂರು,ಮಾ.1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ವಕ್ತಾರೆಯಾಗಿ ಕಾಂಗ್ರೆಸ್ ನಾಯಕಿ ಶಬಿನಾ ಸುಲ್ತಾನ ಅವರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿಗೆ 32 ನೂತನ ವಕ್ತಾರರು ಹಾಗು 14 ಮಂದಿ ಟಿವಿ ಚರ್ಚೆಗಳಲ್ಲಿ ಪಕ್ಷವನ್ನು ಪ್ರತಿನಿಧಿಸುವವರ ಪಟ್ಟಿಯನ್ನು ಪಕ್ಷದ ಸಂವಹನ ಘಟಕದ ಅಧ್ಯಕ್ಷ ಫ್ರೊ.ಕೆ.ಇ. ರಾಧಾಕೃಷ್ಣ ಅವರು ಪ್ರಕಟಿಸಿದ್ದಾರೆ.
ಯುವ ನಾಯಕಿ ಶಬಿನಾ ಸುಲ್ತಾನ ಮಾಜಿ ಕೇಂದ್ರ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರ ಪುತ್ರಿ.
Next Story





