‘ವಿವಿಧ ಮೂಲಭೂತ ಸೌಲಭ್ಯಗಳ ಲೋಕಾರ್ಪಣೆ’
.jpg)
ಬೆಂಗಳೂರು, ಮಾ.1: ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಓಕಳಿಪುರ ಮೇಲು ಸೇತುವೆ ಹಾಗೂ ಕೆಳ ಸೇತುವೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಿದರು.
ಗುರುವಾರ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ವತಿಯಿಂದ ನಗರದ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಸಂಪರ್ಕ ಮೇಲ್ಸೇತುವೆ ಹಾಗೂ ರಾಜಾಜಿನಗರಕ್ಕೆ ಸಂಪರ್ಕ ರಸ್ತೆ, ಸ್ವಾತಂತ್ರ ಉದ್ಯಾನದಲ್ಲಿ ಪಾಲಿಕೆಯಿಂದ ನಿರ್ಮಿಸುತ್ತಿರುವ ಬಹುಮಹಡಿ ನಿಲುಗಡೆ ತಾಣ ಹಾಗೂ ಚರ್ಚ್‌ಸ್ಟ್ರೀಟ್ ರಸ್ತೆಯಲ್ಲಿ ಟೆಂಡರ್ ಶ್ಯೂರ್ ರಸ್ತೆಗೆ ಚಾಲನೆ ನೀಡಿದರು.
ಓಕಳಿಪುರಂ ಅಷ್ಟಪಥ ಕಾರಿಡಾರ್, ಚರ್ಚ್‌ಸ್ಟ್ರೀಟ್ ಟೆಂಡರ್ ಶ್ಯೂರ್ ರಸ್ತೆ ಹಾಗೂ ಸ್ವತಂತ್ರ ಉದ್ಯಾನದಲ್ಲಿನ ಬಹುಮಹಡಿ ಕಟ್ಟಡದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿದ ಸಿದ್ಧರಾಮಯ್ಯ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವರ: ಸ್ವಾತಂತ್ರ ಉದ್ಯಾನವನದಲ್ಲಿ ಉದ್ಘಾಟನೆಗೊಂಡಿರುವ ಮಹಡಿಯಲ್ಲಿ 50 ಕಾರುಗಳು ಹಾಗೂ 36 ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಚರ್ಚ್‌ಸ್ಟ್ರೀಟ್‌ನಲ್ಲಿ ನಿರ್ಮಿಸಿರುವ 715 ಮೀಟರ್ ರಸ್ತೆಯನ್ನು ಅಂತಾರಾಷ್ಟ್ರೀಯ ದರ್ಜೆಯಲ್ಲಿ ಕಾರ್ಬಲ್ ಸ್ಟೋನ್ ಬಳಸಿ ನಿರ್ಮಿಸಲಾಗಿದ್ದು, ರಸ್ತೆಯಲ್ಲಿ ಹಲವು ಕರಕುಶಲ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೆ, ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗಿದೆ.







