ಕೊಳ್ಳೇಗಾಲ: ಕೆರೆಯ ತಡೆಗೋಡೆಗೆ ಬೈಕ್ ಢಿಕ್ಕಿ; ಹಿಂಬದಿ ಸವಾರ ಮೃತ್ಯು

ಕೊಳ್ಳೇಗಾಲ,ಮಾ.2: ಕೆರೆಯ ಕಬ್ಬಿಣದ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಚೆಲುವನಹಳ್ಳಿ ಬಸ್‍ನಿಲ್ದಾಣದ ಸಮೀಪದಲ್ಲಿ ಜರುಗಿದೆ.
ಮಳ್ಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಪುಟ್ಟಲಿಂಗಶೆಟ್ಟಿ(49) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ತನ್ನ ಮಗ ಪ್ರದೀಪ್ ಜೊತೆಯಲ್ಲಿ ಕೊಳ್ಳೇಗಾಲದಿಂದ ಬೆಳಕವಾಡಿ ಮಾರ್ಗವಾಗಿ ಪೂರಿಗಾಲಿಗೆ ಹಿಂತಿರುಗುವ ವೇಳೆ ಸರಗೂರು ಕೆರೆಯ ಏರಿಯ ಮೇಲೆ ಹಾಕಿರುವ ತಡೆಗೋಡೆಗೆ ಚೆಲುವನಹಳ್ಳಿ ಬಸ್ ನಿಲ್ದಾಣ ಸಮೀಪದಲ್ಲಿ ಢಿಕ್ಕಿ ಹೊಡೆದು ಹಿಂಬದಿ ಕುಳಿತಿದ್ದ ಪುಟ್ಟಲಿಂಗಶೆಟ್ಟಿಗೆ ತಲೆ ಹಿಂಬಾಗಕ್ಕೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಗಾರದಲ್ಲಿ ಶವಪರೀಕ್ಷೆ ನಡೆಸಿ ಅವರ ವಾರಸುದಾರರಿಗೆ ನೀಡಲಾಯಿತು.
Next Story





