ಅಝರ್‌ಬೈಜಾನ್: ಬೆಂಕಿ ಅವಘಢದಲ್ಲಿ ಕನಿಷ್ಠ 24 ಸಾವು

ಬಾಕು (ಅಝರ್‌ಬೈಜಾನ್), ಮಾ. 2: ಅಝರ್‌ಬೈಜಾನ್ ರಾಜಧಾನಿ ಬಾಕು ಅಲ್ಲಿರುವ ಮಾದಕದ್ರವ್ಯ ಪುನರ್ವಸತಿ ಚಿಕಿತ್ಸಾಲಯದಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅಪಘಾತ ಸಂಭವಿಸಿದ್ದು, ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಎಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘‘ಬಾಕು ಅಲ್ಲಿರುವ ರಿಪಬ್ಲಿಕನ್ ನಾರ್ಕೊಲಾಜಿಕಲ್ ಸೆಂಟರ್‌ನಲ್ಲಿ ಮುಂಜಾನೆ 6:10ಕ್ಕೆ ಬೆಂಕಿ ಅಪಘಾತ ಸಂಭವಿಸಿದೆ’’ ಎಂದು ಜನರಲ್ ಪ್ರಾಸಿಕ್ಯೂಟರ್ ಕಚೇರಿ ಹಾಗೂ ಆರೋಗ್ಯ, ಆಂತರಿಕ ಮತ್ತು ತುರ್ತು ಸಚಿವಾಲಯಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.
ಒಂದು ಅಂತಸ್ತಿನ ಮರದ ವಾರ್ಡ್‌ಗೆ ಬೆಂಕಿ ಹತ್ತಿಕೊಂಡಿತು ಎಂದಿದೆ.
ವಿದ್ಯುತ್ ಜಾಲವೊಂದರ ವೈಫಲ್ಯವೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಹೇಳಿಕೆ ತಿಳಿಸಿದೆ.
ಬಾಕು ಅಲ್ಲಿ 1995 ಅಕ್ಟೋಬರ್‌ನಲ್ಲಿ ಮೆಟ್ರೊ ರೈಲೊಂದರಲ್ಲಿ ನಡೆದ ಬೆಂಕಿ ಅಪಘಾತದಲ್ಲಿ 289 ಮಂದಿ ಪ್ರಾಣ ಕಳೆದುಕೊಂಡಿದ್ದರು.
Next Story





