ಬಿ.ಸಿ.ರೋಡ್: ಸರಣಿ ಅಪಘಾತ; ನಾಲ್ಕು ಮಂದಿಗೆ ಗಾಯ

ಬಂಟ್ವಾಳ, ಮಾ. 2: ಬಿ.ಸಿ.ರೋಡಿನ ಸರ್ಕಲ್ ಸಮೀಪದ ಸೇತುವೆ ಬಳಿ ಶುಕ್ರವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದೆ.
ಓಮ್ನಿ ಕಾರು ಹಾಗೂ ಬೈಕ್ ನಡುವೆ ಈ ಅಪಘಾತ ಸಂಭವಿಸಿದ್ದು, ಹಿಂದಿನಿಂದ ಬರುತ್ತಿದ್ದ ಕಂಟೈನರ್ ಲಾರಿಯು ಮಾರುತಿ ಕಾರಿಗೆ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಬೈಕ್ ನಲ್ಲಿದ್ದ ಮಗು ಸಹಿತ ಮೂವರಿಗೆ ಹಾಗೂ ಓಮ್ನಿ ಕಾರು ಚಾಲಕನಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಅದರ ಹಿಂದೆ ಬರುತ್ತಿದ್ದ ಬೈಕ್ ಢಿಕ್ಕಿಯಾಗಿದೆ ಎಂದು ದೂರಲಾಗಿದೆ.
ಈ ಸಂಬಂಧ ಸ್ಥಳಕ್ಕೆ ಬಂಟ್ವಾಳ ಠಾಣೆ ಪೊಲೀಸರು ಹಾಗೂ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Next Story





