ಮಂಡ್ಯ: ಪ್ರೇಯಸಿಯ ಪೋಷಕರ ಕಿರುಕುಳ ಆರೋಪ; ಯುವಕ ಆತ್ಮಹತ್ಯೆ

ಮಂಡ್ಯ, ಮಾ.2: ತಾನು ಪ್ರೀತಿಸಿದ ಯುವತಿಯ ಪೋಷಕರ ಕಿರುಕುಳ ತಾಳಲಾರದೆ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ನಾಯಿಸಿಂಗನಹಳ್ಳಿಯಲ್ಲಿ ನಡೆದಿದೆ.
ಮಹೇಶ್(30) ಆತ್ಮಹತ್ಯೆ ಮಾಡಿಕೊಂಡವ. ಈತ ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಇದಕ್ಕೆ ಯುವತಿ ಪೋಷಕರು ಅಡ್ಡಿಯಾಗಿದ್ದರು. ಜತೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮಹೇಶ್ ತನ್ನ ಡೈರಿಯಲ್ಲಿ ತನ್ನ ಸಾವಿಗೆ ಯುವತಿ ಪೋಷಕರ ಕಿರುಕುಳವೇ ಕಾರಣವೆಂದು ಬರೆದಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





