ಬ್ರಹ್ಮಾವರದಲ್ಲಿ ಮನೆಗೆ ಬೆಂಕಿ: ಅಪಾರ ನಷ್ಟ
ಬ್ರಹ್ಮಾವರ, ಮಾ.2: ಉಪ್ಪೂರು ಗ್ರಾಮದ ಅಮ್ಮುಂಜೆ ಸರಸ್ವತಿ ನಗರ ಎಂಬಲ್ಲಿ ರಾಧಾ (50) ಎಂಬವರ ಮನೆಗೆ ಸ್ಥಳೀಯ ನಿವಾಸಿ ಶಿವ ಎಂಬಾತ ಮಾ.1ರಂದು ರಾತ್ರಿ 11ಗಂಟೆ ಸುಮಾರಿಗೆ ಬೆಂಕಿ ಹಚ್ಚಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿಯಿಂದ ಮನೆಯ ತೆಂಗಿನ ಸೋಗೆಯ ತಟ್ಟಿ-ಮಡಲು ಸಂಪೂರ್ಣ ಸುಟ್ಟು ಹೋಗಿ ಮನೆಯೊಳಗಿದ್ದ 3 ಫೈಬರ್ ಕುರ್ಚಿ, ಬಟ್ಟೆ ಬರೆಗಳು ಮತ್ತು ಅಡುಗೆ ಪಾತ್ರೆಗಳು ಸಂಪೂರ್ಣ ಸುಟ್ಟು ಹೋಗಿ ಸುಮಾರು 10,000 ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





