ಪ್ಯಾರಿಸ್ ನಲ್ಲಿ ಭಾರತೀಯ ವಜ್ರ ವ್ಯಾಪಾರಿಗಳ ದರೋಡೆ

ಪ್ಯಾರಿಸ್, ಮಾ. 2: ದರೋಡೆಕೋರರು ಪ್ಯಾರಿಸ್ ಮೆಟ್ರೊ ರೈಲು ನಿಲ್ದಾಣದಲ್ಲಿ ಇಬ್ಬರು ಭಾರತೀಯ ವಜ್ರ ವ್ಯಾಪಾರಿಗಳಿಂದ 3 ಲಕ್ಷ ಯುರೊ (ಸುಮಾರು 2.41 ಕೋಟಿ ರೂಪಾಯಿ) ಬೆಲೆಯ ಮುತ್ತುಗಳನ್ನು ಅಪಹರಿಸಿದ್ದಾರೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.
‘‘ಇಬ್ಬರು ವಜ್ರ ವ್ಯಾಪಾರಿಗಳು ಸೋಮವಾರ ಮಧ್ಯಾಹ್ನ ವಾಣಿಜ್ಯ ಸಭೆಯೊಂದರಲ್ಲಿ ಭಾಗವಹಿಸಿದ ಬಳಿಕ ಮೆಟ್ರೊ ನಿಲ್ದಾಣಕ್ಕೆ ವಾಪಸಾಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅವರ ಮೇಲೆ ದಾಳಿ ನಡೆಸಿದರು’’ ಎಂದು ಅದು ಹೇಳಿದೆ.
Next Story





