Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅರಿವಿನ ಕನ್ನಡಿಯ ಮುಂದೆ....

ಅರಿವಿನ ಕನ್ನಡಿಯ ಮುಂದೆ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ3 March 2018 12:05 AM IST
share
ಅರಿವಿನ ಕನ್ನಡಿಯ ಮುಂದೆ....

‘ಅರಿವಿನ ಕನ್ನಡಿ’ ನರಸಿಂಹ ಮೂರ್ತಿ ಹೂವಿನಹಳ್ಳಿ ಅವರ ವಿಮರ್ಶಾ ಸಂಕಲನ. ವಿಮರ್ಶೆ, ಕಾದಂಬರಿ, ಸಂಶೋಧನೆ ಹೀಗೆ ಮೂರು ವಿಭಿನ್ನ ಪ್ರಕಾರಗಳಲ್ಲಿ ಈಗಾಗಲೇ ಕೃತಿಗಳನ್ನು ಪ್ರಕಟಿಸಿರುವ ಇವರು, ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳ ಸಾಹಿತ್ಯ ಕೃತಿಗಳನ್ನು ವಿಮರ್ಶೆಗೆ ಒಳಪಡಿಸಲು ಯತ್ನಿಸಿದ್ದಾರೆ. ಕುಮಾರವ್ಯಾಸನಿಂದ ಹಿಡಿದು ಕಾರ್ನಾಡ್ ವರೆಗೆ ಪ್ರಮುಖ ಲೇಖಕರ ಜೊತೆಗೇ ವಚನಯುಗವನ್ನು ಕೂಡ ಈ ಕಾಲದ ವಿಮರ್ಶಾ ನೋಟಗಳ ಮೂಲಕ ಮರು ಓದಿಗೆ ಒಳಪಡಿಸಿದ್ದಾರೆ. ಕುವೆಂಪು ಕೃತಿಗಳ ಮರು ಓದಿನ ಮೂಲಕ, ಕುವೆಂಪು ಖಂಡರಿಸುವ ಬೇರೆ ಬೇರೆ ಪಾತ್ರಗಳನ್ನು ವರ್ತಮಾನದ ರಾಜಕೀಯಕ್ಕೆ ತಳಕು ಹಾಕುತ್ತಾರೆ. ಶೋಷಿತ ಸಮುದಾಯದಿಂದ ಬಂದ ಪುರಾಣ ಪಾತ್ರಗಳನ್ನು ಮುಂದಿಟ್ಟುಕೊಂಡು, ವರ್ತಮಾನದ ಜಾತಿ ಮತ್ತು ವರ್ಗ ಸಂಘರ್ಷಗಳ ನೆಲೆಗಳನ್ನು ಶೋಧಿಸಿದ್ದಾರೆ. ಕುವೆಂಪು ಅವರ ಮಹಾಕಾದಂಬರಿಯಲ್ಲಿ ಒಂದಾದ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಅವಲೋಕಿಸುತ್ತಾ, ಅಂದಿನ ಜನರ ಬದುಕು, ನಡತೆ, ಮಕ್ಕಳ ಆಟಪಾಠಗಳು, ಪುರೋಹಿತಶಾಹಿ ಹಿಡಿತ, ಗೂಂಡಾಗಿರಿಯ ಹಿಂಸೆ, ಶೂದ್ರರ ಬದುಕಿನ ಕಷ್ಟಗಳು, ನೋವುಗಳು, ಜೀತಪದ್ಧತಿ, ಸಾರಿಗೆ ಸಂಪರ್ಕ, ಸ್ತ್ರೀಯರ ಬದುಕಿನ ವಿವರಗಳು, ಭೂಮಾಲಕರ ಕ್ರೌರ್ಯಗಳನ್ನು ಅಧ್ಯಯನ ಮಾಡಿ ಚರ್ಚೆಗೆ ಒಳಪಡಿಸಿದಾಗ ಅಂದಿಗೂ ಇಂದಿಗೂ ಬದಲಾವಣೆ ಆಗಿರುವ, ಆಗದಿರುವ ಅಂಶಗಳನ್ನು ಅವರು ಚರ್ಚಿಸತ್ತಾರೆ. ಕುಮಾರವ್ಯಾಸ ಭಾರತವನ್ನು ಅವಲೋಕಿಸುತ್ತಾ ಅದರೊಳಗಿರುವ ಸಮಕಾಲೀನ ರಾಜಕೀಯ ಸಂದೇಶಗಳನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಬೇಂದ್ರೆ ಮತ್ತು ಕುಮಾರವ್ಯಾಸನನ್ನು ಜೊತೆಗಿಟ್ಟು ನೋಡುವ ಪ್ರಯತ್ನವನ್ನೂ ಮಾಡುತ್ತಾರೆ. ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕೃತಿಯಲ್ಲಿ ಆಧುನಿಕ ಮತ್ತು ಸಂಪ್ರದಾಯದ ಸಂಘರ್ಷವನ್ನು ಕಟ್ಟಿಕೊಡುತ್ತಾರೆ. ಜಾಗತೀಕರಣ ಘಟ್ಟದ ಭಾರತವನ್ನು ತೇಜಸ್ವಿ ಅವರ ‘ಜುಗಾರಿ ಕ್ರಾಸ್’ ಕೃತಿಯಲ್ಲಿ ಅವಲೋಕಿಸುತ್ತಾರೆ. ಬೇಂದ್ರೆಯವರ ಶ್ರಾವಣ ಕವಿತೆಯಲ್ಲಿ ಹೊಸ ಹೊಳಹುಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಗಿರೀಶ್ ಕಾರ್ನಾಡ್‌ರ ‘ತುಘಲಕ್’ ಮೂಲಕ ಚರಿತ್ರೆಯ ಹೊಸ ಗ್ರಹಿಕೆಗಳನ್ನು ಗುರುತಿಸುತ್ತಾರೆ. ವಚನ ಲೋಕದೊಳಗೆ ಪ್ರವೇಶಿಸುತ್ತಾ ಅದರೊಳಗಿಂದ ಸಿಡಿದ ಪರ್ಯಾಯ ಸಂಸ್ಕೃತ ಮತ್ತು ಸಾಮಾಜಿಕ ಚಳವಳಿಯ ಹಂತಗಳನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಇಂತಹ ಒಟ್ಟು 14 ವಿಮರ್ಶಾ ಬರಹಗಳಿವೆ.
 ಪ್ರೇರಣಾ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 158 ಪುಟಗಳ ಈ ಕೃತಿಯ ಮುಖಬೆಲೆ 170 ರೂಪಾಯಿ. ಆಸಕ್ತರು 94805 83913 ೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X