Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಮೃತ ಶಿಲೆಯಲ್ಲಿ ಕಾವ್ಯ ಕೊರೆದಾಗ...

ಅಮೃತ ಶಿಲೆಯಲ್ಲಿ ಕಾವ್ಯ ಕೊರೆದಾಗ...

ನಕ್ಕಾಶಿ ಕಲಾವಿದರು

ಎಂ.ಎ. ಸಿರಾಜ್ಎಂ.ಎ. ಸಿರಾಜ್3 March 2018 5:35 PM IST
share
ಅಮೃತ ಶಿಲೆಯಲ್ಲಿ ಕಾವ್ಯ ಕೊರೆದಾಗ...

ರಾಜಸ್ಥಾನಿ ಕುಶಲಕರ್ಮಿಗಳ ಕೈಗೆ ಆ ಕುಶಲಕಲೆ ಬಂದ ಬಳಿಕ, ಅವರಲ್ಲಿ ಕೆಲವರು ಶಿಲ್ಪದ ಮೇಲೆ ಅಮೂಲ್ಯ ಹರಳುಗಳನ್ನು ಕೊರೆದು ಕೂರಿಸಲಾರಂಭಿಸಿದರು. ಮುಂದಕ್ಕೆ ಇದನ್ನು ‘ಕುಂದನ್-ಜಡಾಯ’ ಕಲೆ ಎಂದು ಕರೆಯಲಾಯಿತು. ಇಂದು ಸುಮಾರು 5,000 ಮಂದಿ ಕುಶಲಕರ್ಮಿಗಳು ಇಂತಹ ಕಲಾ ವಸ್ತುಗಳನ್ನು ಜೈಪುರ, ಉದಯಪುರನಲ್ಲಿ ತಯಾರಿಸುತ್ತಿದ್ದಾರೆ.

ವಿಶ್ವ ಪ್ರಸಿದ್ಧ ಆಗ್ರಾದ ತಾಜ್‌ಮಹಲ್ ನಿರ್ಮಿಸಲು ಬಳಸಿದ ಅಮೃತಶಿಲೆ ರಾಜಸ್ಥಾನದ ಮಕ್ರಾನಾ ಗಣಿಗಳಿಂದ ಪೂರೈಕೆ ಯಾಗಿತ್ತು. ಆದರೆ ಮೊಗಲ್ ಚಕ್ರವರ್ತಿ ಷಹಜಹಾನನ ಕನಸು ಅಮೃತಶಿಲೆಯ ರೂಪ ಪಡೆಯಲು ಸಾಧ್ಯವಾದದ್ದು ರಾಜಸ್ಥಾನದ ಸಂಗ್‌ತರಾಶ್ (ಕಲ್ಲು ಕೊರೆಯುವವರು, ಶಿಲ್ಪಿಗಳು) ಹಾಗೂ ನಕ್ಕಾಶ್ (ಕೆತ್ತನೆಯವರು) ಪಟ್ಟ ಶ್ರಮದಿಂದಾಗಿ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಸಾಮ್ರಾಜ್ಯಗಳು ಕಣ್ಮರೆಯಾದ ಬಳಿಕ ಈ ಶಿಲ್ಪ ಕಲಾವಿದರಿಗೆ ಆಶ್ರಯದಾತರು ಇಲ್ಲವಾದರು. ರಾಜಮಹಾರಾಜರುಗಳ ಪತನದ ಶತಮಾನದ ಬಳಿಕ ಈ ಕುಶಲಕರ್ಮಿಗಳು ಇಂದಿಗೂ ದೇವಾಲಯಗಳಲ್ಲಿ, ಪೆವಿಲಿಯನ್‌ಗಳಲ್ಲಿ ಮತ್ತು ಪಂಚತಾರಾ ಹೊಟೇಲ್‌ಗಳ ಗಝೆಬೊಗಳಲ್ಲಿ ಶಿಲೆಗೆ ಕನಸುಗಳನ್ನು ತುಂಬುತ್ತಿದ್ದಾರೆ. ಅವರಲ್ಲಿ ಗಣನೀಯ ಸಂಖ್ಯೆಯ ಕುಶಲಕರ್ಮಿಗಳು ಎಂಪೋರಿಯಮ್‌ಗಳಿಗಾಗಿ ಹಾಗೂ ರಫ್ತಿಗಾಗಿ ಆಲಂಕಾರಿಕ ವಸ್ತುಗಳನ್ನು, ಕಲಾಕೃತಿಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ಅಮೃತಶಿಲೆಯ ಮೇಲೆ ಅಮೂಲ್ಯ ಲೋಹಗಳನ್ನು ಕೊರೆದ ಚಿತ್ತಾರಗಳಲ್ಲಿ ತುಂಬಿ ಕಲಾಕೃತಿಯನ್ನು ಸೃಷ್ಟಿಸುವ ‘ನಕ್ಕಾಶಿ’ ಎಂಬ ಕಲೆ ಜೈಪುರದ ಮಹಾರಾಜ ರಾಜ ಮಾನ್‌ಸಿಂಗ್ ನಿರ್ಮಿಸಿದ ಅರಮನೆಯಲ್ಲಿ ಮೊತ್ತಮೊದಲ ಬಾರಿಗೆ ಕಂಡುಬಂತು. ಎವೆಯಿಕ್ಕದೆ ದಿಟ್ಟಿಸುವಂತೆ ಮಾಡುವ ಅರಮನೆಯ ಅದ್ಭುತ ಭವ್ಯತೆಯನ್ನು ಮೊತ್ತ ಮೊದಲ ಬಾರಿಗೆ ‘ಮೊಗಲ್ ಎ ಆಜಂ’ ಸಿನೆಮಾದಲ್ಲಿ, ‘ಪ್ಯಾರ್‌ಕಿಯಾ ತೊ ಢರ್ ನಾ ಕ್ಯಾ’ ಎಂದು ಹಾಡುತ್ತಾ ಮಧು ಬಾಲಾ ನರ್ತಿಸಿದಾಗ. ವಿಶ್ವಾದ್ಯಂತ ಜನ ಬೆರಗುಗಣ್ಣಿನಿಂದ ನೋಡಿದರು. ಇಂದಿಗೂ ಅದು ಮಿಲಿಯಗಟ್ಟಲೆ ಸಂದರ್ಶಕ ರನ್ನು ಆಕರ್ಷಿಸುತ್ತಲೇ ಇದೆ.

ತನ್ನ ಸೇನಾ ದಂಡಯಾತ್ರೆಗಳಿಂದ ಹಿಂದಿರುಗುವಾಗ ರಾಜ ಮಾನ್‌ಸಿಂಗ್ ಮೂಲ ಕುಶಲಕರ್ಮಿಗಳನ್ನು ಅಫ್ಘಾನಿಸ್ತಾನ ದಿಂದ ಕರೆತಂದ ಎನ್ನಲಾಗಿದೆ. ಆ ನಕ್ಕಾಶ್‌ಗಳು ತಮ್ಮ ಕಲೆಯಲ್ಲಿ ಹಲವು ಶಿಲ್ಪಿಗಳಿಗೆ ತರಬೇತಿ ನೀಡಿದರು; ಅವರ ವಂಶಸ್ಥರು ತಮ್ಮ ಕಲೆಯನ್ನು ಇಂದಿಗೂ ಮುಂದುವರಿಸಿದ್ದಾರೆ.

ರಾಜಸ್ಥಾನಿ ಕುಶಲಕರ್ಮಿಗಳ ಕೈಗೆ ಆ ಕುಶಲ ಕಲೆ ಬಂದ ಬಳಿಕ, ಅವರಲ್ಲಿ ಕೆಲವರು ಶಿಲ್ಪದ ಮೇಲೆ ಅಮೂಲ್ಯ ಹರಳುಗಳನ್ನು ಕೊರೆದು ಕೂರಿಸಲಾರಂಭಿಸಿದರು. ಮುಂದಕ್ಕೆ ಇದನ್ನು ‘ಕುಂದನ್-ಜಡಾಯ’ ಕಲೆ ಎಂದು ಕರೆಯಲಾಯಿತು. ಇಂದು ಸುಮಾರು 5,000 ಮಂದಿ ಕುಶಲಕರ್ಮಿಗಳು ಇಂತಹ ಕಲಾ ವಸ್ತುಗಳನ್ನು ಜೈಪುರ, ಉದಯ ಪುರನಲ್ಲಿ ತಯಾರಿಸುತ್ತಿದ್ದಾರೆ.

2001ರಲ್ಲಿ ರಾಜಸ್ಥಾನ ಕುಶಲಕರ್ಮಿಗಳ ರಾಜ್ಯ ಪ್ರಶಸ್ತಿ ವಿಜೇತ ಸೂರಜ್‌ಶರ್ಮ ಹೇಳುವಂತೆ ಅನುಭವಿಗಳಾದ ಈ ಕುಶಲಕರ್ಮಿಗಳು ಅಮೃತಶಿಲೆಯ ಮೇಲ್ಪದರದಲ್ಲಿ ಮಾದರಿಗಳನ್ನು ಚಿತ್ರಿಸುವುದರಿಂದ ಹಿಡಿದು ಶಿಲೆಯನ್ನು ಬೇಕಾದಷ್ಟೇ ಕೊರೆದು ಅಲ್ಲಿಗೆ ಚಿನ್ನದ ಹಾಳೆಯನ್ನು ತುಂಬಿ ಅಂತಿಮ ವರ್ಣಗಳನ್ನು ನೀಡುವವರೆಗೆ ಸಮಗ್ರ ಪ್ರಕ್ರಿಯೆಯಲ್ಲಿ ನಿಷ್ಣಾತರಾಗಿದ್ದಾರೆ. ತನ್ನ ಸವೆತ ನಿರೋಧಕ ಗುಣಗಳಿಂದಾಗಿ ಚಿನ್ನವು ತನ್ನ ಅದ್ದೂರಿಯಾದ ಆಕರ್ಷಣೆಯನ್ನು ಶತಮಾನಗಳ ಕಾಲ ಉಳಿಸಿಕೊಳ್ಳುತ್ತದೆ. ಹೀಗಾಗಿ, ಇಂಗ್ಲೆಂಡಿನ ಪ್ರಸಿದ್ಧ ಬ್ರಿಟಿಷ್ ಮ್ಯೂಸಿಯಮ್ ಜೈಪುರದ ಕಲಾಕೃತಿಗಾಗಿಯೇ ಒಂದು ಸಂಪೂರ್ಣ ವಿಭಾಗವನ್ನು ಮೀಸಲಾಗಿಟ್ಟಿರುವುದರಲ್ಲಿ ಆಶ್ಚರ್ಯವಿಲ್ಲ. ಮೇಲ್ಭಾಗವನ್ನು ಇನ್ನಷ್ಟು ವರ್ಣಮಯ ವಾಗಿಸಬೇಕಾದಲ್ಲಿ, ಕೋಬಾಲ್ಟ್ ಆಕ್ಸೈಡ್ ಮತ್ತು ತಾಮ್ರದ ಆಕ್ಸೈಡನ್ನು ಶಿಲೆಯ ಮೇಲೆ ಕೊರೆದು ತುಂಬುತ್ತಾರೆ; ಆಗ ಅನುಕ್ರಮವಾಗಿ, ನೀಲಿ ಬಣ್ಣ ಮತ್ತು ಹಸಿರು ಬಣ್ಣ ಬರುತ್ತದೆ.

1995ರಿಂದ ರಾಜಸ್ಥಾನ್ ನಾನ್-ಫಾರ್ಮ್ ಡೆವಲಪ್‌ಮೆಂಟ್ ಏಜೆನ್ಸಿ (ಆರ್‌ಯುಡಿಎ-ರುಡಾ) ಈ ಕುಶಲಕರ್ಮಿಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ ಮತ್ತು ಅವರಿಗೆ ಮಾರುಕಟ್ಟೆ ಹಾಗೂ ರಫ್ತು ಮಾರಾಟಕ್ಕೆ ಬೇಕಾದ ಸೌಕರ್ಯವನ್ನು ಒದಗಿಸುತ್ತಿದೆ. ಏಜೆನ್ಸಿಯ ಕುಶಲಕರ್ಮಿಗಳನ್ನು ಕ್ಲಸ್ಟರ್‌ಗಳಾಗಿ ಸಂಘಟಿಸಿ, ಅವರ ಕೌಶಲ್ಯಾಭಿವೃದ್ಧಿಗಾಗಿ ಕಮ್ಮಟಗಳನ್ನು ಏರ್ಪಡಿಸುತ್ತದೆ, ಸಂಶೋಧನೆ ನಡೆಸುತ್ತದೆ; ಹಾಗೂ ಚಿಕ್ಕಮಟ್ಟದ ಸಾಲಗಳನ್ನೂ ಒದಗಿಸುತ್ತದೆ.

ಅತ್ತರ್‌ಸಿಂಗ್ ಒಂದು ರುಡಾಕೇಂದ್ರದಲ್ಲಿ ಆರು ತಿಂಗಳ ತರಬೇತಿ ಪಡೆದು ಈಗ ಓರ್ವ ಪ್ರಮಾ ಣೀಕೃತ ‘ಸಂಗ್‌ತರಾಶ್’ ಶಿಲ್ಪಕಲಾವಿದ ನಾಗಿದ್ದಾನೆ. ಆತ ಮುಖ್ಯವಾಗಿ, ಅಮೃತಶಿಲೆ ಮತ್ತು ಮರಳುಗಳಲ್ಲಿ ಮೂರ್ತಿಗಳನ್ನು, ಆನೆ ಹಾಗೂ ಒಂಟೆಗಳನ್ನು ನಿರ್ಮಿಸುತ್ತಾನೆ. ತಾರಾ ಹೊಟೇಲುಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಶಿಲ್ಪಕಲಾಕೃತಿಗಳನ್ನು ನಿರ್ಮಿಸಲು ಈತನನ್ನು ನೇಮಿಸಿಕೊಳ್ಳಲಾಗುತ್ತದೆ. ಇದೇ ರೀತಿಯಾಗಿ, ಬಲವಾರಿಲಾಲ್ ಸೈನಿ (42) ಗೋಪುರಗಳಲ್ಲಿ ಕೆತ್ತನೆ ಹಾಗೂ ಜಾಲರಿ ಕೆಲಸಗಳನ್ನು ಮಾಡುವುದರಲ್ಲಿ ಓರ್ವ ಪರಿಣತ (ಸ್ಪೆಶಲಿಸ್ಟ್) ಆಗಿದ್ದಾರೆ.

ಕಲ್ಲಿನಲ್ಲಿ ಕಾವ್ಯವನ್ನು ಕೊರೆಯುವ ಈ ಕುಶಲಕರ್ಮಿಗಳಲ್ಲಿ ಹೆಚ್ಚಿನವರು ಅಲ್ಪ ಆದಾಯ ಗಳಿಸುವುದರಲ್ಲೆ ತೃಪ್ತಿಪಡಬೇಕಾಗಿದೆ. ಯಾಕೆಂದರೆ ವ್ಯಾಪಾರಿಗಳು, ಎಂಪೋರಿಯಮ್‌ಗಳು ಹಾಗೂ ರಫ್ತಿದಾರರು ಲಾಭದ ಹೆಚ್ಚಿನ ಪಾಲನ್ನು ತಮ್ಮದಾಗಿಸಿ ಕೊಳ್ಳುತ್ತಾರೆ. ಸೂರಜ್ ಶರ್ಮಾರವರ ಪ್ರಕಾರ ಓರ್ವ ಸಂಗತರಾಶ್ ದಿನ ವೊಂದರ ರೂ.500 ಸಂಪಾದಿಸಿದರೆ ಚಿನ್ನದ ಹಾಳೆಗಳನ್ನು ಕಲ್ಲುಗಳ ಮೇಲೆ ಕೊರೆದು ವಿವಿಧ ವಿನ್ಯಾಸಗಳನ್ನು ನಿರ್ಮಿಸುವವರು ಸುಮಾರು 800ರೂ.ಗಳನ್ನು ಸಂಪಾದಿಸುತ್ತಾರೆ. ಅದೇನಿದ್ದರೂ, ರಾಜ್ಯ ಕರಕುಶಲ ನಿಗಮಗಳಂತಹ ಏಜೆನ್ಸಿಗಳು ದಸ್ತಕಾರ್ ಹಾಥ್(ಕುಶಲಕರ್ಮಿಗಳ ಮೇಳ)ಗಳನ್ನು ಸಂಘಟಿಸುವುದರ ಮೂಲಕ, ಕುಶಲಕರ್ಮಿಗಳಿಗೆ ಕಲಾಕೃತಿಗಳನ್ನು ಕೊಳ್ಳುವವರ ಜತೆ ನೇರ ಸಂಪರ್ಕ ಸಾಧಿಸಲು ನೆರವಾಗುತ್ತಿವೆ.

share
ಎಂ.ಎ. ಸಿರಾಜ್
ಎಂ.ಎ. ಸಿರಾಜ್
Next Story
X