ಕರ್ನಾಟಕ ಎನ್‌ಆರ್‌ಐ ಫೋರಂ ನಿಯೋಗದಿಂದ ಮುಖ್ಯಮಂತ್ರಿಯ ಭೇಟಿ
ಎನ್‌ಆರ್‌ಐ ಫೋರಂ ಐಡೆಂಟಿ ಕಾರ್ಡಿಗಾಗಿ ನೋಂದಣಿ ಮಾಡಲು ಅವಕಾಶ

ಬೆಂಗಳೂರು, ಮಾ.4: ಅನಿವಾಸಿ ಕನ್ನಡಿಗರ ಶ್ರೇಯಾಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟಿರುವ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ(ಎನ್‌ಆರ್‌ಐ ಫೋರಂ) ನಿಯೋಗವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಇತ್ತೀಚೆಗೆ ಭೇಟಿಯಾಯಿತು.
ಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರ ನಿಯೋಗವು ಈ ಭೇಟಿಯ ಸಂದರ್ಭ ಅನಿವಾಸಿ ಕನ್ನಡಿಗರ ಹಲವು ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿಯ ಜೊತೆ ಚರ್ಚಿಸಿತು.
ಇದೇ ಸಂದರ್ಭ ಗಲ್ಫ್ ದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ತವರಿಗೆ ಮರಳುವ ಅನಿವಾಸಿ ಕನ್ನಡಿಗರಿಗೆ ಸರಕಾರ ಹೆಚ್ಚಿನ ನೆರವು ನೀಡಲು ಕ್ರಮ ಕೈಗೊಳ್ಳುವಂತೆ ಕೋರಿ ನಿಯೋಗವು ಮನವಿಯೊಂದನ್ನು ಮುಖ್ಯಮಂತ್ರಿಗೆ ಸಲ್ಲಿಸಿತು.
ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನಿವಾಸಿ ಕನ್ನಡಿಗರಿಗೆ ಎಲ್ಲಾ ರೀತಿಯ ನೆರವು-ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಫೋರಂ ಸದಸ್ಯರಾದ ಸದನ್ ದಾಸ್, ದೀಪಕ್ ಸೋಮಶೇಖರ್, ನಾಸಿರ್‌ಕರಾಜೆ, ಜೇಮ್ಸ್ ಮೆಂಡೋನ್ಸಾ, ಜೋಸೆಫ್ ಮಾಥಾಯಿಸ್, ಸಲೀಂ ಅಲ್ತಾಫ್ ಉಪಸ್ಥಿತರಿದ್ದರು.
►ಎನ್‌ಆರ್‌ಐ ಫೋರಂ ಐಡೆಂಟಿ ಕಾರ್ಡಿಗಾಗಿ ನೋಂದಣಿ ಮಾಡಿ
ಅನಿವಾಸಿ ಕನ್ನಡಿಗರು ಉಚಿತ ವಿಮೆ ಮತ್ತು ಇನ್ನಿತರ ಸೌಲಭ್ಯಗಳನ್ನು ಎನ್‌ಆರ್‌ಐ ಫೋರಂನ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಪಡೆಯಬಹುದು. ಐಡೆಂಟಿ ಕಾರ್ಡ್ ನೋಂದಣಿಗಾಗಿ ಈ ಕೆಳಕಂಡ ವೆಬ್ ಲಿಂಕನ್ನು ಬಳಸಿಕೊಳ್ಳಬಹುದು ಎಂದು ಎನ್‌ಆರ್‌ಐ ಫೋರಂ ತಿಳಿಸಿದೆ.
► Direct link for registration: http://117.239.137.35/nriregister/Pages/memberrequest.aspx
► After registration, login with username and password to fill the form: http://117.239.137.35/_layouts/15/Sp.Login.Custom/Login.aspx
► For more information visit http://nriforum.karnataka.gov.in/Pages/Home.aspx







