Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಂ.ಎಂ.ಅಕ್ಬರ್ ಬಂಧನ: ನಿಜವಾಗಿ...

ಎಂ.ಎಂ.ಅಕ್ಬರ್ ಬಂಧನ: ನಿಜವಾಗಿ ನಡೆದದ್ದೇನು?

ಟಿ.ಎ.ಅಮೀರುದ್ದೀನ್ಟಿ.ಎ.ಅಮೀರುದ್ದೀನ್4 March 2018 5:01 PM IST
share
ಎಂ.ಎಂ.ಅಕ್ಬರ್ ಬಂಧನ: ನಿಜವಾಗಿ ನಡೆದದ್ದೇನು?

ಕಳೆದ ರವಿವಾರ ಹೈದರಾಬಾದ್ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು, ಇಸ್ಲಾಮಿಕ್ ಪ್ರವಚಕ ಮತ್ತು ಪೀಸ್ ಎಜುಕೇಶನಲ್ ಫೌಂಡೇಷನ್ ಆಡಳಿತ ನಿರ್ದೇಶಕ ಎಂ.ಎಂ.ಅಕ್ಬರ್ ಅವರನ್ನು ಬಂಧಿಸಿ ಕೇರಳ ಪೊಲೀಸರಿಗೆ ಒಪ್ಪಿಸಿದರು. ಈ ಪ್ರತಿಷ್ಠಾನ ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪದಲ್ಲಿ ಒಟ್ಟು 11 ಶಾಲೆಗಳನ್ನು ನಡೆಸುತ್ತಿದ್ದು, ಆರು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ. ಅಕ್ಬರ್ ಅವರ ಪ್ರಕಾರ ವಿದ್ಯಾರ್ಥಿಗಳಲ್ಲಿ ಬಹುತೇಕರು ಮುಸ್ಲಿಮರು. ಆದರೆ ಬೋಧಕರಲ್ಲಿ ಶೇಕಡ 60ರಷ್ಟು ಮಂದಿ ಮುಸ್ಲಿಮೇತರರು.

2016ರ ಅಕ್ಟೋಬರ್ 8ರಂದು ಕೇರಳ ಪೊಲೀಸರು ಎರ್ನಾಕುಲಂ ಜಿಲ್ಲೆ ಕೊಚ್ಚಿನ್‍ನ ಚಕ್ಕರಪರಂಬು ಎಂಬಲ್ಲಿ ಪ್ರತಿಷ್ಠಾನ ನಡೆಸುತ್ತಿರುವ ಶಾಲೆ ಮೇಲೆ ದಾಳಿ ಮಾಡಿ 2ನೇ ತರಗತಿಯ ಇಸ್ಲಾಮಿಕ್ ಅಧ್ಯಯನ ಪಠ್ಯವನ್ನು ವಶಪಡಿಸಿಕೊಂಡರು. ಇದು ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿತ್ತು. ಬಂಧನದ ಭೀತಿಯಿಂದ ಅಕ್ಬರ್, ಕತರ್ ರಾಜಧಾನಿ ದೋಹಾಗೆ ಸ್ಥಳಾಂತರಗೊಂಡರು.

ರವಿವಾರ ಮೆಲ್ಬೋರ್ನ್‍ನಿಂದ ದೋಹಾಗೆ ಪ್ರಯಾಣಿಸುತ್ತಿದ್ದಾಗ ಇವರ ವಿಮಾನ ಹೈದಬಾರಾದ್‍ನಲ್ಲಿ ಇಮಿಗ್ರೇಷನ್ ವರ್ಗಾಂತರ ಮಾಡಿತು. "ಕೇರಳ ಪೊಲೀಸರು ಅಕ್ಬರ್ ವಿರುದ್ಧ 2017ರಲ್ಲಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು" ಎನ್ನುವುದು ಕೊಚ್ಚಿ ವಲಯದ ಐಜಿಪಿ ವಿಜಯ್ ಸಾಖರೆ ಅವರ ಸಮರ್ಥನೆ. "ಈ ಕಾರಣದಿಂದ ಹೈದರಾಬಾದ್‍ನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಅವರನ್ನು ಬಂಧಿಸಿದರು". ರವಿವಾರ ರಾತ್ರಿ ಅಕ್ಬರ್ ಅವರನ್ನು ಕೊಚ್ಚಿಗೆ ಕರೆತಂದು ಎರ್ನಾಕುಲಂ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸೋಮವಾರ ಹಾಜರುಪಡಿಸಲಾಯಿತು. ಮಾರ್ಚ್ 3ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

"2016ರ ಅಕ್ಟೋಬರ್ ನಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 (ಎ) ಅನ್ವಯ ಧರ್ಮಗಳ ಮಧ್ಯೆ ದ್ವೇಷ ಹರಡುತ್ತಿರುವುದಕ್ಕಾಗಿ ಅಕ್ಬರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ" ಎಂದು ಸಾಖರೆ ಸ್ಪಷ್ಟಪಡಿಸಿದರು.

ಎಂ.ಎಂ. ಅಕ್ಬರ್ ವಿರುದ್ಧದ ಆರೋಪ: ಐವತ್ತು ವರ್ಷ ವಯಸ್ಸಿನ ಅಕ್ಬರ್ ಕೇರಳ ಮೂಲದ ನಿಚೆ ಆಫ್ ಟ್ರುಥ್ ಎಂಬ ಇಸ್ಲಾಮಿಕ್ ಸಂಸ್ಥೆಯ ಸಂಸ್ಥಾಪಕ. ಪ್ರಖರ ವಾಗ್ಮಿಯಾಗಿರುವ ಅವರು ಹಲವು ಕೃತಿಗಳನ್ನೂ ಬರೆದಿದ್ದಾರೆ. ಅಂತರ್ ಧರ್ಮ ಸಮ್ಮೇಳನಗಳಲ್ಲಿ ಇವರು ಕಾಯಂ ಅತಿಥಿ. 2006ರಲ್ಲಿ ಇವರು ಕೇರಳದ ಶ್ರೀಮಂತ ಮುಸ್ಲಿಂ ವ್ಯಾಪಾರಿಗಳ ನೆರವಿನಿಂದ 'ಪೀಸ್ ಎಜ್ಯುಕೇಶನಲ್ ಫೌಂಡೇಷನ್' ಆರಂಭಿಸಿದರು. 2007ರಲ್ಲಿ ಫೌಂಡೇಷನ್ ತನ್ನ ಮೊದಲ ಶಾಲೆಯನ್ನು ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಆರಂಭಿಸಿತು. ಬಳಿಕ 2008ರ ಕೋಝಿಕೋಡ್‍ನಲ್ಲಿ ಶಾಲೆ ಪ್ರಾರಂಭಿಸಿತು. ಇಂದು ಫೌಂಡೇಷನ್ ನಡೆಸುತ್ತಿರುವ 11 ಶಾಲೆಗಳ ಪೈಕಿ 9 ಕೇರಳದಲ್ಲಿದೆ.

ಮಾಧ್ಯಮಗಳು ಎಂ.ಎಂ. ಅಕ್ಬರ್ ಅವರನ್ನು 'ಕೇರಳದ ಝಾಕಿರ್ ನಾಯ್ಕ್' ಎಂದು ಬಣ್ಣಿಸಿದೆ. ಉಗ್ರಗಾಮಿ ಚಟುವಟಿಕೆ ಮತ್ತು ಹಣ ದುರ್ಬಳಕೆ ಕುರಿತಂತೆ ಸರಣಿ ಆಪಾದನೆಗಳು ಝಾಕಿರ್ ನಾಯ್ಕ್ ಅವರ ಮೇಲಿದೆ. ನಂತರ ಝಾಕಿರ್ ಮಲೇಷ್ಯಾಗೆ ತೆರಳಿದ್ದರು. ಆದರೆ ಪೀಸ್ ಎಜ್ಯುಕೇಶನಲ್ ಫೌಂಡೇಷನ್ ಕಾರ್ಯಾಚರಣೆ ವ್ಯವಸ್ಥಾಪಕ ಮುಹಮ್ಮದ್ ಅಮೀರ್ ಹೇಳುವಂತೆ, ಅಕ್ಬರ್ ಮತ್ತು ಝಾಕಿರ್ ನಡುವೆ ಯಾವುದೇ ಸಂಪರ್ಕ ಇಲ್ಲ. "ಝಾಕಿರ್ ಅವರ ಟಿವಿ ಚಾನೆಲ್ ಹೆಸರು 'ಪೀಸ್ ಟಿವಿ' ಎಂದಾಗಿರುವುದರಿಂದ ಜನ ಗೊಂದಲಕ್ಕೀಡಾಗಿದ್ದಾರೆ.

ಪಠ್ಯದ ಗೊಂದಲಕ್ಕಿಂತ ಮುನ್ನ 2016ರಲ್ಲಿ 'ಪೀಸ್ ಎಜ್ಯುಕೇಶನ್ ಫೌಂಡೇಷನ್' ಸುದ್ದಿ ಮಾಡಿತ್ತು. ಕೇರಳದಿಂದ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಸೇರಿದ್ದಾರೆ ಎನ್ನಲಾದ 21 ಮಂದಿಯ ಪೈಕಿ ನಾಲ್ವರು ಅಂದರೆ ಅಬ್ದುಲ್ ರಶೀದ್, ಪತ್ನಿ ಆಯಿಷಾ, ಸಿರಾಜ್ ರಹ್ಮಾನ್ ಮತ್ತು ಮುಹಮ್ಮದ್ ಮರ್ವಾನ್ ಅವರು ಕಾಸರಗೋಡು ಜಿಲ್ಲೆ ತ್ರಿಕ್ಕರಿಪುರದ ಪೀಸ್ ಶಾಲೆಯಲ್ಲಿ ಕೆಲಸ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಫೌಂಡೇಷನ್ ಕೂಡಾ ಇದನ್ನು ದೃಢಪಡಿಸಿತ್ತು ಹಾಗೂ ಈ ಎಲ್ಲರೂ ಕಣ್ಮರೆಯಾಗುವ ಮುನ್ನವೇ ರಾಜೀನಾಮೆ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು.

ಮೂರು ತಿಂಗಳ ನಂತರ ಫೌಂಡೇಷನ್‍ನ ಕೊಚ್ಚಿನ್ ಶಾಲೆಯ ಮೇಲೆ ದಾಳಿ ನಡೆಯಿತು. ಎರ್ನಾಕುಲಂ ಜಿಲ್ಲೆ ಶಿಕ್ಷಣಾಧಿಕಾರಿಯ ದೂರಿನ ಮೇರೆಗೆ ಕ್ರಮ ಕೈಗೊಂಡ ಪೊಲೀಸರು, ಧರ್ಮಗಳ ನಡುವೆ ದ್ವೇಷ ಹರಡಿಸುವಂಥ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣ ನೀಡಿ 2ನೇ ತರಗತಿಯ ಪಠ್ಯವನ್ನು ವಶಪಡಿಸಿಕೊಂಡಿದ್ದರು. ದೂರಿನ ಪ್ರತಿಯನ್ನು ಅಧಿಕಾರಿ ನೀಡಿಲ್ಲ. ಆದರೆ ರಾಜ್ಯ ಸರ್ಕಾರ ಜನವರಿ 4ರಂದು ಆದೇಶ ಹೊರಡಿಸಿ ಶಾಲೆ ಮುಚ್ಚಲು ಆದೇಶ ಹೊರಡಿಸಿತು. ಶಾಲೆಯಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಬೋಧಿಸಲಾಗುತ್ತಿದೆ ಹಾಗೂ ಪಠ್ಯಪುಸ್ತಕ ಹಾಗೂ ಪಠ್ಯಕ್ರಮದಲ್ಲಿ ಒಳಗೊಂಡಿರುವ ಅಂಶಗಳು ಪ್ರಸ್ತುತ ಇರುವ ದೇಶದ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು  ಶಿಕ್ಷಣಾಧಿಕಾರಿ ಸಂಸ್ಥೆಯ ವಿರುದ್ಧ ದೂರು ನೀಡಿದ್ದು. ಈ ಮೂಲಕ ಬಹಿರಂಗವಾಗಿತ್ತು.

ಸಂಸ್ಥೆಯ ವಿರುದ್ಧ ನೀಡಿರುವ ದೂರು ಸತ್ಯ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ ಎನ್ನಲಾಗಿತ್ತು. "ಮುಸ್ಲಿಮರು ಇಸ್ಲಾಮಿಕ್ ಸ್ಟೇಟ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಈ ಶಾಲೆಯ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ" ಎಂದು ವರದಿಯಾಗಿತ್ತು. 2016ರ ಅಕ್ಟೋಬರ್ ದಾಳಿಯ ಬಳಿಕ ದಾಖಲಾದ ಎಫ್‍ಐಆರ್ ನಲ್ಲಿ, ಪುಸ್ತಕದ ಪ್ರಕಾಶಕರಾದ ಮುಂಬೈ ಮೂಲದ ಬುರೂಜ್ ರಿಯಲೈಸೇಷನ್ ಹಾಗೂ ಅಕ್ಬರ್ ಸೇರಿದಂತೆ ಶಾಲೆಯ ಅಧಿಕಾರಿಗಳು ಧರ್ಮಗಳ ನಡುವೆ ದ್ವೇಷಭಾವನೆ ಹರಡುತ್ತಿದ್ದಾರೆ ಎಂದು ದೂರಲಾಗಿದೆ. ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು. ಅಕ್ಬರ್ ಈ ಮಧ್ಯೆ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ದೋಹಾಗೆ ತೆರಳಿದರು.

ಎಫ್‍ಐಆರ್ ದಾಖಲಾದ ತಕ್ಷಣ ಅಕ್ಬರ್ ತಲೆಮರೆಸಿಕೊಂಡಿದ್ದಾರೆ ಎನ್ನುವುದು ಐಜಿಪಿ ವಿಜಯ್ ಸಾಖರೆಯವರ ಆರೋಪ. ಮಾಧ್ಯಮ ವರದಿಗಳು 2ನೇ ತರಗತಿಯ ಪಠ್ಯದಲ್ಲಿರುವ ಶಹಾದಾ (ಮುಸ್ಲಿಮರು ದೇವರೊಬ್ಬನೇ ಹಾಗು ಮುಹಮ್ಮದ್ ಪೈಗಂಬರರು ಅವನ ಪ್ರವಾದಿ ಎಂದು ತಿಳಿಯುವುದು) ಸಂಬಂಧಿಸಿದ ಪ್ರಶ್ನೆಯೊಂದನ್ನು ಉಲ್ಲೇಖಿಸಿವೆ.

ಪ್ರಶ್ನೆ ಹೀಗಿದೆ: "ನಿಮ್ಮ ಸ್ನೇಹಿತ ಆ್ಯಡಮ್/ಸೂಸಾನ್ ಮುಸ್ಲಿಂ ಆಗಲು ಬಯಸಿದರೆ, ಈ ಕೆಳಗಿನ ಆಯ್ಕೆಗಳಲ್ಲಿ ನೀವು ಯಾವ ಸಲಹೆ ನೀಡಬಯಸುತ್ತೀರಿ?

ಅದಕ್ಕೆ ನೀಡಿದ ಉತ್ತರಗಳ ಆಯ್ಕೆಯೆಂದರೆ:

ಎ. ಆತ/ ಆಕೆ ತಮ್ಮ ಹೆಸರನ್ನು ಅಹ್ಮದ್/ ಸಾರಾ ಎಂದು ತಕ್ಷಣ ಬದಲಾಯಿಸಿಕೊಳ್ಳಬೇಕು

ಬಿ. ಆತ/ ಆಕೆ ಸರ ಧರಿಸಿದ್ದರೆ ತಕ್ಷಣ ತೆಗೆಯಬೇಕು

ಸಿ. ಶಹಾದಾ ಕಲಿಯಬೇಕು

ಡಿ. ಪೋಷಕರು ಮುಸ್ಲಿಮರಲ್ಲದ್ದರಿಂದ ಮನೆಯಿಂದ ಓಡಿಹೋಗಬೇಕು

ಇ. ಹಲಾಲ್ ಚಿಕನ್ ತಿನ್ನಬೇಕು.

ಅಕ್ಬರ್ ಸಮರ್ಥನೆ: ಫೌಂಡೇಷನ್‍ನ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದ ಬಳಿಕ, ಅಕ್ಬರ್ ಅವರನ್ನು scroll.in ದೂರವಾಣಿ ಮೂಲಕ ಸಂಪರ್ಕಿಸಿತ್ತು. ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅವರು ಅಲ್ಲಗಳೆದಿದ್ದರು. ಪಠ್ಯಕ್ಕೆ ಸಂಬಂಧಿಸಿದಂತೆ "ಬುರೂಜ್ ರಿಯಲೈಸೇಷನ್ ಪುಸ್ತಕಗಳನ್ನು ಹಲವು ಶಾಲೆ ಹಾಗೂ ಮದರಸಗಳಲ್ಲಿ ರಾಜ್ಯಾದ್ಯಂತ ಬಳಸಲಾಗುತ್ತದೆ. ನನ್ನನ್ನು ಏಕೆ ಗುರಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ" ಎಂದು ಉತ್ತರಿಸಿದ್ದರು.

ಅವರು ಹೇಳುವಂತೆ ಈ ಪುಸ್ತಕವನ್ನು ಪರಿಚಯಿಸಿರುವುದು ವೆಚ್ಚ ಕಡಿತಗೊಳಿಸುವ ಸಲುವಾಗಿ. "ಸೌದಿ ಅರೇಬಿಯಾ ಮೂಲದ ದಾರುಸ್ಸಲಾಂ ಪಬ್ಲಿಶರ್ಸ್ ಪ್ರಕಟಿಸುತ್ತಿದ್ದ ಇಸ್ಲಾಮಿಕ್ ಸ್ಟಡಿ ಪುಸ್ತಕದ ಬೆಲೆ ಅಧಿಕ ಎಂಬ ಕಾರಣಕ್ಕೆ ಕಡಿಮೆ ವೆಚ್ಚದ ಬುರೂಜ್ ರಿಯಲೈಸೇಷನ್ ಪುಸ್ತಕವನ್ನು 2013ರಲ್ಲಿ ಪರಿಚಯಿಸಿದೆವು" ಎಂದು ಅವರು ವಿವರಿಸುತ್ತಾರೆ.

ಪುಸ್ತಕದಲ್ಲಿರುವ ವಿವಾದಾತ್ಮಕ ಭಾಗವನ್ನು ಬಿಟ್ಟುಬಿಡುವಂತೆ ಶಿಕ್ಷಕರಿಗೂ ಸೂಚಿಸಿದ್ದಾಗಿ ಅವರು ಹೇಳುತ್ತಾರೆ. "ಪೊಲೀಸರು ದಾಳಿ ಮಾಡಿದ ತಕ್ಷಣ ನಾವು ಪುಸ್ತಕವನ್ನು ವಾಪಸ್ ಪಡೆದೆವು" ಎಂದು ಹೇಳುತ್ತಾರೆ. ಅಕ್ಬರ್ ಸಮರ್ಥಿಸಿಕೊಳ್ಳುವಂತೆ ಅವರ ಶಾಲೆ ಮುಸ್ಲಿಂ ಹೊರತಾದ ಇತರ ಮಕ್ಕಳಿಗೆ ಯಾವ ತಾರತಮ್ಯವನ್ನೂ ಮಾಡುವುದಿಲ್ಲ ಅಥವಾ ಅವರ ಬಗ್ಗೆ ದ್ವೇಷವನ್ನು ಪ್ರತಿಪಾದಿಸುವುದೂ ಇಲ್ಲ. "ಕೇರಳದ ಒಂಬತ್ತು ಶಾಲೆಗಳಲ್ಲಿ ಸುಮಾರು ಆರು ಸಾವಿರ ಮಕ್ಕಳು ಓದುತ್ತಿದ್ದಾರೆ. ಇವರಲ್ಲಿ ಶೇಕಡ 98ರಷ್ಟು ಮುಸ್ಲಿಮರು. ಆದರೆ ಶಿಕ್ಷಕರ ಸಂಯೋಜನೆ ಭಿನ್ನ. ನಾವು ಬೋಧಿಸುವ ಬಗ್ಗೆ ಒಲವು ಇರುವವರನ್ನು ನೇಮಕ ಮಾಡಿಕೊಳ್ಳುತ್ತೇವೆ. ಧರ್ಮ ಇಲ್ಲಿ ಆಯ್ಕೆಯ ಮಾನದಂಡವಲ್ಲ. ನಮ್ಮಲ್ಲಿ 460 ಶಿಕ್ಷಕರಿದ್ದಾರೆ. ಈ ಪೈಕಿ 276 ಮಂದಿ ಇತರ ಧರ್ಮದವರು" ಎಂದು ಅವರು ವಿವರಿಸುತ್ತಾರೆ.

ಶಾಲೆಯ ಪಠ್ಯಕ್ರಮ

2016ರಲ್ಲಿ ಪೊಲೀಸರು ಫೌಂಡೇಷನ್ ಶಾಲೆಗಳ ಮೇಲೆ ದಾಳಿ ಮಾಡಿ ಪಠ್ಯ ವಶಪಡಿಸಿಕೊಂಡ ಬಗ್ಗೆ 'ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‍'ನಲ್ಲೂ ಸುದ್ದಿ ಪ್ರಕಟವಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಕಟವಾದ ವರದಿಯ ಸಾರಾಂಶ ಹೀಗಿದೆ: "ಪಠ್ಯಕ್ರಮದಲ್ಲಿ ಭಾರತ ಅಥವಾ ರಾಷ್ಟ್ರೀಯತೆಯ ಬಗ್ಗೆ ಬೋಧಿಸಲು ಏನೂ ಇಲ್ಲ. ಇಸ್ಲಾಮಿಕ್ ಸ್ಟಡಿ ಎನ್ನುವುದು ಒಂದರಿಂದ ಎಂಟನೇ ತರಗತಿವರೆಗೆ ಪ್ರಮುಖ ವಿಷಯ. ಇತರ ವಿಷಯಗಳಾದ ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ತೀರಾ ಪ್ರಾಥಮಿಕ. ವಿದ್ಯಾರ್ಥಿಗಳಿಗೆ ಜೀವಶಾಸ್ತ್ರದ ಪಾಠಗಳಿಲ್ಲ. ಇದನ್ನು ಅನಗತ್ಯ ಎಂದು ಪರಿಗಣಿಸಲಾಗಿದೆ"

ಪತ್ರಿಕೆ ಆ ಬಳಿಕ ಇನ್ನೊಂದು ವರದಿ ಪ್ರಕಟಿಸಿ, ಶಾಲೆ ವಿದ್ಯಾರ್ಥಿಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದೆ ಹಾಗೂ ಮುಸ್ಲಿಮೇತರ ಸಿಬ್ಬಂದಿಗೆ ಕಿರುಕುಳ ನೀಡುತ್ತಿದೆ ಎಂದು ಗಂಭೀರ ಆರೋಪ ಹೊರಿಸಿತ್ತು.

ಪೀಸ್ ಎಜ್ಯುಕೇಶನಲ್ ಫೌಂಡೇಷನ್‍ನ ಶಾಲೆಗಳಲ್ಲಿ ನೊಂದಾವಣೆಯಾದ ಮಕ್ಕಳ ಕುಟುಂಬಗಳನ್ನು scroll.in ಸಂಪರ್ಕಿಸಿತು ಹಾಗೂ ಅವರ ಪಠ್ಯಪುಸ್ತಕಗಳ ಪರಾಮರ್ಶೆ ಮಾಡಿತು. 1ರಿಂದ 8ನೇ ತರಗತಿವರೆಗೆ, ಶಾಲೆ ಇಂಗ್ಲಿಷ್, ಹಿಂದಿ, ಮಲಯಾಳಂ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಹಾಗೂ ಭಾವನಾತ್ಮಕ ಬುದ್ಧಿಮತ್ತೆ ವಿಷಯಗಳನನ್ನು ಬೋಧಿಸುತ್ತಿದೆ.

1ರಿಂದ 8ನೇ ತರಗತಿಯವರೆಗೆ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ಬೋಧಿಸಲು ಕೇಂಬ್ರಿಡ್ಜ್ ವಿವಿ ಪ್ರೆಸ್ ಪ್ರಕಟಿಸುವ ಪುಸ್ತಕಗಳನ್ನು ಬಳಸಲಾಗುತ್ತಿದೆ. ದೇಶದ ಅತ್ಯುನ್ನತ ಪಠ್ಯಕ್ರಮ ಸಲಹಾಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಪಠ್ಯಪುಸ್ತಕವನ್ನು ಸಮಾಜ ವಿಜ್ಞಾನ ಬೋಧಿಸಲು ಬಳಸಲಾಗುತ್ತಿದೆ. ಮಲಯಾಳಂ ವಿದ್ಯಾರ್ಥಿಗಳು, ಕೇರಳ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಪುಸ್ತಕದ ಅಧ್ಯಯನ ಮಾಡುತ್ತಾರೆ ಹಾಗೂ ಹಿಂದಿ ಭಾಷೆ ಬೋಧನೆಗೆ ಸರ್ಗಮ್ ಪಬ್ಲಿಕೇಶನ್ ಪುಸ್ತಕ ಬಳಕೆಯಾಗುತ್ತದೆ.

ಕೊಚ್ಚಿ ಶಾಲೆ ದಾಳಿಗೆ ಮುನ್ನ ಇಸ್ಲಾಮಿಕ್ ಸ್ಟಡಿ ಪಠ್ಯವನ್ನು ಪರಾಮರ್ಶಿಸುವುದು scroll.inಗೆ ಸಾಧ್ಯವಾಗಲಿಲ್ಲ. ಬುರೂಜ್ ರಿಯಲೈಸೇಷನ್ ಪಠ್ಯಪುಸ್ತಕಗಳ ಬಳಕೆ ನಿಲ್ಲಿಸಿದ ಬಳಿಕ ಹೊಸ ಪಠ್ಯಪುಸ್ತಕಗಳನ್ನು ಇನ್ನೂ ಪರಿಚಯಿಸಿಲ್ಲ ಎಂದು ಫೌಂಡೇಷನ್ ಉದ್ಯೋಗಿಗಳು ಹೇಳುತ್ತಾರೆ.

ಅಕ್ಬರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ವೇಳೆ, ಅವರ ಹಣಕಾಸು ವ್ಯವಹಾರ ಹಾಗೂ ಉಗ್ರಗಾಮಿ ಸಂಘಟನೆಗಳ ಜತೆಗಿನ ಸಂಬಂಧಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ಏಳು ದಿನಗಳ ಕಾಲ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಕೇರಳ ಪೊಲೀಸರು ಕೋರಿದ್ದರು. ಆದರೆ ಐದು ದಿನಗಳ ಅವಕಾಶ ನೀಡಲಾಗಿದೆ.

ಬಂಧನಕ್ಕೆ ಒಂದು ವಾರ ಮೊದಲು ಅಕ್ಬರ್ ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು. "ನನ್ನ ಹಿನ್ನೆಲೆಯನ್ನು ಪರೀಕ್ಷಿಸಿ. ನನ್ನ ಪ್ರವಚನ ಹಾಗೂ ಬರಹಗಳ ಮೂಲಕ ಭಯೋತ್ಪಾದನೆಯನ್ನು ತಿರಸ್ಕರಿಸುತ್ತಾ ಬಂದವನು ನಾನು. ನನಗೆ ನ್ಯಾಯಾಂಗದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಹಾಗೂ ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ" ಎಂದು ಹೇಳಿದ್ದರು.

share
ಟಿ.ಎ.ಅಮೀರುದ್ದೀನ್
ಟಿ.ಎ.ಅಮೀರುದ್ದೀನ್
Next Story
X