ತೊಕ್ಕೊಟ್ಟು: ಹೆಲ್ಪ್‌ಇಂಡಿಯಾ ಫೌಂಡೇಶನ್‌ನಿಂದ ಉಚಿತ ಆರೋಗ್ಯ ತಪಾಸಣೆ, ಕನ್ನಡಕ ವಿತರಣೆ

ಉಳ್ಳಾಲ, ಮಾ.4: ತೊಕ್ಕೊಟ್ಟಿನ ಹೆಲ್ಪ್‌ಇಂಡಿಯಾ ಫೌಂಡೇಶನ್ ವತಿಯಿಂದ ಉಚಿತವಾಗಿ ಕನ್ನಡಕ ವಿತರಣೆ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ರವಿವಾರ ತೊಕ್ಕೊಟ್ಟಿನಲ್ಲಿರುವ ಫೌಂಡೇಶನ್‌ನ ಕಚೇರಿ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್, ಹೆಲ್ಪ್ ಇಂಡಿಯಾ ಫೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಶುಭ ಹಾರೈಸಿದರು. ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ ಸಮಾಜದಲ್ಲಿ ಜನರನ್ನು ಒಂದುಗೂಡಿಸುವ, ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಮಾಡುವ ಸಂಘಟನೆಗಳು ನಮಗೆ ಬೇಕಿದೆ. ಸಮಾಜದಲ್ಲಿ ಮಾದರಿ ಕಾರ್ಯದ ಮೂಲಕ ಸಾಮರಸ್ಯಗಳನು ಬೆಳೆಸುತ್ತಿರುವ ಹೆಲ್ಪ್ ಇಂಡಿಯಾ ಫೌಂಡೇಶನ್‌ನೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಹೆಲ್ಪ್‌ಇಂಡಿಯಾ ಫೌಂಡೇಶನ್‌ನ ಉಪಾಧ್ಯಕ್ಷ ಉಮರ್ ಫಾರೂಕ್ ಪಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಹಾಗೂ ಮಕ್ಕಳ ತಜ್ಞ ಡಾ.ರವಿ ಕಿರಣ್ ಎಸ್.ಆರ್. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಸಹಾಯಕ ಉಪನ್ಯಾಸಕ ಡಾ.ಬದ್ರಿನಾಥ್ ತಲ್ವಾರ್, ನ್ಯಾಯವಾದಿ ಗಂಗಾಧರ ಉಳ್ಳಾಲ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಅಬ್ದುಲ್ ರಹಿಮಾನ್ ಬಾಷಾ, ಎಚ್.ಕೆ.ಖಾದರ್, ಯು.ಎಚ್.ಹಸೈನಾರ್, ಸ್ಥಾಯಿ ಸಮಿತಿಯ ಸದಸ್ಯ ಉಸ್ಮಾನ್ ಕಲ್ಲಾಪು, ಯು.ಬಿ.ಸಲೀಂ, ಹೆಲ್ಪ್‌ಇಂಡಿಯಾ ಫೌಂಡೇಶನ್‌ನ ರಾಝಿಕ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಹ್ಮದ್ ತಮೀಮಾ ಬಿನ್ ರಾಝಿಕ್ ಕಿರಾಅತ್ ಪಠಿಸಿದರು. ಶಕೀಲ್ ತುಂಬೆ ಸ್ವಾಗತಿಸಿದರು. ಝಾಕಿರ್ ಕಾರ್ಯಕ್ರಮ ನಿರೂಪಿಸಿದರು





