ಮೈಸೂರು: ಮಾರ್ಚ್ 5, 6 ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಮೈಸೂರು,ಮಾ.4: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 5 ಮತ್ತು 6 ರಂದು ಮೈಸೂರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾರ್ಚ್ 5 ರಂದು ಬೆಳಿಗ್ಗೆ 10-30 ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 10-45 ಗಂಟೆಗೆ ನಂಜನಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಂಜನಗೂಡು ಟೌನ್‍ನಲ್ಲಿ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ಟ್ರಸ್ಟ್ ಆವರಣದಲ್ಲಿ ಶ್ರೀ ಕನಕ ಸಮುದಾಯ ಭವನ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 11.30 ಗಂಟೆಗೆ ನಂಜನಗೂಡಿನ ರಸ್ತೆಯ ಮೂಲಕ ಗುಂಡ್ಲುಪೇಟೆಗೆ ತೆರಳಲಿದ್ದು, ಮಧ್ಯಾಹ್ನ 1.30 ಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲನಹಳ್ಳಿ ಹೆಲಿಪ್ಯಾಡ್‍ನಿಂದ ಹೆಲಿಕ್ಟಾಪರ್ ಮೂಲಕ ಮಧ್ಯಾಹ್ನ 1-50ಕ್ಕೆ ಮೈಸೂರು ತಾಲೂಕಿನ ಜಯಪುರ ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ಮಧ್ಯಾಹ್ನ 2 ಗಂಟೆಗೆ ಮೈಸೂರು ತಾಲೂಕಿನ ಜಯಪುರ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು.
ಸಂಜೆ 5 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಉದ್ಯೋಗ ಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 7 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ರಾಮಕೃಷ್ಣ ಪರಮಹಂಸ ವೃತ್ತ ಉದ್ಘಾಟನೆ ಮತ್ತು ಪ್ರತಿಮೆ ಅನಾವರಣಗೊಳಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಾರ್ಚ್ 6 ರಂದು ಬೆಳಿಗ್ಗೆ 10-30ಕ್ಕೆ ಮೈಸೂರಿನ ಲಲಿತ್ರಾದಿನಗರ ಉತ್ತರ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ, ಮೈಸೂರು ಇದರ ವತಿಯಿಂದ ಲಲಿತ್ರಾದಿನಗರ ಉತ್ತರ ಬಡಾವಣೆಯ ನಿವೇಶನ ಸಂಖ್ಯೆಯನ್ನು ಲಾಟರಿ ಮೂಲಕ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜರ್ಮನ್ ಪ್ರೆಸ್ ಆವರಣದಲ್ಲಿರುವ ನೂತನ ಜಿಲ್ಲಾಡಳಿತ ಕಚೇರಿ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 350 ಹಾಸಿಗೆ ಸಾಮಾಥ್ರ್ಯದ ಹೃದ್ರೋಗ ಆಸ್ಪತ್ರೆ, ಮೈಸೂರು ಶಾಖೆಯ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 12-30 ರಿಂದ 2-30 ಗಂಟೆಯವರೆಗೆ ನಂಜನಗೂಡು ತಾಲೂಕಿನ ಎಸ್. ಹೊಸಕೋಟೆ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಕೀರ್ಣದಲ್ಲಿ ಪದವಿ ಪೂರ್ವ ಕಾಲೇಜಿನ ಉನ್ನತೀಕರಣ ಕಾಮಗಾರಿ ಶಂಕುಸ್ಥಾಪನೆ ಹಾಘೂ ನೆಫ್ರೋ ಯುರಾಲಜಿ ನೂತನ ಕಟ್ಟಡ ಉದ್ಘಾಟಿಸುವರು. ಕೆ.ಪಿ.ಟಿ.ಸಿ.ಎಲ್ 2 ಘೀ. 125 ಎಂ.ವಿ.ಎ. 66/11 ಕೆ.ವಿ. ಗ್ಯಾಸ್ ಇನ್ಸೂಲೇಟೆಡ್ ಸ್ಟೇಷನ್, ಕುಕ್ಕರಹಳ್ಳ, ಸರಸ್ವತಿಪುರಂ, ವಿದ್ಯುತ್ ಉಪ ಕೇಂದ್ರದ ಶಂಕುಸ್ಥಾಪನೆ, ಟ್ರಾಮ ಸೆಂಟರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎಸ್.ಎಂ.ಟಿ. 100 ಹಾಸಿಗೆಯುಳ್ಳ ಎಂ.ಸಿ.ಹೆಚ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯ ಶಂಕುಸ್ಥಾಪನೆ, ಯೋಗ ಕಾಲೇಜು ಶಂಕುಸ್ಥಾಪನೆ, ಮೈಸೂರು ನಗರದಲ್ಲಿ ಸೋಲಿಗರ ಭವನ ಶಂಕುಸ್ಥಾಪನೆ (ಕ್ಯಾತಮಾರನಹಳ್ಳಿ), ಪಿ.ಕೆ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬೈರಾಪುರ ಟಿ.ನರಸೀಪುರ ತಾಲೂಕು ಕಟ್ಟಡದ ಉದ್ಘಾಟಿಸುವರು.
ಮಧ್ಯಾಹ್ನ 3.30 ಕ್ಕೆ ಅಪೋಲೋ ಆಸ್ಪತ್ರೆಯ ಕೊನೆಯ ಮುಡಾ ನಿವೇಶನ ಗಾಂಧಿ ವಿಚಾರ ಪರಿಷತ್ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4-30 ಗಂಟೆಗೆ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ದಿ ಮುಸ್ಲಿಂ ಕೋ-ಆಪರೇಟಿವ್ ಬ್ಯಾಂಕ್ ಲಿ., ಮೈಸೂರು ಇದರ ಶತಮಾನೋತ್ಸವ ಆಚರಣೆ ಮತ್ತು ನೂತನವಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಂತರ ಮೈಸೂರು ವಿಮಾನ ನಿಲ್ದಾಣ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.







