ಮೈಸೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 4 ಬಾಲಕರು ವಶಕ್ಕೆ

ಮೈಸೂರು,ಮಾ.4: ನಗರದ ಹೊರವಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೆದರಿಕೆಯೊಡ್ಡಿದ ನಾಲ್ವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರು ನಗರದ ಹೊರವಲಯದಲ್ಲಿ ಕಳೆದ 20 ದಿನಗಳ ಹಿಂದೆ ನಾಲ್ವರು ಬಾಲಕರು ಬಾಲಕಿ ಮೇಲೆ ದೌರ್ಜನ್ಯವೆಸಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
2ನೇ ತರಗತಿ ಓದುತ್ತಿರುವ ಬಾಲಕಿಯ ಮೇಲೆ 17, 14 ಹಾಗೂ 13 ವರ್ಷದ ಇಬ್ಬರು ಬಾಲಕರು ಲೈಂಗಿಕ ದೌರ್ಜವ್ಯವೆಸಗಿ, ನಡೆದ ಘಟನೆಯನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಇದರಿಂದ ಹೆದರಿದ ಬಾಲಕಿ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ, ದೇಹದಲ್ಲಿ ನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದಾಗ ಪೋಷಕರು ವಿಚಾರಿಸಿದಾಗ ಬಾಲಕಿ ನಡೆದಿರುವ ವಿಷಯವನ್ನು ಹೇಳಿದ್ದಾಳೆ. ಬಳಿಕ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಬಾಲಕರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಲ್ವರು ಬಾಲಕರನ್ನು ಬಾಲಕರ ವೀಕ್ಷಣಾಲಯಕ್ಕೆ ನೀಡಿದ್ದಾರೆ.





