ಬಿಸಿಸಿಎಫ್ ಶತಮಾನೋತ್ಸವ ಮ್ಯಾರಥಾನ್: ನಿಟ್ಟೆಯ ಚಿದಾನಂದ- ಸುಮಾಗೆ ಪ್ರಶಸ್ತಿ

ಉಡುಪಿ, ಮಾ. 4: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಇಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಬಿಸಿಸಿಎಫ್ ಶತಮಾನೋತ್ಸವ ಮ್ಯಾರಥಾನ್‌ನ 10 ಕಿ.ಮೀ. ಮುಕ್ತ ಪುರುಷರ ವಿಭಾಗದಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಚಿದಾನಂದ ಹಾಗೂ ಮಹಿಳೆಯರ ವಿಭಾಗದಲ್ಲಿ ಅದೇ ಕಾಲೇಜಿನ ಸುಮಾ ತಲಾ 10ಸಾವಿರ ನಗದಿನೊಂದಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಮ್ಯಾರಾಥಾನ್ ವಿವಿಧ ವಿಭಾಗಗಳ ಫಲಿತಾಂಶ ಈ ರೀತಿ ಇದೆ. ಮುಕ್ತ ಪುರುಷರ ವಿಭಾಗ: ದ್ವಿ- ನಿಟ್ಟೆ ಎನ್.ಎಂ.ಎ.ಎಂ. ಇಂಜಿನೀಯ ರಿಂಗ್ ಕಾಲೇಜಿನ ದೀಪು ಟಿ.ಎಂ., ತೃ- ಉಡುಪಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಸುರೇಶ್ ಎಚ್.ಜಿ. ಮಹಿಳೆಯರು: ದ್ವಿ- ನಿಟ್ಟೆ ಪದವಿ ಕಾಲೇಜಿನ ಮಂಜುಳಾ ವಿ. ಹಿರೇಮಠ, ತೃ- ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಜ್ಯೋತಿ.
5 ಕಿ.ಮೀ. ಸಹಕಾರ ಸಂಘಗಳ ಸಿಬ್ಬಂದಿಗಳ ಪುರುಷರ ವಿಭಾಗ: ಪ್ರ- ಬ್ರಹ್ಮಾವರ ಸಿಎ ಬ್ಯಾಂಕಿನ ಸುಬ್ರಹ್ಮಣ್ಯ ಗಾಣಿಗ, ದ್ವಿ- ಬ್ರಹ್ಮಾವರ ಸಿಎ ಬ್ಯಾಂಕಿನ ಪೃಥ್ವಿ, ತೃ- ಕೋಟ ಸಿ ಎ ಬ್ಯಾಂಕಿನ ವಸಂತ. ಮಹಿಳೆಯರು: ಪ್ರ- ಲ್ಯಾಂಪ್ ಸೊಸೈಟಿಯ ಅವಿತಾ, ದ್ವಿ- ಪ್ರೊಟೆಸ್ಟೆಂಟ್ ಕ್ರಿಸ್ಚಿಯನ್ ಸೊಸೈಟಿಯ ಸ್ಮಿತಾ ಜೋಯ್ಲಿನ್, ತೃ- ಲ್ಯಾಂಪ್ ಸೊಸೈಟಿಯ ಅಶ್ವಿನಿ.
5 ಕಿ.ಮೀ. ಹಿರಿಯ ನಾಗರಿಕರ ಪುರುಷರ ವಿಭಾಗ: ಪ್ರ- ಜಯಕರ ಶೆಟ್ಟಿ ಚಿಟ್ಪಾಡಿ, ದ್ವಿ- ಬಿ. ಗುಣಕರ ಶೆಟ್ಟಿ, ಉಡುಪಿ, ತೃ- : ಸುಂದರ್ ಪಿ. ಮಟ್ಟಿ. ಮಹಿಳೆ ಯರು: ಪ್ರ- ಅರುಣಾಕಲಾ ಎಸ್.ರಾವ್, ದ್ವಿ- ಸುಲತಾ ಕಾಮತ್, ತೃ- ಉಷಾ ಎಸ್. ಮಟ್ಟಿ. 5ಕಿ.ಮೀ. ಪ್ರೌಢ ಶಾಲಾ ಬಾಲಕರ ವಿಭಾಗ: ಪ್ರ- ಉಡುಪಿ ಡಿವೈಇಎಸ್‌ನ ಗೌತಮ್, ದ್ವಿ- ಡಿವೈಇಎಸ್‌ನ ಪವನ್ ಕುಮಾರ್, ತೃ- ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಧನುಷ್. ಬಾಲಕಿಯರು: ಪ್ರ- ನಿಟ್ಟೆ ಪ್ರೌಢ ಶಾಲೆಯ ಪತೀಕ್ಷಾ, ದ್ವಿ- ಕೆಮ್ಮಣ್ಣು ವೌಂಟ್ ಕಾರ್ಮಿಲ್ ಪ್ರೌಢಶಾಲೆಯ ಕೀರ್ತನಾ, ತೃ- ಡಿವೈಇಎಸ್‌ನ ಸೃಜನಾ.
3ಕಿ.ಮೀ. ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಪ್ರ- ಕುಂಜಾರುಗಿರಿ ಆನಂದತೀರ್ಥ ಹಿರಿಯ ಪ್ರಾಥಮಿಕ ಶಾಲೆಯ ರಾಘವೇಂದ್ರ ಪೂಜಾರಿ, ದ್ವಿ- ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಚರಣ್, ತೃ- ಕುಂಜಾರುಗಿರಿ ಶಾಲೆಯ ಭರತ್ ಕುಮಾರ್. ಬಾಲಕಿಯರು: ಪ್ರ- ಕುಂಜಾರುಗಿರಿ ಶಾಲೆಯ ಗಾಯತ್ರಿ, ದ್ವಿ- ಉಡುಪಿ ಸೈಂಟ್ ಸಿಸಿಲಿ ಸ್ಕೂಲ್‌ನ ತೃಷಾ, ತೃ- ವಳಕಾಡು ಸರಕಾರಿ ಪ್ರೌಢಶಾಲೆಯ ಮುತ್ತವ್ವ.
ಉಡುಪಿ ಮಿಶನ್ ಕಂಪೌಂಡ್‌ನಲ್ಲಿರುವ ಸೊಸೈಟಿಯ ಪ್ರಧಾನ ಕಚೇರಿ ಎದುರು ಮ್ಯಾರಾಥಾನ್‌ಗೆ ಮಾಜಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಮಣಿಪಾಲ ಮಾಹೆಯ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಮಿಷನ್ ಕಂಪೌಂಡಿನ ಕ್ರಿಶ್ಚಿಯನ್ ಹೈಸ್ಕೂಲ್ ಆವರಣದಲ್ಲಿ ನಡೆದ ಸಮಾ ರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಅಂತಾರಾಷ್ಟ್ರೀಯ ಕ್ರೀಡಾಪಟು ಐಕಳ ಹರೀಶ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿದರು.
ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಕುಂದಾಪುರ ಸಹಾಯಕ ಉಪನಿಬಂಧಕಿ ಚಂದ್ರ ಪ್ರತಿಮಾ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಉದ್ಯಮಿ ಜೆರಿ ಡಯಸ್, ನಗರಸಭೆ ಸದಸ್ಯ ರಮೇಶ್ ಕಾಂಚನ್, ಸೊಸೈಟಿಯ ಉಪಾಧ್ಯಕ್ಷ ಎಲ್.ಉಮಾನಾಥ್ ಉಪಸ್ಥಿತರಿದ್ದರು.
ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂ ಪಿಸಿದರು.







