‘ಇನ್ಶುರೆನ್ಸ್ ಉದ್ದಿಮೆಯಲ್ಲಿ ಉದ್ಯೋಗಾವಕಾಶಗಳು’ ವಿಶೇಷ ಉಪನ್ಯಾಸ

ಉಡುಪಿ, ಮಾ.4: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿಯ ಜಂಟಿ ಆಶ್ರಯದಲ್ಲಿ ಇನ್ಶುರೆನ್ಸ್ ಉದ್ದಿಮೆ ಯಲ್ಲಿ ಉದ್ಯೋಗಾವಕಾಶಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಎಲ್‌ಐಸಿ ಉಡುಪಿಯ ಪ್ರಾದೇಶಿಕ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕ ರಾಘವೇಂದ್ರ ಎಂ.ಸಾಮಗ ಎಲ್‌ಐಸಿ ಕ್ಷೇತ್ರ ದಲ್ಲಿ ಲಭ್ಯವಿರುವ ವಿವಿಧ ವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ವಹಿಸಿದ್ದರು.
ಹಿರಿಯ ಪ್ರಾಧ್ಯಾಪಕ ಸಿ.ಎ.ಪಾಟೀಲ್ ಉಪಸ್ಥಿತರಿದ್ದರು. ನ್ಯಾಕ್ ಸಂಚಾಲಕ ಕೃಷ್ಣ ಭಟ್ ಸ್ವಾಗತಿಸಿದರು. ವಾಣಿಜ್ಯ ವಿಬಾಗದ ಮುಖ್ಯಸ್ಥ ಗೌರಿ ಎಸ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಆರ್. ವಂದಿಸಿದರು. ವಿದ್ಯಾರ್ಥಿನಿ ವುಂಗಳಾ ಕಾರ್ಯಕ್ರಮ ನಿರೂಪಿಸಿದರು.
Next Story





