ಹೆಬ್ರಿ: ಮರಕ್ಕೆ ಕಾರು ಢಿಕ್ಕಿ; ಐವರಿಗೆ ಗಾಯ
ಹೆಬ್ರಿ, ಮಾ.4: ಕಾಡು ಪ್ರಾಣಿಯೊಂದು ಅಡ್ಡ ಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಐವರು ಗಾಯಗೊಂಡ ಘಟನೆ ಮಾ.3ರಂದು ಮುಂಜಾನೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಶಿವಮೊಗ್ಗದ ವಿನೋದ್ ಕುಮಾರ, ಆತನ ತಮ್ಮ ಕಿಶೋರ್ ಕುಮಾರ ಮತ್ತು ಅವರ ಪತ್ನಿ ವೀಣಾ ಮತ್ತು ಮಗಳು ಕೀರ್ತನಾ, ವೀಣಾಳ ತಾಯಿ ಬಾನು ಎಂದು ಗುರುತಿಸಲಾಗಿದೆ.
ನೊಂದಣೆಯಾಗದ ಹೊಸ ಬಲೇನೋ ಕಾರನ್ನು ಶಿವಮೊಗ್ಗದಿಂದ ಮಂಗಳೂರಿಗೆ ಆಗುಂಬೆ- ಉಡುಪಿ ಮುಖ್ಯ ರಸ್ತೆಯಲ್ಲಿ ವಿನೋದ್ ಕುಮಾರ ರವರು ಚಲಾಯಿಸಿಕೊಂಡು ಬರುತ್ತಿರುವಾಗ ಕಾಡು ಪ್ರಾಣಿ ಕಾರಿಗೆ ಅಡ್ಡ ಬಂದಿದೆ. ಇದರಿಂದ ಕಾರು ನಿಯಂತ್ರಣ ತಪ್ಪಿರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





