ಉಳ್ಳಾಲ: ಸಿಪಿಎಂ ಪೋಸ್ಟರ್ ಬಿಡುಗಡೆ

ಮಂಗಳೂರು, ಮಾ.4: ಮಂಗಳೂರು ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ನಿತಿನ್ ಕುತ್ತಾರ್‌ರ ಚುನಾವಣಾ ಪ್ರಚಾರದ ಭಾಗವಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ತೊಕ್ಕೊಟ್ಟಿನಲ್ಲಿ ನಡೆಯಿತು.
ಈ ಸಂದರ್ಭ ನ್ಯಾಯವಾದಿ ರಾಮಚಂದ್ರ ಬಬ್ಬುಕಟ್ಟೆ, ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪಸಾಲ್ಯಾನ್, ಹಿರಿಯ ಕಾರ್ಮಿಕ ಮುಖಂಡ ಆನಂದ ಬೆಳ್ಚಡ, ದಲಿತ ಮುಖಂಡ ನಾರಾಯಣ ತಲಪಾಡಿ, ಕಟ್ಟಡ ಕಾರ್ಮಿಕರ ಮುಖಂಡ ಜನಾರ್ದನ ಕುತ್ತಾರ್, ಬೀಡಿ ಕಾರ್ಮಿಕರ ಮುಖಂಡ ಯು. ಜಯಂತ ನಾಯ್ಕ್, ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಯುವ ಮುಂದಾಳು ಅರುಣ್ ಕುಮಾರ್, ಹರೀಶ್ ಕೆರೆಬೈಲು, ರೋಹಿದಾಸ್ ಭಟ್ನಗರ ಉಪಸ್ಥಿತರಿದ್ದರು.
Next Story





