ಐಸಿಸ್ ವಿರುದ್ಧ ಈಜಿಫ್ಟ್ ಸೇನೆಯ ಕಾರ್ಯಾಚರಣೆ: 10 ಉಗ್ರರ ಹತ್ಯೆ
ಕೈರೋ,ಮಾ.4: ಶಂಕಿತ ಐಸಿಸ್ ಉಗ್ರರ ವಿರುದ್ಧ ಈಜಿಪ್ಟ್ನ ಸಿನಾಯ್ ಪ್ರಾಂತದಲ್ಲಿ ಸೇನೆ ನಡೆಸಿದ ಬೃಹತ್ ಕಾರ್ಯಾಚರಣೆಯ ವೇಳೆ ಭುಗಿಲೆದ್ದ ಘರ್ಷಣೆಯಲ್ಲಿ ನಾಲ್ವರು ಯೋಧರು ಹಾಗೂ 10 ಮಂದಿ ಉಗ್ರರು ಮೃತಪಟ್ಟಿದ್ದಾರೆಂದು ಈಜಿಪ್ಟ್ ಸೇನೆ ರವಿವಾರ ತಿಳಿಸಿದೆ.
ಸಿನಾಯ್ ಪ್ರಾಂತದಲ್ಲಿ ಕಳೆದ ಫೆಬ್ರವರಿ 9ರಿಂದ ಸೇನಾ ಕಾರ್ಯಾಚರಣೆ ಆರಂಭಗೊಂಡಂದಿನಿಂದ ಕನಿಷ್ಠ 16 ಮಂದಿ ಸೈನಿಕರು ಹಾಗೂ 100ಕ್ಕೂ ಅಧಿಕ ಬಂಡುಕೋರರು ಮೃತಪಟ್ಟಿದ್ದಾರೆ. ಈಜಿಪ್ಟ್ ಅಧ್ಯಕ್ಷನಾಗಿ ಎರಡನೆ ಅವಧಿಗೆ ಪುನಾ ರಾಯ್ಕೆ ಕೋರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಬ್ದುಲ್ ಫತಹ್ ಅಲ್ ಸಿಸಿ ಅವರು ಸಿನಾಯ್ ಪ್ರಾಂತದಲ್ಲಿ ಐಸಿಸ್ನ್ನು ಸದೆಬಡಿಯಲು ಸೇನೆಗೆ ಮೂರು ತಿಂಗಳ ಗಡುವು ವಿಧಿಸಿದ ಬಳಿಕ ಈ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಕಳೆದ ನವೆಂಬರ್ನಲ್ಲಿ ಸಿನಾಯ್ ಪ್ರಾಂತದ ಮಸೀದಿಯೊಂದರಲ್ಲಿ ಶಂಕಿತ ಐಸಿಸ್ ಉಗ್ರರು 300ಕ್ಕೂ ಅಧಿಕ ನಾಗರಿಕರ ನರಮೇಧ ನಡೆಸಿದ ಘಟನೆಯ ಬಳಿಕ ಅಲ್ಸಿಸಿ ಈ ಗಡುವು ವಿಧಿಸಿದ್ದರು.
Next Story