Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ತಲ್ಲೂರು ಕಲಾಕೃತಿಗಳೆಡೆಗೆ ಹೀಗೊಂದು...

ತಲ್ಲೂರು ಕಲಾಕೃತಿಗಳೆಡೆಗೆ ಹೀಗೊಂದು ಪ್ರವೇಶ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ5 March 2018 12:17 AM IST
share
ತಲ್ಲೂರು ಕಲಾಕೃತಿಗಳೆಡೆಗೆ ಹೀಗೊಂದು ಪ್ರವೇಶ

ಆಧುನಿಕ ಕಲೆ ಮತ್ತು ಜನಸಾಮಾನ್ಯರ ನಡುವೆ ಒಂದು ಕಂದರ ಇನ್ನೂ ಬಿದ್ದುಕೊಂಡಿದೆ. ಕಾವ್ಯ, ಸಾಹಿತ್ಯದಂತಹ ಸೃಜನಶೀಲ ಪ್ರಕಾರಗಳು ಜನಸಾಮಾನ್ಯರನ್ನು ತಲುಪಿದಷ್ಟು ಪರಿಣಾಮಕಾರಿಯಾಗಿ ಚಿತ್ರಕತೆ ಜನರನ್ನು ತಲುಪಿರುವುದು ಕಡಿಮೆ. ಇಂದಿಗೂ ಮಾಧ್ಯಮಗಳಲ್ಲಿ ‘ಕಲೆ’ ನೆಪವಾಗಿಯಷ್ಟೇ ಬಳಕೆಯಾಗುತ್ತಿದೆ. ಕವಿತೆ, ಕತೆಗಳಿಗೆ ಪೂರಕವಾದ ಅಗತ್ಯಗಳನ್ನಷ್ಟೇ ಕಲಾವಿದರಿಂದ ಮಾಧ್ಯಮಗಳು ನಿರೀಕ್ಷೆ ಮಾಡುತ್ತವೆ. ಕಲಾವಿದ ರವಿವರ್ಮನೇ ಬಹುಶಃ ಕಲೆಯನ್ನು ಜನರ ಮನೆಬಾಗಿಲಿಗೆ ಒಯ್ದ ಪ್ರಮುಖನಿರಬೇಕು. ಅವನು ಒಯ್ದ್ದದ್ದು ಕಲೆಯನ್ನಲ್ಲ. ಆ ವರೆಗೆ ದೇವಸ್ಥಾನಗಳ ಗರ್ಭ ಗುಡಿಯೊಳಗೆ ಭದ್ರವಾಗಿದ್ದ ದೇವರುಗಳನ್ನು. ಆದುದರಿಂದಲೇ ತಳಮಟ್ಟದ ಜನರು ಅದನ್ನು ಮುಗಿಬಿದ್ದು ಸ್ವೀಕರಿಸಿದರು. ಇದಾದ ಬಳಿಕ ಭಾರತೀಯ ಕಲಾಕೃತಿಗಳಲ್ಲಿ ಬಹಳಷ್ಟು ಕ್ರಾಂತಿಕಾರಿ ಪ್ರಯೋಗಗಳು ನಡೆದಿವೆಯಾದರೂ ಎಮ್. ಎಫ್. ಹುಸೈನ್‌ನಂತಹ ಕೆಲವು ಹೆಸರುಗಳಷ್ಟೇ ಮಾಧ್ಯಮಗಳಲ್ಲಿ ಸುದ್ದಿಯಾದವು. ಕರ್ನಾಟಕದ ಶ್ರೇಷ್ಠ ಕಲಾವಿದ ಕೆ. ಕೆ. ಹೆಬ್ಬಾರ್ ಅವರು ಮುಂಬೈಗೆ ತೆರಳಿ ಹೆಸರು ಮಾಡಿದರು. ಕರ್ನಾಟಕದಲ್ಲಿ ನಾವಿಂದು ಈ ಹೆಸರನ್ನು ಮರೆತೇ ಬಿಟ್ಟಿದ್ದೇವೆ. ಹೀಗಿರುವಾಗ ಆಧುನಿಕ ಪ್ರಯೋಗಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಕಲಾವಿದರ ಕತೆಯಂತೂ ದೂರವೇ ಉಳಿಯಿತು. ಇಂತಹ ಸಂದರ್ಭದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸಮಕಾಲೀನ ಕಲಾ ಜಗತ್ತಿನಲ್ಲಿ ಪ್ರಮುಖ ಪ್ರಾಕ್ಟೀಶನರ್‌ಗಳಲ್ಲಿ ಒಬ್ಬರೆಂದು ಗುರುತಾಗಿರುವ ಕಲಾವಿದ ತಲ್ಲೂರು ಎಲ್. ಎನ್. ಅವರನ್ನು ಕನ್ನಡದಲ್ಲಿ ಪರಿಚಯಿಸುವ ಅಪರೂಪದ ಪ್ರಯತ್ನವೊಂದನ್ನು ರಾಜಾರಾಂ ತಲ್ಲೂರು ಅವರು ಮಾಡಿದ್ದಾರೆ. ಎಲ್. ಎನ್. ತಲ್ಲೂರು ಅವರು ರಾಜಾರಾಂ ತಲ್ಲೂರು ಅವರ ಸೋದರ. ಅವರ ಕಲಾಕೃತಿಗಳ ಪರಿಚಯ ವಿಮರ್ಶೆಗಳನ್ನು ‘ತಲ್ಲೂರು ಎಲ್. ಎನ್.’ ಎಂಬ ಹೆಸರಿನಲ್ಲಿ ರಾಜಾರಾಂ ಅವರು ಸಂಪಾದಿಸಿದ್ದಾರೆ.
ಜಾಗತಿಕವಾಗಿ ಸಮಕಾಲೀನ ಕಲೆಯಲ್ಲಿ ಭಾರತದ ಹೆಸರು ಬಂದಾಗಲೆಲ್ಲ ಉಲ್ಲೇಖ ಆಗುವ ಪ್ರಮುಖ 10-15 ಹೆಸರುಗಳಲ್ಲಿ ತಲ್ಲೂರು ಎಲ್. ಎನ್. ಅವರದೂ ಒಂದು. ಆದರೆ ವಿಲಕ್ಷಣವಾಗಿ ಕನ್ನಡದಲ್ಲಿ ಕರ್ನಾಟಕದಲ್ಲಿ ತಲ್ಲೂರು ಎಲ್. ಎನ್. ಚಾಲ್ತಿಯಲ್ಲಿ ಇಲ್ಲವೇ ಇಲ್ಲ. ಆ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಕನ್ನಡದಲ್ಲೇ ತಲ್ಲೂರು ಎಲ್. ಎನ್. ಮತ್ತವರ ಕಲಾಕೃತಿಗಳನ್ನು ಪರಿಚಯಿಸುವುದು ಈ ಕೃತಿಯ ಉದ್ದೇಶ ಎಂದು ಸಂಪಾದಕರೇ ಹೇಳಿಕೊಂಡಿದ್ದಾರೆ. ಅವರ ಬದುಕು-ಕೃತಿಗಳನ್ನು ಸಮೀಪದಿಂದ ನೋಡುವ ಮತ್ತು ಆಧುನಿಕ ಸಮಕಾಲೀನ ಇನ್‌ಸ್ಟಾಲೇಶನ್ ಕಲಾಕೃತಿಗಳ ಕುರಿತಾದ ಚರ್ಚೆಗಳು ಹಾಗೂ ವಿಮರ್ಶೆಗಳಿಗೆ ಕನ್ನಡದಲ್ಲಿ ಸರಳವಾಗಿ ಸಂವಾದಿಯಾಗಬಹುದಾದ ಭಾಷೆಯೊಂದನ್ನು ರೂಢಿಸುವ ಉದ್ದೇಶಪೂರ್ವಕ ಪ್ರಯತ್ನವೂ ಹೌದು ಎಂದು ಅವರು ಹೇಳಿಕೊಳ್ಳುತ್ತಾರೆ.

 ಕೃತಿಯಲ್ಲಿ ನಾಲ್ಕು ಪ್ರಮುಖ ಲೇಖನಗಳಿವೆ. ‘ತಲ್ಲೂರು ಎಲ್. ಎನ್. ಅವರ ವ್ಯಾಪಕೀಕರಣದ ಪ್ರಯತ್ನಗಳು’ ಬರಹವನ್ನು ಪೀಟರ್ ನ್ಯಾಗಿ ಅವರು ಬರೆದಿದ್ದಾರೆ. ಕಲಾವಿದ ಕಲಾವಿಮರ್ಶಕ ಮತ್ತು ಕಲಾಗ್ಯಾಲರಿ ಮಾಲಕರೂ ಆಗಿರುವ ಪೀಟರ್ ನ್ಯಾಗಿ ಅಮೆರಿಕ ಮೂಲದವರು. ‘ಕ್ರೊಮ್ಯಾಟೋಫೋಬಿಯಾ ಕೆಟಲಾಗಿಗಾಗಿ 2011ರಲ್ಲಿ ಅವರು ಬರೆದ ಲೇಖನದ ಕನ್ನಡ ಅನುವಾದವನ್ನು ಇಲ್ಲಿ ಕೊಡಲಾಗಿದೆ. ತಲ್ಲೂರು ಅವರ ಕಲಾಕೃತಿಗಳು ಮೂಲತಃ ಸಾಂಪ್ರದಾಯಿಕ ಮಾಡೆಲಿಂಗ್, ಕೆತ್ತನೆ, ಎರಕದಂತಹ ವೈವಿಧ್ಯಮಯ ರೂಪದಲ್ಲಿವೆಯಾದರೂ, ಜೋಡಣೆಯಲ್ಲಿ, ತನ್ನ ಅಗತ್ಯಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವಲ್ಲಿ, ಮೂಲಭೂತವಾಗಿ ವಿಭಿನ್ನ ಅನ್ನಿಸುತ್ತವೆ. ಈ ಬಹುಮುಖಿ ಸವಲತ್ತಿನ ಕಾರಣದಿಂದಾಗಿಯೇ ಪುರಾತನ ಮತ್ತು ಸಮಕಾಲೀನ ಇಕ್ಕಟ್ಟುಗಳೆರಡನ್ನೂ ಏಕಕಾಲದಲ್ಲಿ ಕೆದಕಿ ನೋಡಲು ಈ ಕಲಾವಿದನಿಗೆ ಸಾಧ್ಯವಾಗುತ್ತದೆ ಎಂದು ನ್ಯಾಗಿ ಅಭಿಪ್ರಾಯಪಡುತ್ತಾರೆ. ‘ತಲ್ಲೂರು ಅವರ ಆಡಾಡ್ತಾ ಸಿನಿಸಿಸಂ’ ಕುರಿತು ಫಾಯ್ ಹರ್ಷ್ ಬರೆದಿದ್ದಾರೆ. ‘ಆರ್ಟ್ ಇನ್ ಅಮೆರಿಕಾ’ ಕಲಾ ಜರ್ನಲ್‌ನ ಹಿರಿಯ ಸಂಪಾದಕಿಯಾಗಿರುವ ಹರ್ಷ್, ತಲ್ಲೂರು ಅವರ ಕಲಾಕೃತಿಗಳನ್ನು ವಿಮರ್ಶಿಸುತ್ತಾ, ಅದರಲ್ಲಿರುವ ಕೌಶಲ ಮತ್ತು ಕುಶಲಕರ್ಮಿಗಳ ಸುಂದರ ಕಸುಬುದಾರಿಕೆಯನ್ನು ಗುರುತಿಸುತ್ತಾರೆ. ಕಾಣೆಯಾಗುತ್ತಿರುವ ಭಾರತವನ್ನು ತಲ್ಲೂರು ಕಲಾಕೃತಿಗಳಲ್ಲಿ ಗುರುತಿಸಬಹುದು ಎಂದು ಅಭಿಪ್ರಾಯಪಡುತ್ತಾರೆ. ಅವರ ಕಲಾಕೃತಿ ಸೌಂದರ್ಯದಾಚೆಗೆ ಬಿಚ್ಚಿ ತೋರುವ ಹಲವು ಪದರಗಳನ್ನು ತಮ್ಮ ಬರಹಗಳಲ್ಲಿ ತೆರೆದಿಡುತ್ತಾರೆ. ತಲ್ಲೂರು ಎಲ್. ಎನ್. ಅವರ ‘ಕೇಸುಗಳು’ ಕುರಿತಂತೆ ಡಾ. ಹೋಲಿ ಷಾಫರ್ ಬರೆದಿದ್ದಾರೆ. ಕಲಾ ವಿದ್ವಾಂಸರಾಗಿರುವ ಹೊಲಿ ಷಾಫರ್, ಅವರ ವಿವಿಧ ಕಲಾಕೃತಿಗಳ ಹಿನ್ನೆಲೆಗಳನ್ನು ವಿಶ್ಲೇಷಿಸುತ್ತಾರೆ. ಈ ಮೂರು ಲೇಖನಗಳನ್ನು ತಲ್ಲೂರು ಅವರ ಕಲಾಕೃತಿಗಳ ಜೊತೆಗೆ ಒಂದು ದಾರದಲ್ಲಿ ಪೋಣಿಸುವ ಕೆಲಸವನ್ನು ಕೃತಿಯ ಸಂಪಾದಕರಾದ ರಾಜಾಾಂ ತಲ್ಲೂರು ಅವರು ಮಾಡುತ್ತಾರೆ.
 
ಎಲ್. ಎನ್. ತಲ್ಲೂರು ಅವರ ಕಲಾಕೃತಿಗಳಿಗೆ ಪ್ರವೇಶ ಮಾಡಬೇಕಾದರೆ ನಮಗೆ ಪೂರ್ವ ತಯಾರಿಯೊಂದರ ಅಗತ್ಯ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ, ಇಲ್ಲಿರುವ ವಿಮರ್ಶಾ ಬರಹಗಳನ್ನು ಓದಿದ ಬಳಿಕ ತಲ್ಲೂರು ಕೃತಿಗಳಿಗೆ ಮುಖಾಮುಖಿಯಾದಾಗ ಅದು ನಮಗೆ ಕೊಡುವ ಅನುಭವ ಭಿನ್ನವಾದುದು ಮತ್ತು ಎಲ್ಲಾ ಚೌಕಟ್ಟುಗಳನ್ನು ಮೀರಿದ್ದಾಗಿರುತ್ತದೆ. ಇಡೀ ಕೃತಿಯಲ್ಲಿ ತಲ್ಲೂರು ಅವರ ಅಪರೂಪದ ಕಲಾಕೃತಿಗಳ ಚಿತ್ರಗಳಿವೆ. ಮತ್ತು ಅದರ ಕುರಿತು ಸಣ್ಣ ಟಿಪ್ಪಣಿಗಳೂ ಇವೆ. ಪ್ರೊ-ಡಿಜಿ ಮುದ್ರಣ ಈ ಕೃತಿಯನ್ನು ಹೊರತಂದಿದೆ. 132 ಪುಟಗಳ ಈ ಅದ್ದೂರಿ ಕೃತಿಯ ಮುಖಬೆಲೆ 500 ರೂಪಾಯಿ. ಒಂದು ಆರ್ಟ್ ಗ್ಯಾಲರಿಯೊಳಗೆ ಹೋಗಿ ಬಂದ ಅನುಭವ ನಿಮಗೆ ಈ ಕೃತಿ ಕೊಡಬಲ್ಲುದು.

share
-ಕಾರುಣ್ಯಾ
-ಕಾರುಣ್ಯಾ
Next Story
X