Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ...

ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಪೌಷ್ಟಿಕಾಂಶಗಳು ನಷ್ಟವಾಗುತ್ತವೆಯೇ?

ವಾರ್ತಾಭಾರತಿವಾರ್ತಾಭಾರತಿ6 March 2018 4:19 PM IST
share
ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಪೌಷ್ಟಿಕಾಂಶಗಳು ನಷ್ಟವಾಗುತ್ತವೆಯೇ?

ಶತಮಾನಗಳಿಂದಲೂ ಬಳಕೆಯಾಗುತ್ತಿರುವ ತೆಂಗಿನೆಣ್ಣೆ ಹಲವಾರು ಆರೋಗ್ಯಲಾಭ ಗಳನ್ನು ನೀಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತೆಂಗಿನೆಣ್ಣೆ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಲವಾರು ಕಾಯಿಲೆಗಳಿಗೂ ಮನೆಮದ್ದಾಗಿ ಅದು ಬಳಕೆಯಾಗುತ್ತಿದೆ.

ಮಾನವ ಬಾಲ್ಯದಿಂದಲೇ ತೆಂಗಿನೆಣ್ಣೆಯನ್ನು ಹಲವಾರು ವಿಧಗಳಲ್ಲಿ ಬಳಸುತ್ತ ಬೆಳೆಯುತ್ತಾನೆ. ಶಿಶುಗಳಿಗೆ ತೆಂಗಿನೆಣ್ಣೆಯಿಂದ ಮಾಲೀಸ್ ಮಾಡಿದ ನಂತರವೇ ಬಿಸಿನೀರಿನ ಸ್ನಾನ ಮಾಡಿಸುತ್ತಾರೆ. ಚರ್ಮದಲ್ಲಿನ ದದ್ದುಗಳು, ಸೋಂಕುಗಳ ನಿವಾರಣೆ ಯಲ್ಲಿಯೂ ಅದು ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಮಾಂಸಖಂಡಗಳ ನೋವು, ಶರೀರದ ಇತರ ಭಾಗಗಳಲ್ಲಿಯ ನೋವನ್ನೂ ಅದು ನಿವಾರಿಸುತ್ತದೆ.

ತೈಲವನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆ. ಎಣ್ಣೆ ಬಿಸಿಯಾದಾಗ ಅದರಲ್ಲಿಯ ಪ್ರಮುಖ ಅಂಶವಾದ ಕೊಬ್ಬು ನಷ್ಟವಾಗುತ್ತದೆ. ಹೀಗಾಗಿ ಅಡುಗೆಗೆ ಬಳಸಲು ಸೂಕ್ತವಾದ ಖಾದ್ಯತೈಲವನ್ನು ಗುರುತಿಸುವುದು ಮುಖ್ಯವಾಗಿದೆ.

ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್‌ಗಳಿರುವ ಎಣ್ಣೆಯನ್ನು ಬಿಸಿ ಮಾಡಿದಾಗ ಅವು ಸೇವಿಸಲು ಸೂಕ್ತವಲ್ಲ, ಹೀಗಾಗಿ ಅಂತಹ ಎಣ್ಣೆಯನ್ನು ಅಡುಗೆಗೆ ಬಳಸಲೇಬಾರದು. ಆದರೆ ತೆಂಗಿನೆಣ್ಣೆಯು ಅಡುಗೆಗೆ ಬಳಸಲು ಅತ್ಯುತ್ತಮ ಎಣ್ಣೆಯಾಗಿದೆ. ಇದಕ್ಕೆ ಕಾರಣವೇನೆಂದರೆ ತೆಂಗಿನೆಣ್ಣೆಯು ಮುಖ್ಯವಾಗಿ ಕೊಬ್ಬನ್ನು ಹೊಂದಿದೆ ಮತ್ತು ಅದನ್ನು ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸಿದಾಗ ಅದು ಶಕ್ತಿಯುತವಾಗುತ್ತದೆ ಮತ್ತು ಅದರಲ್ಲಿಯ ಲಾಭಕರ ಅಂಶಗಳು ಕಡಿಮೆಯಾಗುವುದಿಲ್ಲ.

ಕೆಲವು ತೈಲಗಳನ್ನು ಕಾಯಿಸಿದಾಗ ಅವು ತಮ್ಮಲ್ಲಿರುವ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುತ್ತವೆ. ಅವುಗಳಲ್ಲಿಯ ಕೊಬ್ಬು ವಿಭಜನೆಗೊಂಡು ಹಾನಿಕಾರಕ ರ್ಯಾಡಿಕಲ್ ಗಳು ಉತ್ಪತ್ತಿಯಾಗುವುದು ಇದಕ್ಕೆ ಕಾರಣವಾಗಿದೆ. ಇಂತಹ ಎಣ್ಣೆಯನ್ನು ಅಡುಗೆಗೆ ಬಳಸಿದಾಗ ಅದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದರೆ ತೆಂಗಿನೆಣ್ಣೆ ಬಳಸಿದಾಗಿ ಇಂತಹ ತಾಪತ್ರಯಗಳಿರುವುದಿಲ್ಲ. ಅದು ತನ್ನಲ್ಲಿಯ ಪೌಷ್ಟಿಕಾಂಶಗಳನು ಕಳೆದುಕೊಳ್ಳುವುದಿಲ್ಲ. ಹೀಗಾಗಿಯೇ ಅದನ್ನು ಅಡುಗೆಗೆ ಅತ್ಯಂತ ಸೂಕ್ತವಾದ ಎಣ್ಣೆ ಎಂದು ಪರಿಗಣಿಸಲಾಗಿದೆ.

ತೆಂಗಿನೆಣ್ಣೆಯ ಆರೋಗ್ಯಲಾಭಗಳು

ಹೃದಯ, ಮಿದುಳು ಮತ್ತು ಸಂದುಗಳ ಕಾಯಿಲೆಗಳನ್ನು ಗುಣಪಡಿಸುವಲ್ಲಿ ತೆಂಗಿನೆಣ್ಣೆ ಪರಿಣಾಮಕಾರಿಯಾಗಿದೆ. ಅದನ್ನು ಬಳಸುವುದರಿಂದ ಕೆಲವು ಪ್ರಮುಖ ಕಾಯಿಲೆಗಳು ಗುಣವಾಗುತ್ತವೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರಿರುವ ಮನೆಗಳಲ್ಲಿ ತೆಂಗಿನೆಣ್ಣೆಯೇ ಪ್ರಧಾನವಾಗಿದೆ. ನಮ್ಮ ಯಕೃತ್ತು ತೆಂಗಿನೆಣ್ಣೆಯನ್ನು ಸುಲಭವಾಗಿ ಸಂಸ್ಕರಿಸುತ್ತದೆ ಮತ್ತು ತೆಂಗಿನೆಣ್ಣೆಯನ್ನು ಬಳಸಿ ಮಾಡಿದ ಆಹಾರಗಳು ಸುಲಭವಾಗಿ ಜೀರ್ಣಗೊಳ್ಳುತ್ತವೆ. ಅಡುಗೆಯಲ್ಲಿ ತೆಂಗಿನೆಣ್ಣೆಯ ಬಳಕೆ ಅಧಿಕ ರಕ್ತದೊತ್ತಡದಿಂದ ಬಳಲುವ ರೋಗಿಗಳಗೆ ಪ್ರಯೋಜನಕಾರಿಯಾಗಿದೆ. ಮೂತ್ರನಾಳ ಸೋಂಕುಗಳು ಮತ್ತು ಮೂತ್ರಪಿಂಡ ಸಂಬಂಧಿ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿಯೂ ತೆಂಗಿನೆಣ್ಣೆಯು ನೆರವಾಗುತ್ತದೆ. ತೆಂಗಿನೆಣ್ಣೆಯನ್ನು ಸಂದುಗಳಿಗೆ ಲೇಪಿಸುವುದರಿಂದ ಸಂಧಿವಾತದಿಂದ ಉಪಶಮನವನ್ನು ಪಡೆಯಬಹು ದಾಗಿದೆ.

 ತೆಂಗಿನೆಣ್ಣೆಯನ್ನು ಅಡುಗೆಗೆ ಬಳಸುವಾಗಿ ಈ ವಿಷಯ ಗಮನದಲ್ಲಿರಲಿ. ತೆಂಗಿನೆಣ್ಣೆ ಅತ್ಯುತ್ತಮ ಆರೋಗ್ಯಲಾಭಗಳನ್ನು ನೀಡುವ ಖಾದ್ಯತೈಲವಾಗಿದ್ದರೂ ಇತರ ಎಣ್ಣೆಗಳಂತೆ ಅದರ ‘ಸ್ಮೋಕ್ ಪಾಯಿಂಟ್’ನ್ನು ಮೀರಿ ಅದನ್ನು ಕಾಯಿಸಬಾರದು. ತೆಂಗಿನೆಣ್ಣೆಯನ್ನು ಬಿಸಿ ಮಾಡುವಾಗ ಸ್ಟವ್‌ನ ಬೆಂಕಿಯು ಕನಿಷ್ಠ ಮಟ್ಟದಲ್ಲಿರಬೇಕು ಮತ್ತು ಅದು ಹೊಗೆಯಾಡದಂತೆ ನಿಗಾ ಇರಿಸಬೇಕು. ಅಲ್ಲದೆ ತೆಂಗಿನೆಣ್ಣೆಯು ಅಧಿಕ ಫ್ಯಾಟ್ ಮತ್ತು ಕ್ಯಾಲರಿಗಳನ್ನು ಒಳಗೊಂಡಿರುವುದರಿಂದ ವ್ಯಕ್ತಿಯ ‘ಫಿಟ್‌ನೆಸ್’ನ್ನು ಪರಿಗಣಿಸಿ ಅದನ್ನು ಮಿತವಾದ ಪ್ರಮಾಣದಲ್ಲಿ ಬಳಸುವುದು ಉತ್ತಮ.

ತೆಂಗಿನೆಣ್ಣೆಯು ಹೆಚ್ಚಿನ ಉಷ್ಣತೆಯಲ್ಲಿಯೂ ತನ್ನ ಸತ್ವವನ್ನು ಕಳೆದುಕೊಳ್ಳುವುದಿಲ್ಲ ವಾದ್ದರಿಂದ ಕರಿದ ಖಾದ್ಯಗಳನ್ನು ತಯಾರಿಸಲು ಅದು ಸೂಕ್ತ ಎಣ್ಣೆಯಾಗಿದೆ. ದೇಹದ ತೂಕವನ್ನು ಕಡಿಮೆ ಮಾಡಲು ಅಡುಗೆಯಲ್ಲಿ ತೆಂಗಿನೆಣ್ಣೆಯ ಬಳಕೆಯು ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ.

ಅಡುಗೆ ಎಣ್ಣೆಯಾಗಿ ಬಳಕೆಯಾಗುವ ಜೊತೆಗೆ ತೆಂಗಿನೆಣ್ಣೆಯು ಹಲವಾರು ಆರೋಗ್ಯ ಲಾಭಗಳನ್ನೂ ಹೊಂದಿದೆ. ಅದರಿಂದ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮವನ್ನು ಆರ್ದ್ರಗೊಳಿಸುತ್ತದೆ ಮತ್ತು ಒಣಚರ್ಮದ ಕಿರಿಕಿರಿಯಿರುವುದಿಲ್ಲ. ತಲೆಗೂದಲಿಗೆ ತೆಂಗಿನೆಣ್ಣೆಯನ್ನು ಹಚ್ಚುವುದರಿಂದ ಅದು ದಟ್ಟವಾಗಿ ಬೆಳೆಯುವ ಜೊತೆಗೆ ಆರೋಗ್ಯ ಯುತವಾಗಿರುತ್ತದೆ. ಅದು ತಲೆಗೂದಲು ಉದುರುವುದನ್ನೂ ಕಡಿಮೆ ಮಾಡುತ್ತದೆ. ವಿಶೇಷವಾಗಿ ಅನಾರೋಗ್ಯ ಪೀಡಿತರಾಗಿದ್ದಾಗ ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಅದು ಶರೀರಕ್ಕೆ ಶಕ್ತಿಯನ್ನು ನೀಡುತ್ತದೆ.

ತೆಂಗಿನೆಣ್ಣೆಯು ನಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಪಾಶ್ಚಾತ್ಯ ದೇಶಗಳಲ್ಲಿಯೂ ಅದರ ಸೇವನೆಯನ್ನು ಶಿಫಾರಸು ಮಾಡಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X