ಹಾದಿಯಾ ಮುಸ್ಲಿಮ್ ಆಗಿ ಬದುಕುವುದಕ್ಕೆ ತನ್ನ ವಿರೋಧವಿಲ್ಲ - ತಂದೆ ಅಶೋಕನ್

ಹೊಸದಿಲ್ಲಿ,ಮಾ.6: ಹಾದಿಯಾ ಮುಸ್ಲಿಮ್ ಆಗಿ ಬದುಕುವುದರಲ್ಲಿ ತನಗೆ ಯಾವ ವಿರೋಧವೂ ಇಲ್ಲ ಎಂದು ತಂದೆ ಅಶೋಕನ್ ಸುಪ್ರೀಂಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿದ್ದಾರೆ. ತನ್ನ ಪತ್ನಿ ಓರ್ವ ಹಿಂದೂ ಧರ್ಮ ವಿಶ್ವಾಸಿ. ಆದರೆ ತಾನು ನಾಸ್ತಿಕವಾದಿ, ಮಗಳು ಇಸ್ಲಾಮಿನಲ್ಲಿ ವಿಶ್ವಾಸವಿರಿಸುವುದರಲ್ಲಿ ತನಗೆ ವಿರೋಧವಿಲ್ಲ. ಆದರೆ, ಮಗಳನ್ನು ಭಯೋತ್ಪಾದಕರ ಹಿಡಿತದಿಂದ ಪಾರುಗೊಳಿಸಬೇಕಾಗಿದೆ ಎಂದು ಅಶೋಕನ್ ಅಫಿದಾವಿತ್‍ನಲ್ಲಿ ವಿನಂತಿಸಿದ್ದಾರೆ.
ಇದೇ ವೇಳೆ ಯಮನ್‍ಗೆ ಅಪಹರಿಸಿ ಹಾದಿಯಾರನ್ನು ಲೈಂಗಿಕ ಗುಲಾಮರನ್ನಾಗಿಸುವ ಯತ್ನ ನಡೆಯುತ್ತಿದೆ ಎಂದು ಅಶೋಕನ್ ಆರೋಪಿಸಿದ್ದಾರೆ.
ಹಾದಿಯಾ ಪ್ರಕರಣದಲ್ಲಿ ಎನ್‍ಐಎ ಸಲ್ಲಿಸಿರುವ ತನಿಖಾ ವರದಿಯನ್ನು ಸುಪ್ರೀಂಕೋರ್ಟು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಅಶೋಕನ್ ಆಗ್ರಹಿಸಿದರು. ಪ್ರಕರಣ ಗುರುವಾರ ಮತ್ತೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.
Next Story





