ಸಂಶೋಧನಾ ಲೇಖನ ತಯಾರಿ ಕುರಿತು ತರಬೇತಿ

ಉಡುಪಿ, ಮಾ.6: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿಯ ಜಂಟಿ ಸಹಯೋಗದಲ್ಲಿ ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನಾ ಲೇಖನ ತಯಾರಿಸುವ ಕುರಿತ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರಿನ ಪ್ರೈಮಸಿ ಇಂಡಸ್ಟ್ರೀಸ್ ನ ಹಿರಿಯ ಮ್ಯಾನೇಜರ್ ಶಿವಪ್ರಸಾದ್ ಕೆ. ಮತ್ತು ಕಾಲೇಜಿನ ಸ್ನಾತಕೋತ್ತರ ವಿಭಾಗದ ಡಾ.ಉಮೇಶ್ ಮಯ್ಯ ಸಂಶೋಧನಾ ಲೇಖನ ತಯಾರಿಸುವ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ವಹಿಸಿ ದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಪ್ರಸಾದ್ ಕೆ., ಐಕ್ಯೂಎಸಿಯ ಡಾ.ಗುರುರಾಜ ಪ್ರಭು ಉಪಸ್ಥಿತರಿದ್ದರು. ಶರಣ್ಯ ಸ್ವಾಗತಿಸಿ ದರು. ಅಕ್ಷತಾ ಕಾಮತ್ ವಂದಿಸಿದರು. ಅಂತಿಮ ಎಂಕಾಂನ ಐಶ್ವರ್ಯ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.
Next Story





