ತುಳುಕೂಟದ ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿ ಹಸ್ತಪ್ರತಿ ಆಹ್ವಾನ
ಉಡುಪಿ, ಮಾ.6: ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಪ್ರತಿ ವರ್ಷ ಏರ್ಪಡಿಸುತ್ತಿರುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗಾಗಿ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ತುಳುಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯ ದಲ್ಲಿ ತುಳು ಚಳವಳಿಯ ಪ್ರವರ್ತಕರಾದ ದಿ.ಎಸ್.ಯು.ಪಣಿಯಾಡಿ ನೆನಪಿ ನಲ್ಲಿ ನೀಡುತ್ತಿರುವ ಈ ಪ್ರಶಸ್ತಿಗೆ ತುಳು ಲೇಖಕರಿಂದ ಹಸ್ತಪ್ರ ತಿಗಳನ್ನು ಸ್ವೀಕರಿಸಲಾಗುವುದು.
ನಿಬಂಧನೆಗಳು: ಹಸ್ತಪ್ರತಿಗಳು ತುಳು ಕಾದಂಬರಿಯದ್ದಾಗಿರಬೇಕು. ಈ ವರೆಗೆ ಯಾವುದೇ ಬಹುಮಾನಗಳಿಗೆ ಆಯ್ಕೆಯಾಗಿರಬಾರದು ಹಾಗೂ ಎಲ್ಲೂ ಮುದ್ರಿತವಾಗಿರಬಾರದು. ಹಸ್ತಪ್ರತಿ ಪ್ರಶಸ್ತಿಗೆ ಆಯ್ಕೆಯಾದರೆ ಮುದ್ರಿಸುವಾಗ ಕ್ರೌನ್ 1/8 ಆಕಾರದಲ್ಲಿ 120 ಪುಟಗಳನ್ನು ಮೀರುವಷ್ಟು ಧೀಘರ್ವಾ ಗಿರಬೇಕು. ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿಟಿಪಿ) ರೂಪದಲ್ಲಿರಬಹುದು.
ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುಗಳನ್ನು ಆಧರಿಸಿರಬಹುದು. ಪ್ರಶಸ್ತಿಯು 8,000ರೂ. ನಗದು ಸಹಿತ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಹಸ್ತಪ್ರತಿಯನ್ನು ಮುಂದಿನ ಎ.15 ರೊಳಗೆ ತಲುಪುವಂತೆ ಪ್ರಕಾಶ ಸುವರ್ಣ ಕಟಪಾಡಿ, ಸಂಚಾಲಕರು, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಮಿತಿ, ಯಶಸ್, ಕೋಟೆಬೀಡಿನ ಬಳಿ ಕೋಟೆ ಗ್ರಾಮ, ಕಟಪಾಡಿ ಅಂಚೆ ಉಡುಪಿ ಜಿಲ್ಲೆ-574105 ಇಲ್ಲಿಗೆ ಕಳುಹಿಸಿ ಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9964019229, 9844532629ನ್ನು ಸಂಪರ್ಕಿಸುವಂತೆ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದ್ದಾರೆ.







