ಸುರತ್ಕಲ್ ಮಾರುಕಟ್ಟೆ ಹಗರಣ: ನಾಲ್ಕನೇ ದಿನ ಪೂರೈಸಿದ ಅನಿರ್ಧಿಷ್ಟ ಧರಣಿ
.jpeg)
ಸುರತ್ಕಲ್, ಮಾ. 6: ಸ್ಥಳಾಂತರಿತ ಮಾರುಕಟ್ಟೆ ಕಟ್ಟಡವನ್ನು ಒಡೆದು ಹಾಕಿರುವರ ಮೇಲೆ ಕ್ರಮಕ್ಕೆ ಒತ್ತಾಯಿಸಿ, ಮಾರುಕಟ್ಟೆ ಅಂಗಡಿ ವಿತರಣೆಯಲ್ಲಿ ನಿಯಮ ಪಾಲಿಸುವಂತೆ ಆಗ್ರಹಿಸಿ, ಮಾರುಕಟ್ಟೆ ನಿರ್ಮಾಣ ಹಗರಣದ ತನಿಖೆಗಾಗಿ, ಹೊಸ ಮಾರುಕಟ್ಟೆ ಸಂಕೀರ್ಣದಲ್ಲಿ ಮೂಲ ವ್ಯಾಪಾರಸ್ಥರಿಗೆ ಆದ್ಯತೆ ನೀಡಲು ಆಗ್ರಹಿಸಿ ಡಿವೈಎಫ್ಐ ಸುರತ್ಕಲ್ ಘಟಕ ಮಾರುಕಟ್ಟೆಯ ಬಳಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಇಂದಿಗೆ ನಾಲ್ಕು ದಿನ ಪೂರೈಸಿತು.
ನಾಲ್ಕು ದಿನಗಳಿಂದ ಧರಣಿ ನಡೆಯುತ್ತಿದ್ದರೂ ಪಾಲಿಕೆ ಆಯುಕ್ತ ಒಡೆದು ಹಾಕಿರುವ ಕಟ್ಟಡ ನಿರ್ಮಿಸದೆ, ಲಾಬಿಕೋರರ ಹಿತಕಾಯುತ್ತಿರುವ ಕುರಿತು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಬೈಕಂಪಾಡಿ ನಾಗರಿಕ ಹೋರಾಟ ಸಮಿತಿ ಮುಖಂಡ ಮಯ್ಯದ್ದಿ ಅಂಗರಗುಂಡಿ, ಮುಹಮ್ಮದಾಲಿ ಬದವಿದೆ, ಆಪಧ್ಭಾಂದವ ಸೇವಾ ಸಮಿತಿಯ ಉಮೇಶ್ ದೇವಾಡಿಗ, ಪ್ರಜ್ವಲ್ ಕಡಂಬೋಡಿ ಧರಣಿ ಸ್ಥಳಕ್ಕೆ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಡಿವೈಎಫ್ಐಯ ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಝ್, ಶ್ರೀನಿವಾಸ ಹೊಸಬೆಟ್ಟು, ದೀಕ್ಷಿತ್ ಶೆಟ್ಟಿ, ಚೆರಿಯೋನು, ಅಶ್ರಫ್ ಜನತಾ ಕಾಲನಿ, ಮಕ್ಸೂದ್ ಬಿ ಕೆ, ಅಜ್ಮಲ್, ಉಮಾವತಿ, ಸುನೀತ, ಚಂದ್ರಾವತಿ, ಯಾದವ ಕೋಟ್ಯಾನ್, ಎಂ ಡಿ ಇಸ್ಮಾಯಿಲ್, ಪೆಲಿಕ್ಸ್ ನಜರತ್ ಧರಣಿಯ ನೇತೃತ್ವ ವಹಿಸಿದ್ದರು.







