ಕೆಪಿಸಿಸಿ ಮಾಧ್ಯಮ ಪ್ರಚಾರ ಸಮಿತಿ ಸಂಚಾಲಕರಾಗಿ ಎಂ.ರಾಮಚಂದ್ರಪ್ಪ ನೇಮಕ

ಬೆಂಗಳೂರು, ಮಾ. 6: ಕೆಪಿಸಿಸಿ ಮಾಧ್ಯಮ ಪ್ರಚಾರ ಸಮಿತಿ ಸಂಚಾಲಕರನ್ನಾಗಿ ಎಂ.ರಾಮಚಂದ್ರಪ್ಪ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕ ಮಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸಮಿತಿ ತಮಗೆ ನೀಡಿರುವ ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸೂಚನೆ ಹಾಗೂ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ಪಕ್ಷದ ಸುದ್ದಿಗಳು ಮಾಧ್ಯಮಗಳಲ್ಲಿ ಬರುವಂತೆ ಆಸ್ಥೆ ವಹಿಸಬೇಕೆಂದು ಶಿವಕುಮಾರ್ ಸೂಚನೆ ನೀಡಿದ್ದಾರೆ.
Next Story





