ಮಂಡ್ಯ: ಅಂತಿಮ ಮತದಾರರ ಪಟ್ಟಿ ಪ್ರಕಟ
ಮಂಡ್ಯ, ಮಾ.6: ಜಿಲ್ಲೆಯ ಏಳು ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ತಿಳಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿ ಫೆ.28 ರಂದು ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 7,32,527 ಪುರುಷರು ಹಾಗೂ 7,28,504 ಮಹಿಳೆಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಲೂಕುವಾರು ಮತದಾರರು:
ಮಳವಳ್ಳಿ ತಾಲೂಕಿನಲ್ಲಿ 1,18,857 ಪುರುಷರು ಹಾಗೂ 1,16,467 ಮಹಿಳೆಯರು ಸೇರಿ ಒಟ್ಟು 2,35,324 ಮತದಾರರು.
ಮದ್ದೂರು ತಾಲೂಕಿನಲ್ಲಿ 1,00,105 ಪುರುಷರು ಹಾಗೂ 1,02,221 ಮಹಿಳೆಯರು ಸೇರಿ 2,02,326 ಮತದಾರರು.
ಮೇಲುಕೋಟೆಯಲ್ಲಿ 96,813 ಪುರುಷರು ಹಾಗೂ 96,150 ಮಹಿಳೆಯರು ಸೇರಿ 1,92,963 ಮತದಾರರು.
ಮಂಡ್ಯ ತಾಲೂಕಿನಲ್ಲಿ 1,09,834 ಪುರುಷರು ಹಾಗೂ 1,11,721 ಮಹಿಳೆಯರು ಸೇರಿ 2,21,555 ಮತದಾರರು.
ಶ್ರೀರಂಗಪಟ್ಟಣ ತಾಲೂಕಿನಲ್ಲಿ 1,01,503 ಪುರುಷರು ಹಾಗೂ 1,02,556 ಮಹಿಳೆಯರು ಸೇರಿ 2,04,059 ಮತದಾರರು.
ನಾಗಮಂಗಲ ತಾಲೂಕಿನಲ್ಲಿ 1,02,776 ಪುರುಷರು ಹಾಗೂ 1,00,433 ಮಹಿಳೆಯರು ಸೇರಿ ಒಟ್ಟು 2,03,209 ಮತದಾರರು ಹಾಗೂ
ಕೆ.ಆರ್.ಪೇಟೆ ತಾಲೂಕಿನಲ್ಲಿ 1,02,639 ಪುರುಷರು ಹಾಗೂ 98,956 ಮಹಿಳೆಯರು ಸೇರಿ ಒಟ್ಟು 2,01,595 ಮತದಾರರು ಮತದಾನದ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.







