ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ
ರಾಜೌರಿ,ಮಾ.7: ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನವು ಮತ್ತೆ ಕದನ ವಿರಾಮವನ್ನು ಉಲ್ಲಂಘಿಸುವ ಮೂಲಕ ಉದ್ಧಟತನವನ್ನು ಮೆರೆದಿದೆ. ರಾಜೌರಿ ಜಿಲ್ಲೆಯ ಸುಂದರವನ ವಿಭಾಗದಲ್ಲಿಯ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಅದು ನಡೆಸಿದೆ.
ಬುಧವಾರ ಬೆಳಿಗ್ಗೆ ಪಾಕ್ ಸೈನಿಕರಿಂದ ಗುಂಡಿನ ದಾಳಿ ಆರಂಭಗೊಂಡಿದ್ದು, ಭಾರತೀಯ ಯೋಧರು ಪ್ರತಿದಾಳಿಯನ್ನು ನಡೆಸಿದ್ದಾರೆ.
ವಾರದ ಹಿಂದಷ್ಟೇ ರಾಜೌರಿ ವಿಭಾಗದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ್ದ ಪಾಕ್ ಪಡೆಗಳು ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯನ್ನುಂಟು ಮಾಡಿದ್ದವು.
Next Story