ಟ್ವೆಂಟಿ-20 ತ್ರಿಕೋನ ಸರಣಿ : ಭಾರತದ ಗೆಲುವಿಗೆ 140 ರನ್‌ಗಳ ಸವಾಲು

ಕೊಲಂಬೊ, ಮಾ.8: ಬಾಂಗ್ಲಾದೇಶ ವಿರುದ್ಧ ಟ್ವೆಂಟಿ-20 ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ ಗೆಲುವಿಗೆ 140 ರನ್‌ಗಳ ಸವಾಲು ಪಡೆದಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡ ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ.
ಲಿಟ್ಟನ್ ದಾಸ್(34), ಶಬೀರ್ ರಹ್ಮಾನ್ (30), ಮುಶ್ಫೀಕ್ರು ರಹೀಮ್(18), ತಮೀಮ್ ಇಕ್ಬಾಲ್(15) , ಸೌಮ್ಯ ಸರ್ಕಾರ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.
ನಾಯಕ ಮಹ್ಮುದುಲ್ಲಾ (1), ಮೆಹಿದಿ ಹಸನ್(3) , ತಸ್ಕೀನ್ ಅಹ್ಮದ್(8) ಮತ್ತು ಮುಸ್ತಾಫಿಝುರ್ರಹ್ಮಾನ್ (ಔಟಾಗದೆ 1) ಒಂದಂಕಿಯ ಕೊಡುಗೆ ನೀಡಿದರು.
ಭಾರತದ ಜಯದೇವ್ ಉನದ್ಕಟ್(38ಕ್ಕೆ 3) ಮೂರು ವಿಕೆಟ್ ಪಡೆದರು.
Next Story





